ಧರ್ಮಸೂಕ್ಷ್ಮ - ಒಂದು ಕತೆ .

ಧರ್ಮಸೂಕ್ಷ್ಮ - ಒಂದು ಕತೆ .

ಮಹಾಭಾರತದಲ್ಲಿ ಪಾಂಡವರು ವನವಾಸದಲ್ಲಿದ್ದಾರೆ. ಭೀಮ, ಅರ್ಜುನ ,ನಕುಲ , ಸಹದೇವ , ದ್ರೌಪದಿ ಎಲ್ಲರೂ ಧರ್ಮರಾಯನನ್ನು ಅವನಿಂದಲೇ ತಮಗೆ ಈ ದುರ್ಗತಿ ಬಂದಿತು ಎಂದು ಆಕ್ಷೇಪಿಸುತ್ತಿದ್ದಾರೆ. ಆಗ ಅಲ್ಲಿ ಕೃಷ್ಣ ಬರುತ್ತಾನೆ. ಅಗ ಧರ್ಮರಾಯನು ಅವನನ್ನು ಹೀಗೆ ಕೇಳುತ್ತಾನೆ- ’ನಾನು ಮಾಡಿದ ತಪ್ಪಾದರೂ ಏನು ? ಎಲ್ಲರೂ ನನ್ನನ್ನೇ ಏಕೆ ದೂಷಿಸುತ್ತಿದ್ದಾರೆ ? ನಾನು ಧರ್ಮದಂತೆ ಅಲ್ಲವೇ ನಡೆದದ್ದು? ತಾತ ಧೃತರಾಷ್ಟ್ರನು ಜೂಜಿಗೆ ಕರೆದಾಗ ನನು ಬಂದಿದ್ದು ಸರಿಯಲ್ಲವೇ ? ನಾನು ಹಿರಿಯರ ಮಾತು ನಡೆಸಬೇಕೆಲ್ಲವೇ ? ಜೂಜಿಗಾಗಲೀ ಯುದ್ಧಕ್ಕಾಗಲೀ ಬಂದ ಸವಾಲನ್ನು ಕ್ಷತ್ರಿಯನಾದವನು ಎದುರಿಸಬೇಕಲ್ಲವೇ ? ನಾನು ಧರ್ಮವನ್ನು ಚಾಚೂತಪ್ಪದೆ ಅನುಸರಿಸಿರುವಾಗ ನನಗೆ ಏಕೆ ತೊಂದರೆಗಳು ಬಂದವು ? ಆಗ ಶ್ರೀಕೃಷ್ಣ ಹೀಗೆ ಹೇಳುತ್ತಾನೆ- ಅದು ಹಾಗಲ್ಲ , ಯುಧಿಷ್ಠಿರ , ನೀನು ಧರ್ಮದ ವಾಕ್ಯಗಳನ್ನು ಅಕ್ಷರಶ: ಅನುಸರಿಸುತ್ತಿದ್ದೀಯೇ ಹೊರತು , ಅದರ ತಿರುಳನ್ನು ತಿಳಿದಿಲ್ಲ. ಅದಕ್ಕಾಗೇ ನಿನಗೆ ಈ ಪರಿಸ್ಥಿತಿ ಬಂದೊದಗಿದೆ. ಹಿರಿಯರ ಮಾತನ್ನು ನಡೆಸಬೇಕು ನಿಜ , ಆದರೆ ಅದು ಯಾವಾಗಲೂ ಅಲ್ಲ , ಅದು ಧರ್ಮಸಮ್ಮತವಾಗಿದ್ದರೆ ಮಾತ್ರ. ಹಿರಿಯರೆಂದರೆ ಕೇವಲ ವಯಸ್ಸಿನಲ್ಲಿ ನಮಗಿಂತ ದೊಡ್ಡವರೆಂದಲ್ಲ . ಅವರು ನಡತೆಯಲ್ಲೂ ಹಿರಿಯರಾಗಿರಬೇಕು . ಆದರೆ ಹಿರಿಯರಾದವರು ದುಷ್ಟಬುದ್ಧಿಯಿಂದ ತಪ್ಪು ಮಾತನ್ನು ಹೇಳಿದರೆ ನಡೆಸಬೇಕೆಂದಿಲ್ಲ . ಧರ್ಮ ಯಾವುದೆಂಬ ನಿನ್ನ ತಿಳಿವಿನಲ್ಲೇ ದೋಷವಿದೇ ವಿನಃ ಧರ್ಮದಲ್ಲಲ್ಲ . - ಎಂದು ಅವನಿಗೆ ತಿಳಿಹೇಳುತ್ತಾನೆ. ಇದು ಬಲು ಹಿಂದೆ ತುಷಾರದಲ್ಲಿ ನಾನು ಓದಿದ ಕತೆ .

Rating
No votes yet