ದೊಡ್ಡ ಆಲದ ಮರ ಧರೆಗೆ ಉರುಳಿದಾಗ...........

ದೊಡ್ಡ ಆಲದ ಮರ ಧರೆಗೆ ಉರುಳಿದಾಗ...........

ಶುಕ್ರವಾರ ಬೆಳಿಗ್ಗೆ... ನಾನು ಏಳುವುದು ತುಂಬ ತಡವಾಗಿತ್ತು....ರಾತ್ರಿ ಕೆಲಸ ಇತ್ತು ಅಂಥ ಲೇಟ್ ಆಗಿ ಮಕ್ಕೊಂಡಿದ್ದೆ.... ಬೆಳಿಗ್ಗೆ ಎದ್ದಾಗ 7:30 ಆಗಿತ್ತು... ಯಾಕೋ ಒಂದು ಥರ ಆಲಸ್ಯ....ಇವಾಗ ಏನು ವಾಕಿಂಗ್ ಗೆ ಹೋಗೋದು ಅಂಥ... ಸುಮ್ಮನೆ ಆಗಿ ಬಿಟ್ಟೆ.. ಅಪ್ಪ ಅಮ್ಮ ಇಬ್ಬರು ಯಾವಾಗಲೋ ಎದ್ದು ವಾಕಿಂಗ್ ಗೆ ಹೋಗಿದ್ದರು... ಸರಿ ಅಂಥ ನನ್ನ ಪಾಡಿಗೆ ನಾನು ಸೋಮ್ಬೇರಿಯಾಗಿ....ನಾಳೆ ಹೋದರಾಯಿತು ಅಂಥ ಪೇಪರ್ ಓದುತ್ತ ಕೂತಿದ್ದೆ . 8:00 ಗಂಟೆಗೆ ಅಮ್ಮ ಬಂದರು,, ಬರುತ್ತಿರಬೇಕಾದರೆ ಪಕ್ಕದ ಮನೆ ಅವರ ಹತ್ತಿರ...ಏನೋ ಮಾತಾಡ್ತಾ ಇದ್ದಿದು ಕೇಳಿಸ್ತು,, ಅಸ್ಪಷ್ಟವಾಗಿ...... ಅಮ್ಮ ಹೇಳ್ತಾ ಇದ್ರೂ..." ಹೌದು ರಾತ್ರಿ ಅಂತೆ ಆಗಿರೋದು..... ನೆನ್ನೆ ಮಧ್ಯಾನ ನೆ ಒಂದು ಕಡೆ ಬಿತ್ತಂತೆ...." ಅದಕ್ಕೆ ಪಕ್ಕದ ಮನೆ, ಎದುರುಮನೆ ಆಂಟಿ..." ಹೌದು ನಾವು ಹೋಗಿ ನೋಡ್ಕೊಂಡ್ ಬಂದ್ವಿ,,ರಾತ್ರಿ ೧೨:೦೦ ಗಂಟೆ ಗೆ ಅಂತೆ" ಅಂಥ ಹೇಳುತ್ತಾ ಇದ್ರೂ, ನನಗೆ ಇವರು ಯಾವ ವಿಷಯದ ಬಗ್ಗೆ ಮಾತಾಡ್ತಾ ಇದಾರೆ ಅಂಥ ಗೊತ್ತಾಗಲಿಲ್ಲ..... ಯಾರೋ ಸತ್ತು ಹೊಗಿರಬೇಕೆನೋ,,,,ಏನ್ ಕತೆನೋ.....ಅಂಥ ತಲೆಕೆಡಿಸಿ ಕೊಳ್ತಾ ಇದ್ದೆ ... ಸರಿ ಅಮ್ಮ ಮೇಲೆ ಹತ್ತಿ ಬರ್ತಾ ಇದ್ದರಲ್ವ ನೋಡೋಣ.....ಅವರೇ ಹೇಳ್ತಾರೆ ಏನೋ ಬಿಸಿ ಬಿಸಿ ಸುದ್ದಿ ಅಂಥ ಅನ್ಕೊಂಡೆ.....

ಅಮ್ಮ ಬಂದ್ರು,, ಅವರ ಮುಖದಲ್ಲಿ ಏನೋ ಒಂದು ದುಗುಡ.. ಏನನ್ನೋ ಕಳೆದು ಕೊಂಡ ಹಾಗೆ ಇತ್ತು.. ನಾನು ಕೇಳುವುದಕ್ಕೆ ಮುಂಚೇನೆ .. "ಗುರು ದೊಡ್ಡ ಆಲದ ಮರ ಬಿದ್ದು ಹೋಗಿದೆ ಕಣೋ.....ತುಂಬ ಜನ ಸೇರಿದ್ದಾರೆ....ರಾತ್ರಿ ಬಿತ್ತಂತೆ ........ಎಲ್ಲ ಬೋಡು ಬೋಡು ಆಗಿ ಕಾಂತ ಇದೆ ಕಣೋ...... ತುಂಬ ಬೇಜಾರ ಆಯಿತು ನೋಡಿ....ನೀನು ಹೋಗಿ ನೋಡ್ಕೊಂಡು ಬಾ" ಅಂಥ ಒಂದೇ ಉಸುರಿನಲ್ಲಿ ಹೇಳಿದ್ರು...... ಬೆಳಿಗ್ಗೆ ಬೆಳಿಗ್ಗೆನೆ ನಂಗೆ ಈ ವಿಷ್ಯ ಕೇಳಿ ತುಂಬ ಬೇಜಾರ ಆಯಿತು...... ಏನ್ ಹೇಳ್ತಾ ಇದಿಯಮ್ಮ ಅಂಥ ಅಂದು.. ಸರಿ ನೀವು ಬನ್ನಿ ನನ್ನ ಜೊತೆ..ಬೈಕ್ ನಲ್ಲಿ ಹೋಗೋಣ ಅಂತ ಹೇಳಿ ಅಮ್ಮನನ್ನು ಮತ್ತೆ ಕರೆದು ಕೊಂಡು ಹೋದೆ.......
ನನಗು ಒಂದು ಥರ ಸಂಕಟ ಆಗ್ತಾ ಇತ್ತು,,, ಮನೆ ಇಂದ ದೊಡ್ಡ ಆಲದ ಮರದ ಪಾರ್ಕ್ ಗೆ 5 ನಿಮಿಷ ಆಗುತ್ತೆ.....ಹತ್ರ ಹೋಗಿ ನೋಡ್ತಾ ಇದೇನೇ ಕರಳು ಚುರುಕ್ ಅಂತು.... ಅಲ್ಲಿ ನೆರೆದಿರುವವರೆಲ್ಲರು ಏನೋ ತುಂಬ ವಿಷಾದದಿಂದ ಬಂದು ಬಂದು ನೋಡಿ ಕೊಂಡು ಹೋಗುತ್ತಾ ಇದ್ದರು........ಆಗಲೇ ತುಂಬ ಜನ ಸೇರಿ ಆಗಿತ್ತು..... "ಸುರೇಶ ಕುಮಾರ್" ಸಚಿವರು ಬಂದು... ಬಿದ್ದಿದ್ದ ದೊಡ್ಡ ಆಲದ ಮರಕ್ಕೆ ಪೂಜೆ ಸಲ್ಲಿಸಿ ಹೂವ ಹಾಕಿ ಹೋಗಿದ್ದರು....
ನಾನು ಹೋಗಿ ನೋಡ್ತೇನೆ,,,,,ಮರದ ಮಧ್ಯದಿಂದ ಎರಡು ಭಾಗ ಆಗಿ ಪೂರ್ತಿ ಮಾರನೇ ಬಿದ್ದು ಹೋಗಿದೆ.....ಅದು ಬುಡದ ಸಮೇತ... ಮರದ ಬುಡದಲ್ಲಿ ಒಂದು ದೊಡ್ಡ ಹಳ್ಳ......ಪಾರ್ಕ್ ತುಂಬ ಹರಡಿ ಕೊಂಡಿದ್ದ ......ಎಸ್ಟೋ ಪಕ್ಷಿಗಳಿಗೆ ಆಶ್ರಯ ಕೊಟ್ಟಿದ್ದ...400 ವರುಷಗಳಿಗೂ ಹಳೆಯದಾದ ಮರ.....ಪಾರ್ಕ್ ತುಂಬ ಹರಡಿಕೊ೦ಡು.....ಹಾಗೆ ಬಿದ್ದು ಬಿಟ್ಟಿದೆ... ಅಲ್ಲಿದ್ದ ಬೆಳಗಿನ ವಾಯು ವಿಹಾರಕ್ಕೆಂದು ಬಂದಿದ್ದ ಎಲ್ಲ ಪರಿಸರ ಪ್ರೇಮಿಗಳು...ಅಜ್ಜಿ ತಾತಂದಿರು.....ವಯಸ್ಕರು....ಆಂಟಿ ಅಂಕಲ್ ಎಲ್ಲರಲ್ಲೂ ಒಂದು ತರಹದ ಸೂತಕದ ಛಾಯೆ,, ಯಾರೋ ದೊಡ್ಡ ಮನುಸ್ಯರು ಸತ್ತು ಹೋದಾಗ ಜನ ಬಂದು ಮಾತದಿಕೊಳ್ಳುತ್ತರಲ್ಲ ಹಾಗೆ.....ನಮ್ಮ ಬಸವೇಶ್ವರ ನಗರದ ಜನತೆಗೆ ಏನೋ ಒಂದು ಕಳೆದು ಹೋದ ಆತಂಕ......
ಅಲ್ಲಿದ್ದ ಜನರೆಲ್ಲ ಒಂದೊಂದು ರೀತಿ ಮಾತಾಡಿ ಕೊಳ್ಳುತ್ತಾ ಇದ್ದರು.... ಮರದ ಭಾರ ಜಾಸ್ತಿ ಆಗಿ ಅದೇ ಬಿದ್ದು ಹೋಗಿದೆ ಅಂಥ... ಇನ್ನು ಕೆಲವರು ಇದು ಒಳ್ಳೆ ಸುದ್ದಿ ಅಲ್ಲ... ಏನೋ ಕೆಟ್ಟದು ಈ ಥರ ಒಂದು ಆಲದ ಮರ ಬೀಳಬಾರದು ಅಂಥ... ಕಾರಣ ಏನೆ ಇದ್ದರು....400 ವರುಷದ ಹಿಂದಿನ ಒಂದು ದೊಡ್ಡ ಆಲದ ಮರ...ನಮ್ಮನು ಅಗಲಿ....ತನ್ನ ಮಾಡಿಲಲ್ಲಿ ಇರುವ ಪಕ್ಷಿ ಸಮುದಾಯಕ್ಕೆ ....ಬೆಳಿಗ್ಗೆ ಮದ್ಯಾನ ಸಂಜೆ ಅಂಥ ಯಾವಾಗಲಾದರು ಅದರ ಮಡಿಲಲ್ಲಿ ತಣ್ಣಗೆ ಕೂತು ಮಾತನಾಡಿಕೊಳ್ಳುತ್ತಿದ್ದ ಎಸ್ಟೋ ಜನರನ್ನು ಬಿಟ್ಟು....ಮಲಗಿ ಬಿಟ್ಟಿತ್ತು .............
(ಅವೊತ್ತು ಎಲ್ಲ ಟಿವಿ ನಲ್ಲಿ ಇ ನ್ಯೂಸ್ ಪ್ರಕಟ ವಾಗಿತ್ತು .. ಶನಿವಾರದ ವಿಜಯಕರ್ನಾಟಕದ ಪೇಪರ್ ನಲ್ಲಿ ಕೂಡ ಇದರ ಮಾಹಿತಿ ಬಂದಿದೆ)
ಫ್ಲಾಶ್ ಬ್ಯಾಕ್......
ನಮ್ಮ ಬಸವೆಸ್ವರನಗರಕ್ಕೆ ಮುಕುಟ ದಂತೆ ಈ ಆಲದ ಮರ ಮತ್ತು, ಇದರ ಪಾರ್ಕ್ ಫೇಮಸ್ ಆಗಿತ್ತು... ಒಟ್ಟು "ಎರಡು ಎಕರೆ " ಪ್ರದೇಶದಲ್ಲಿ ಬಸವೇಶ್ವರ ಸರ್ಕಲ್ ನಿಂದ ಕೆಲವೇ ಅಂತರದ ದೂರದಲ್ಲಿ ಸುತ್ತ ಮುತ್ತ ಇರುವ ಮನೆಗಳ ಮದ್ಯ. ಇತ್ತು .. ಈ ಆಲದ ಮರಕ್ಕೆ 400 ವರುಷಗಳ ಇತಿಹಾಸ ಇದೆ ಅಂತೆ.. ಅದರ ಮಡಿಲಲ್ಲಿ ಒಂದು ಮುನೆಶ್ವರ ಸ್ವಾಮಿ ವಿಗ್ರಹ ಹಾಗು ಪುಟ್ಟ ದೇವಸ್ತಾನ ಇತ್ತು,, ಹಲವು ವರುಷಗಳ ಕೆಳಗೆ ಇಲ್ಲಿ ಜಾತ್ರೆ ನೆದಿಥ ಇತ್ತಂತೆ...ಮುನೇಶ್ವರ ಸ್ವಾಮಿ ಪೂಜೆ ಮಾಡಲು ತುಂಬ ಜನ ಬರುತಿದ್ದರಂತೆ....
ಇತ್ತೀಚೆಗಂತೂ ...ಈ ಪಾರ್ಕ್ ತುಂಬ ಅಭಿವೃದಿ ಹೊಂದಿತ್ತು.....ಇಷ್ಟು ದೊಡ್ಡ ಮರವಿರುವ ಜಾಗದಲ್ಲಿ ಒಂದು ಸುಂದರ ಉದ್ಯಾನವನ ಅಭಿವೃದ್ದಿ ಆಗಿತ್ತು... ನೂರಾರು ಜನ ಬೆಳಿಗ್ಗೆ ಹಾಗು ಸಂಜೆ ಇಲ್ಲಿ ವಾಕಿಂಗ್ ಗೆ ಅಂಥ ಜೋಗ್ಗಿನ್ಗೆ ಅಂಥ ಬರುತ್ತಿದ್ದರು....ಇನ್ನು ಮಧ್ಯಾನ ಪ್ರೇಮಿಗಳಿಗೆ ... ಅಜ್ಜಿ ತಾತ ಅವರಿಗೆ.. ಎಸ್ಟೋ ಜನರಿಗೆ ನೆರಳನ್ನು ಕೊಟ್ಟು ತನ್ನ ಹತ್ತಿರ ಕೂಡಿಸಿ ಕೊಳ್ತಾ ಇತ್ತು ಈ ಮರ...
ನನ್ನ ಹಾಗು ಈ ದೊಡ್ಡ ಆಲದ ಮರ ಇರುವ ಪಾರ್ಕಿನ ಒಡನಾಟ ತುಂಬ ಹಳೆದು.... ನಾನು ಚಿಕ್ಕವನಗಿರ ಬೇಕಾದರೆ.. ಬೇಸಿಗೆ ರಜೆ ನಲ್ಲಿ ನಮ್ಮ ಬಸವೆಸ್ವರನಗರ ದಲ್ಲಿ ಇರುವ ಅಜ್ಜಿ ಮನೆಗೆ ಬಂದಾಗ.....ಈ ದೊಡ್ಡ ಆಲದ ಮರದ ಪಾರ್ಕ್ ನಮ್ಮ ಆಟದ ಮೈದಾನ....ಎಷ್ಟು ಹೊತ್ತು ಇಲ್ಲಿ ಕಳೆದು ಮನೆಗೆ ಹೋಗ್ತಾ ಇದ್ದೆವೋ ಗೊತ್ತಿಲ್ಲ... ಕಣ್ಣಾ ಮುಚ್ಚಾಲೆ ಆಟ.. ಕುಂಟೆ ಬಿಲ್ಲೆ... ಇಲ್ಲಿರುವ ಮಕ್ಕಳ ಆಟದ ಆಟಿಕೆ ಇಂದ ಎಷ್ಟು ಹೊತ್ತು ಇಲ್ಲೇ ಇರುತ್ತಾ ಇದ್ದೆವು....
ಅದಾದಮೇಲೆ ನಾವು ಬೆಂಗಳೂರಿಗೆ ಬಂದು ಬಸವೇಶ್ವರ ನಗರದಲ್ಲೇ settle ಆದ ಮೇಲಂತೂ ... ನನ್ನ ಬೆಳಗಿನ jogginge , ಸಂಜೆಯ ವಾಯು ವಿಹಾರಕ್ಕೆ...ಎಲ್ಲದಕ್ಕೂ ಇಲ್ಲಿಗೆ ಬರುತ್ತಾ ಇದ್ದಿದು..ಯಾವಾಗ್ಲಾದ್ರು ಬೇಜಾರು ಅದಾಗ ಸಂಜೆ ಹೊತ್ತು ಇಲ್ಲಿ ಬರುತ್ತಾ ಇದ್ದೆ.. ಆಗ ಇಲ್ಲಿ ಓಡಾಡಿಕೊಂಡಿರುವ ಚಿಕ್ಕ ಚಿಕ್ಕ ಮಕ್ಕಳನ್ನು ನೋಡಿ ,,,, ಸಂಜೆ ಆಯಿತು ಅಂದ್ರೆ ಅದೆಲ್ಲಿರುತ್ತೋ ಪಕ್ಷಿಗಳು ಬಂದು ತಮ್ಮ ಗೂಡು ಸೇರಿಕೊಳ್ಳುವ ತವಕದಲ್ಲಿ ಚಿಲಿ ಪಿಳಿ ಚಿಲಿ ಪಿಳಿ ಅನ್ನುತ್ತಾ..ಇರುವ ಶಬ್ದ....ಇದೆಲ್ಲವನ್ನೂ ಕೇಳಿ ಬೇಜಾರು ಮರೆತು ಹೋಗುತ್ತಿತ್ತು ..
ಇವಾಗ ಈ ಪಾರ್ಕಿನ ಹತ್ರ ಜಾಸ್ತಿ ಹೋಗ್ತಾ ಇರಲಿಲ್ಲ ತುಂಬ ಜನ ಅಂಥ... ಆದರೆ ನಮ್ಮ ಅಮ್ಮ ಹಾಗು ಅಪ್ಪ ಇಬ್ಬರು ಬೆಳಿಗ್ಗೆ ಎದ್ದು ಇಲ್ಲಿಗೆ ವಾಕಿಂಗ್ ಅಂಥ ಬಂದು ಅವರ ಸ್ನೇಹಿತರ ಜೊತೆ... ಹರಟೆ ಹೊಡೆದು.....ಬರುವುದು ದಿನಚರಿ ಅಗ್ಗಿತ್ತು .......
ಇವೊತ್ತು ಅಮ್ಮ ನ ಜೊತೆ ಹೋದಾಗ ಅವರು ಮರ ಬಿದ್ದ ಕೆಳಗಡೆ ಇರುವ ಬೆಂಚ್ ಅನ್ನು ತೋರಿಸಿ ಅದೇ ಕಣೋ ನಾವೆಲ್ಲ ಕೂತ್ಕೊಥ ಇದ್ದ ಬೆಂಚು ... ಅಂಥ ಹೇಳಿ ತೋರಿಸ್ತಾ ಇದ್ರೂ....ನಂಗೆ ಅವರ ಈ ಮರದ atachment ನೋಡಿ ಏನೋ ಒಂದು ತರ ಅಂಥ ಅನ್ನಿಸಿತು....
ಇವಾಗ ಇದೆಲ್ಲ ಇತಿಹಾಸ..........ಇನ್ನು ಮುಂದೆ ಈ ಪಾರ್ಕ್ ಇರುತ್ತೆ ಆದರೆ ಬೋಡು ಬೊಡಾಗಿ..... ಆದರೆ ನನ್ನ ಪ್ರಕಾರ ಇದು ಬೀಳುವುದಕ್ಕೆ ಕಾರಣ ಇದರ ಸುತ್ತ ಅಭಿವೃದ್ದಿ ಪಡಿಸಿರುವುದೇ ...ಒಂದು ಚೂರು ಮಣ್ಣು ಬಿಡದೆ ಸಿಮೆಂಟ್ ಟೈಲ್ಸ್ ನಿಂದ ಸುತ್ತಲುನು ವಾಕಿಂಗ್ ಗೆ ಅಂಥ ಜಾಗ ಮಾಡಿದ್ದರು.... ಮರದ ಬುಡ ಒಂದು ಬಿಟ್ಟು.. ಸುತ್ತಲೆಲ್ಲ ಸಿಮೆಂಟ್ ಹಾಕಿ ಬೆಂಚುಗಳನ್ನು ಹಾಕಿ ಆಟ ಆಡೋದಕ್ಕೆ ಚಿಕ್ಕಮಕ್ಕಳು ಕೂರೋದಕ್ಕೆ ಅವಕಾಶ ಮಾಡಿದ್ದರು..... ಇದು ನನ್ನ ಅನಿಸಿಕೆ... ಆದರೆ ಬೇರೆಯವರು ಹೇಳುವ ಪ್ರಕಾರ ಮರದ ಭಾರ ಜಾಸ್ತಿ ಆಗಿ ಬಿದ್ದು ಬಿಟ್ಟಿದೆ ಅಂಥ....
ಏನೆ ಕಾರಣ ಇರಲಿ....ತುಂಬ ವರುಷದ ಇತಿಹಾಸ ಇರುವ ಮರ ನಮ್ಮನ್ನು ಬಿಟ್ಟು ಹೋಗಿದೆ ಅಸ್ಟೇ.......

ಪಾರ್ಕಿನ ತುಂಬ ಹರಡಿ ಕೊಂಡಿರುವ ಮರದ ಕೊಂಬೆಗಳು


ನೋಡಲು ಹರಿದು ಬಂದಿರುವ ಜನಸಾಗರ...


ಬುಡದ ತಳದಲ್ಲಿ ಆಗಿರುವ ಗುಂಡಿ.......


ಎಲ್ಲರಿಂದ ಮರಕ್ಕೆ ಪೂಜೆ.. ಅಂತಿಮ ವಿದಾಯ......
ಮರ ಬಿದ್ದರು,,,ಇ ಜೇನು ಗೂಡು ಮಾತ್ರ ಕದಲಿಲ್ಲ......
ದೊಡ್ಡ ದೊಡ್ಡ ಮರದ ಕೊಂಬೆಗಳು
ಪಾರ್ಕ್ ಎದುರಿರುವ ಮನೆ ಮೇಲಿನಿಂದ.....

ಬೋಡು ಬೋಡಾಗಿ ಕಾಣುತ್ತಿರುವ ನಮ್ಮ ಬಸವೇಶ್ವರ ನಗರದ ಉದ್ಯಾನವನ......
.....
...........
ಕೊನೆಯದಾಗಿ,,, ನನ್ನ ಮನಸ್ಸಿಗೆ ತುಂಬ ನೋವು ಉಂಟು ಮಾಡಿದ ಸಂಗತಿ ಎಂದರೆ.... ಇನ್ನು ಕಣ್ಣು ಕೂಡ ಬಿಟ್ಟಿರದ ಪುಟ್ಟ ಹಕ್ಕಿ ಮರಿಗಳ ಕೂಗು..... ಮರ ಬಿದ್ದಿದ್ದರಿಂದ ಇದರಲ್ಲಿ ಗೂಡು ಕಟ್ಟಿ ಕೊಂಡು ಇರುವ ಎಷ್ಟು ಪಕ್ಷಿಗಳ ಸಂಸಾರ ಹಾಳದವೋ ...ನನ್ನ ಕಣ್ಣಿನ ಎದುರಿಗೇ ಈ ಪುಟ್ಟ ಹಕ್ಕಿಮರಿಗಳು (ಯಾವ ಹಕ್ಕಿ ಮರಿಗಳು ಅಂಥ ಗೊತ್ತಾಗಲಿಲ್ಲ.... ಇದು ಹದ್ದಿನ ಹಕ್ಕಿ ಮರಿ ಅಂಥ ಹೇಳಿದ್ರು ) ಚೀರಾಡುತ್ತಾ ಒದ್ದಾಡುತ್ತ ಇದ್ದವು,, ಇದನ್ನು ಜೋಪಾನವಾಗಿ ಒಂದು ಕಡೆ ಇಟ್ಟು... ಪ್ರಾಣಿ ದಯಾಸಂಗ ಕ್ಕೆ ಫೋನ್ ಮಾಡಿ ತೆಗೆದುಕೊಂಡು ಹೋಗಲು ಹೇಳಿದ್ದೆವು ... ನನಗೆ ಟೈಮ್ ಆಗಿದ್ದರಿಂದ ಇದನ್ನು ನೋಡಿಕೊಳುತ್ತ ಇರುವ ಇನ್ನೊಬ್ಬರಿಗೆ ಹೇಳಿ ವಾಪಾಸ್ ಬಂದುಬಿಟ್ಟೆ....ಪಾಪ ಈ ಪುಟ್ಟ ಮರಿಗಳು ಪ್ರಾಣಿ ದಯಾಸಂಘಕ್ಕೆ ಜೋಪಾನವಾಗಿ ಸೇರಿದವು ಅಂಥ ನಂಬಿದ್ದೇನೆ.....


ಇದನ್ನು ನನ್ನ ಬ್ಲಾಗ್ ನಲ್ಲಿ ಕೂಡ ಪ್ರಕಟಿಸಿದ್ದೇನೆ...

http://guruprsad.blogspot.com/

ಗುರು

Rating
No votes yet

Comments