ದ್ರಾವಿಡ ನುಡಿ ಕೂಟ
ದ್ರಾವಿಡ ನುಡಿಗಳು ಸಂಸ್ಕೃತದಿಂದ ಹುಟ್ಟಿಲ್ಲ, ಮತ್ತು ಅವು ಬೇರೆಯದೇ ಭಾಷಾ ವರ್ಗಕ್ಕೆ ಸೇರಿವೆ ಅಂತ ಮೊತ್ತಮೊದಲಿಗೆ ಪ್ರದಿಪಾದಿಸಿದ ವ್ಯಕ್ತಿ ಯಾರು?.
ಅನ್ನೋ ಪ್ರಶ್ನೆಗೆ ಹಲವರು ಪ್ರತಿಕ್ರಿಯಿಸಿದರು. ಇಂತ ಸಂದರ್ಭದಲ್ಲೂ ತಲೆಗೆ ಬಂದ ಕೆಲ ಮಾತುಗಳು.
................................
> 1816 ರಲ್ಲಿ Alexander D. Campbell ನ " A grammer of the teloogoo language " ಅನ್ನುವ ಪ್ರಬಂಧ / ಪುಸ್ತಕದಲ್ಲಿ ಈ ವಿಷಯ ಬರುತ್ತೆ.
> Sir. Francis White Ellis ಈ ಬಗ್ಗೆ ತನ್ನ ವಾದವನ್ನು ಇಡುತ್ತಾನೆ.
> ೧೮೫೬ ರಲ್ಲಿ Robert Caldwell ತನ್ನ Comparative grammar of the Dravidian or South-Indian family of languages ನಲ್ಲಿ ಇದಕ್ಕೆ ತಕ್ಕ ಪುರಾವೆ ಒದಗಿಸಿ ಈ ವಾದವನ್ನು ಗಟ್ಟಿಗೊಳಿಸಿದ.
>ಈಗಂತೂ ದ್ರಾವಿಡ ಭಾಷೆಗಳು ಬೇರೆಯದೇ ವರ್ಗದ ಭಾಷೆಗಳು ಅಂತ ಎಲ್ಲ ಭಾಶತಜ್ನರೂ ಒಪ್ಪಿಕೊಂಡಿದ್ದಾರೆ.
..........................................................
ಸ್ವಲ್ಪ ಒಗ್ಗರಣೆ.
> ಇದಕ್ಕೂ ಮುಂಚೆ ಎಲ್ಲ ಭಾರತೀಯ ಭಾಷೆಗಳೂ ಸಂಸ್ಕೃತದಿಂದ ( ಇಂಡೋ ಯೂರೋಪಿಯನ್ ಭಾಷ ವರ್ಗ) ಹುಟ್ಟಿವೆ ಅಂತ ಪುರಾಣ ಪುಣ್ಯ ಕಥೆಗಳು ಸಾರುತ್ತಾ ಇದ್ದವು.
>ಪುರಾಣ ಪುಣ್ಯಕಥೆಗಳನ್ನು, ಅಲ್ಲಿನ ಕೆಲ ಪಾತ್ರಗಳ ಮ್ಯಾಜಿಕ್ ಗಳನ್ನು ಪರಮ ಸತ್ಯವೆಂದೂ ನಂಬಿಕೊಂಡ ಬಂದ ನಮ್ಮ ಜನ ಅಂತದೆ ಜನರೇಳಿದ ಸಂಸ್ಕೃತವೆ ಎಲ್ಲ ಭಾಷೆಗಳಿಗೂ ತಾಯಿ ಅನ್ನೋ ಕಥೆ ಯನ್ನು ಅಕ್ಷರಶ: ನಂಬಿಬಿಟ್ಟರು.
>ಈಗಲೂ ಸಂಸ್ಕೃತವೇ ದೇವ ಭಾಷೆ , ಇತರ ಭಾಷೆಗಳು ಕೀಳು / ಅಪಬ್ರಂಶ ವಷ್ಟೇ ಅನ್ನೋ ಮೂರ್ಖರೂ, ಮತ್ತು ಕನ್ನಡವೂ ಸೇರಿದಂತೆ ಅನ್ಯ ಭಾಷೆಗಳನ್ನು ಸಂಸ್ಕೃತಕ್ಕೆ ತಕ್ಕಂತೆ ಹೊಂದಿಸಿಕೊಂಡು ಬಳಸುವ ಒತ್ತಡ ಹೇರುವ, ಸಂಸ್ಕೃತ ಶೈಲಿಯಲ್ಲಿ ಮಾತನಾಡದ ಜನರನ್ನು ಕೆಳಜಾತಿ ಅಂತ ಮೂದಲಿಸುವ ಪರಮ ಮೌಡ್ಯರು ಅನಾಗರೀಕ ಜನರೂ ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.
>ಸಾಮಾನ್ಯರನ್ನು ಬಿಟ್ಟು ಹಾಕಿ... ನಮ್ಮ ಹೆಮ್ಮೆಯ ಕೇಶಿರಾಜನೆ ಕನ್ನಡ ಸಂಸ್ಕೃತದಿಂದ ಹುಟ್ಟಿದೆ ಅನ್ನೋ ಭ್ರಮೆ ಇಟ್ಟುಕೊಂಡು ತನ್ನ ಶಬ್ದ ಮಣಿ ದರ್ಪಣವನ್ನು ಬರೆದಿದ್ದಾನೆ ಅನ್ನುವ ವಾದ ಇದೆ.
>ನಮ್ಮ ಕನ್ನಡದ ಎಲ್ಲ ಹಿಂದಿನ ಲಾಕ್ಷಣಿಕರೂ , ವೈಯಾಕರನಿಗಳೂ ಸಂಸ್ಕೃತವೇ ಕನ್ನಡದ ತಾಯಿ ಭಾಷೆ ಅಂದು ನೇರವಾಗಿ / ಪರೋಕ್ಷವಾಗಿ ಒಪ್ಪಿಕೊಂಡು , ಸಂಸ್ಕೃತಕ್ಕೆ ಹೊಂದಿಸ್ಕೊಂಡು ಕನ್ನಡ ವ್ಯಾಕರಣವನ್ನು ಬರೆದಿದ್ದಾರೆ.
>ನಮ್ಮ ಶಾಲೆಗಳಲ್ಲೂ ಹಿಂದಿಗೂ ಕನ್ನಡ ಭಾಷೆಯ ವಿಷಯದಲ್ಲಿ ಕನ್ನಡ ವ್ಯಾಕರಣದ ಬದಲು ಸಂಸ್ಕೃತ ವ್ಯಾಕರಣವನ್ನೇ ಕಲಿಸುತ್ತಾರೆ. ಇನ್ನು ಈ ಕನ್ನಡದಲ್ಲಿ?! ಬರೆದ ವಿಜ್ಞಾನದ technical words ಗಳೆಲ್ಲವೂ ಸಂಸ್ಕೃತವೇ.. ನನಗಂತೂ ಈ ಕನ್ನಡದಲ್ಲಿನ (?) ವಿಜ್ಞಾನ ಕಬ್ಬಿಣದ ಕಡಲೆ.
>ನಾವು ಕನ್ನಡಿಗರು ಇಷ್ಟು ದಿನ ಸಂಸ್ಕೃತವನ್ನು ಕನ್ನಡದ ತಲೆ ಮೇಲೆ ಇಟ್ಟು ಕೀಳಿರಿಮೆಯಿಂದ ನರಳಿದದಾಯ್ತು. ಇನ್ನು ಮುಂದಾದರೂ ನಮಗೆ ನಮ್ಮದೇ ಆದ ಪರಂಪರೆ, ಹಿನ್ನಲೆ ಇದೆ, ಸಂಸ್ಕೃತದ ಹಂಗು ಇಲ್ಲ ಅಂತ ಸಾರಿ ಸಾರಿ ಹೇಳುವ ಅವಕಾಶ ಇತ್ತೀಚಿಗೆ ನಮಗೆ ಸಿಕ್ಕಿದೆ.
>ಕನ್ನಡವನ್ನು ಸಂಸ್ಕೃತದ (ದೈವ ಭಾಷೆ ಅನ್ನೋ ಹೆಸರಲ್ಲಿ) ಕೆಳಗೆ ಹಾಕಿ ,ಸಂಸ್ಕೃತ ಬಲ್ಲದವರನ್ನು ತುಂಬಾ ಕೀಳಾಗಿ ಕಂಡ / ಕಾಣುವ ಒಂದು ಕ್ಷುದ್ರ ಪರಂಪರೆಯೇ ನಮ್ಮಲ್ಲಿದೆ. ಅಂತವರಿಗೆ ಬುದ್ದಿ ಹೇಳುವ ಶಕ್ತಿ ಕನ್ನಡಿಗರಿಗೆ ಬರಲಿ.
>"ದೇವ ಭಾಷೆ"ಯ ಎದುರು "ಶಿವ ಭಾಷೆ" ಹೆಮ್ಮೆಯಿಂದ ಮೆರೆಯಬೇಕು. ಇನ್ನು ಮುಂದಾದರೂ ಈ ಪ್ರಯತ್ನಗಳು ಸಾಗಲಿ.
Rating
Comments
ಉ: ದ್ರಾವಿಡ ನುಡಿ ಕೂಟ
ಉ: ದ್ರಾವಿಡ ನುಡಿ ಕೂಟ
ಉ: ದ್ರಾವಿಡ ನುಡಿ ಕೂಟ
In reply to ಉ: ದ್ರಾವಿಡ ನುಡಿ ಕೂಟ by hamsanandi
ಉ: ದ್ರಾವಿಡ ನುಡಿ ಕೂಟ