ಧಾರವಾಡದಲ್ಲಿ ಧ್ಯಾನ

ಧಾರವಾಡದಲ್ಲಿ ಧ್ಯಾನ

ನಾನು ಧಾರವಾಡಕ್ಕೆ ಹೋದಾಗಲೆಲ್ಲ ಪುರ್ಸೊತ್ತು ಮಾಡ್ಕೊಂಡು ಅಲ್ಲೆ ಕರ್ನಾಟಕ ಯುನಿವರ್ಸಿಟಿಗೆ ಹೋಗ್ತೇನಿ . ಕೈ ಕಾಲು ತಾಕಿಸಿಕೊಂಡು ಓಡಾಡುವ, ಬಗೆಬಗೆಯ ಸದ್ದಿನಲ್ಲಿ ಮಾತು ಕೇಳಿಸದ ಈ ಮುಂಬೈ ಎಲ್ಲಿ , ಅಲ್ಲಿ ಹೆಚ್ಚುಕಡಿಮೆ ನೀರವ ನಿರ್ಜನ ಜಾಗವೆಲ್ಲಿ ... ಅಲ್ಲಿ ಎತ್ತರೆತ್ತರ ಮರಗಳು ಮೌನದಲ್ಲಿ ಬಿಸಿಲು/ಮಳೆ /ಗಾಳಿಯಲ್ಲಿ ಗಪ್ಪ ನಿಂತಿರ್ತಾವ . ಅವೂ ನಾನು , ನಾನು ಅಂತ ವಿಚಾರಾ ಮಾಡ್ತಾವೇನು ? ಬ್ಯಾರೆ ಗಿಡದ ಜೋಡಿ ಹೋಲಿಸ್ಕೋತಾವೇನು ? ಅಲ್ಲಿ ಇಲ್ಲಿ ಸುಳಿವ ಗಾಳಿಗೆ ಕೊಂಚ ಎಲೆಗಳನ್ನ ಅಲುಗಾಡಿಸ್ತಾವ . ಹೊತ್ತು ಅನ್ನೋದು ನಿಂತೇ ಬಿಟ್ಟಿರ್ತದ . ನಾನೂ ಅಲ್ಲೆ ಸೊಲ್ಪ ಹೊತ್ತು ಇರ್ತೀನಿ . ಆ ಗಿಡಾ ಮರಾ ನಿಂತ್ ಹಂಗ ನಿಂದರ್ತೀನಿ . ಅಲ್ಲೊಬ್ಬರು ಹಾದು ಹೋಗ್ತಾರ . ಅವರು ನನ್ನ ಕಡೆ ನೋಡದೆ ದಾಟ್ಕೊಂಡು ಹೋಗ್ತಾರ . ಮತ್ತ ನಾನS ನಾನು . ಮತ್ತ ಗಿಡಾ ಮರಾ . ....
....
....
ಮುಂಬೈ , ಟ್ರೇನು , ಜನಜಂಗುಳಿ , ಎತ್ತೆತ್ರದ ಬಿಲ್ಡಿಂಗ್ , ಕಂಪ್ಯೂಟರ್ , ನೆಟ್ಟು , ನಾನು , ಇತ್ಯಾದಿ ಎಲ್ಲೆ ? ಸಮಯ ಸರಿಯದೇ ನಿಂತ , ಯಾರ್ಗೂ ದರಕಾರ್ ಮಾಡದS ಈ ಧಾರವಾಡದ ಈ ನಿರ್ಜನ ಜಾಗ ಎಲ್ಲೆ ?
....
....
...
ಸೊಲ್ಪ ಹೊತ್ತಿಗೆ ವಾಪಸ್ ಬರ್ತೀನಿ ...

Rating
No votes yet

Comments