ದ್ವೀಪದಂತಾಗುತ್ತಿರುವ ಬದುಕುಗಳು.

ದ್ವೀಪದಂತಾಗುತ್ತಿರುವ ಬದುಕುಗಳು.

ಇಲ್ಲಿ ಮಹೇಶ್ ಎಂಬುವರೊಬ್ಬರು ಈ ನ್ಯೂಸ್ ಪೇಪರ್ ಓದುವುದು ಇವೆಲ್ಲಾ ಮಾಡಬಾರದು, ಇದರಿಂದ ಮನಸ್ಸಿಗೆ ಕಿರಿಕಿರಿ ತಪ್ಪಿದ್ದಲ್ಲ ಎಂದಿದ್ದಾರೆ. ಒಂದು ಕೋನದಲ್ಲಿ ಎಲ್ಲರಿಗೂ ಇದು ಅನಿಸುವಂಥದ್ದೇ. ಏಕೆಂದರೆ ಇಡೀ ಪ್ರಪಂಚವೇ ಹೂವಿನ ಹಾಸಿಗೆಯಾಗಿದ್ದರೆ ಎಶ್ಟು ಚೆಂದ ಎಂದು ಎಲ್ಲರಿಗೂ ಆಶಯಗಳಿರುವುದು ದಿಟವೇ. ಆದರೆ ವಾಸ್ತವವೇ ಬೇರೆ ಇರುತ್ತದೆ. ಬರೀ ನಾನು ಆಫೀಸಿಗೆ ಹೋಗಿ ದುಡಿದು ತಿಂದು ನನ್ನ ಯೋಗಕ್ಷೇಮ ನೋಡಿಕೊಂಡಿರುತ್ತೇನೆ ಎಂದರೆ ಬೇರೆ ಮಾತು. ಆದರೆ ನಾವು ಬದುಕುತ್ತಿರುವುದು ಒಂದು ಸಮಾಜದಲ್ಲಿ ಅಲ್ಲವೇ? ಇಲ್ಲಿ ಏನಾಗುತ್ತಿದೆ ಎಂಬುದು ತಿಳಿಯಬೇಡವೇ?
ಕೆಲದಿನಗಳ ಹಿಂದೆ ನಮ್ಮ ಮಿತ್ರವೃಂದದಲ್ಲೊಬ್ಬರು ಒಬ್ಬರ ಮನೆಗೆಕರೆದುಕೊಂಡು ಹೋಗಿದ್ದರು. ಅವರ ಮನೆಯಲ್ಲಿ ಇಬ್ಬರೂ ಹೊರಗೆ ದುಡಿಯುವವರು. ಸುಮಾರು ಒಂದು ಘಂಟೆ ನಮಗೆ ಅಲ್ಲಿ ಕುಳಿತುಕೊಳ್ಳುವುದೇ ಕಷ್ಟವಾಯಿತು. ಏಕೆಂದರೆ ಅವರ ಮನೆಯಲ್ಲಿ ಪೇಪರು ಓದುವುದಿಲ್ಲವಂತೆ, ಟಿ.ವಿ ಇಟ್ಟುಕೊಂಡಿಲ್ಲವಂತೆ. ಇನ್ನು ಅಕ್ಕಪಕ್ಕದವರೊಡನೆಯೂ ಅಷ್ಟು ಮಾತುಕತೆಯಿಲ್ಲವಂತೆ. ಮನೆಯಾತನಿಗೆ ಏನೆಂದರೆ ಏನು ವಿಷಯದಬಗ್ಗೆಯೂ ಮಾತನಾಡಲು ಬರದು. ಕೇಳಿದರೆ ತಮ್ಮ ಕಂಪೆನಿಯಬಗ್ಗೆ, ಕೆಲಸದಬಗ್ಗೆ ಒಂದೆರಡುಮಾತುಗಳಲ್ಲಿ ಹೇಳಿ ಸುಮ್ಮನಾಗುತ್ತಿದ್ದ. ಇಂತಹವರೊಡನೆ ಯಾವ ವಿಷಯದ ಬಗ್ಗೆ ಮಾತನಾಡುವುದು? ಸಮಾಜದ ಆಗುಹೋಗುಗಳ ಬಗ್ಗೆ, ಅಟ್ ಲೀಸ್ಟ್ ತಮ್ಮ ಏರಿಯಾದ ಬಗ್ಗೆಯೂ ಏನೇನೇನೇನೂ ಗೊತ್ತಿಲ್ಲ.

ಇಂತಹ ಮಾಹಿತಿ ತಂತ್ರಜ್ಞಾನ ಕ್ರಾಂತಿಯ ಯುಗದಲ್ಲೂ ಜನರು ತಾವು ದ್ವೀಪಗಳಂತಾಗುತ್ತಾ ತಾನಾಯಿತು ತನ್ನ ಕುಟುಂಬವಾಯಿತು ಎಂಬಂತೆ ಬದುಕುತ್ತಿರುವುದು ಆಶ್ಚರ್ಯಕರವಾಗುತ್ತದೆ.

Rating
No votes yet

Comments