"ದೇಶೀಯ ಚಿಂತನೆಯಲ್ಲಿ ಕವಿರಾಜಮಾರ್ಗವನ್ನು ಮೀರಿಸುವ ಕ್ರುತಿ ವಿಶ್ವಸಾಹಿತ್ಯದಲ್ಲಿ ಇಲ್ಲ..."
ನೆನ್ನೆಯ ಸಾಪ್ತಾಹಿಕ ಪುರವಣಿಯಲ್ಲಿ ಲಕುಮಣ ಕೊಡಸೆಯವರ ಬರಹ ಬಂದಿದೆ. ಹಿರಿಗನ್ನಡದ/ಹೞೆಗನ್ನಡದ ಹೆಗ್ಗಲ್ಲಯ್ಯ/ಮಾಹನ್ ಪಂಡಿತ ಟಿ.ವಿ.ವೆಂಕಟಾಚಲ ಶಾಸ್ತ್ರಿಯವರ ಬಗ್ಗೆ. ಇದರಲ್ಲಿ ಕವಿರಾಜಮಾರ್ಗದ ಹೆಗ್ಗಳಿಕೆಯ ಬಗ್ಗೆ ಹೇಳಲಾಗಿದೆ. ಆ ಬರಹದ ತುಣುಕು ಇಲ್ಲಿದೆ.
"...ಆಶ್ಚರ್ಯವೆಂದರೆ ವಿದೇಶಿ ವಿದ್ವಾಂಸರಿಗೆ ಕನ್ನಡ ಪ್ರಾಚೀನ ಸಾಹಿತ್ಯ ಅದ್ಯಯನದ ಆಸಕ್ತಿಯಿದೆ. ಈಚೆಗಶ್ಟೆ ಸ್ವಿಟ್ಜರ್ಲೆಂಡಿನ ಸ್ಟೀಪನ್ ಎಂಬುವರು ನೇಮಿನಾತ ಪುರಾಣದ ಪಾಟವನ್ನು ತಮ್ಮಿಂದ ಕಲಿತು ಹೋದರು. ಅದನ್ನು ಅರ್ಥ ಮಾಡಿಕೊಂಡು ಇಂಗಲೀಸಿಗೆ ಅನುವಾದಿಸಿ ಪ್ರಕಟಿಸಿದ್ದಾರೆ ಕೂಡ. ಇನ್ನೊಬ್ಬ ವಿದೇಶಿ ವಿದ್ವಾಸ ಶಿಕಾಗೊ ವಿಶ್ವವಿದ್ಯಾಲಯದ ಸಂಸ್ಕ್ರುತ ಪ್ರಾದ್ಯಾಪಕ ಶೆಲ್ಡನ್ ಪೊಲಾಕ್ ಎಂಬುವರು 'ಕವಿರಾಜಮಾರ್ಗ', 'ಸೂಕ್ತಿಸುಧಾರ್ಣವ', 'ಪಂಪಬಾರತ'ಗಳನ್ನು ತಮ್ಮಿಂದ ಕಲಿತುಹೋಗಿದ್ದಾರೆ.ಅವರು ಏಶ್ಯಾಕಂಡದ ಸಾಹಿತ್ಯ ಚಳುವಳಿಯ ಬಗ್ಗೆ ವ್ಯಾಪಕ ಅದ್ಯಯನ ನಡೆಸಿ ಕವಿರಾಜಮಾರ್ಗ ವಿಶ್ವಸಾಹಿತ್ಯದಲ್ಲಿಯೇ ಅನನ್ಯವಾದದ್ದು ಎಂದು ಬಣ್ಣಿಸಿದ್ದಾರೆ. ಈಗಿನ ಪೀಳಿಗೆಯವರು ಆಗಾಗ ಹೇಳಿಕೊಳ್ಳುವ ದೇಶೀಯತೆಯ ಪರಿಕಲ್ಪನೆಯನ್ನು 'ಕವಿರಾಜಮಾರ್ಗ'ಕ್ಕೆ ಅನ್ವಯಿಸಿದ ಶೆಲ್ಡನ್ ಪೊಲಾಕ್ ದೇಶೀಯ ಚಿಂತನೆಯಲ್ಲಿ ಕವಿರಾಜಮಾರ್ಗವನ್ನು ಮೀರಿಸುವ ಕ್ರುತಿ ವಿಶ್ವಸಾಹಿತ್ಯದಲ್ಲಿ ಇಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ'..."
ಶೆಲ್ಡನ ಪೊಲಾಕರ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.