ಧಾರವಾಡ ಕನ್ನಡ- ಭಾಗ ೩

ಧಾರವಾಡ ಕನ್ನಡ- ಭಾಗ ೩

ಪ್ರಮಾಣ ಕನ್ನಡದ ’ಎ’ ಅಕ್ಷರದಿಂದ ಕೊನೆಯಾಗುವ ಶಬ್ದಗಳು ’ಇ’ ದಿಂದ ಕೊನೆ ಆಗುತ್ತವೆ

ಉದಾ: ಶಾಲೆ - ಸಾಲಿ
ಮನೆ - ಮನಿ
ಆನೆ - ಆನಿ
ರಾಟೆ - ರಾಟಿ
ಇತ್ಯಾದಿ
ಎಲ್ಲ ಶಬ್ದಗಳೂ ಈ ತರ ಆಗ್ತಾವ ಅಂತ ಅಲ್ಲ ;
ಕಡೆಯ .... ಕಡೀ ಆದರೂ
ಕಡೆ ... ಕಡೆ ಎಂದೇ ಇರುವದು ..
ನಿಂ ಕಡೆ .. (ನಿಮ್ಮ ಹತ್ರ .. ನಿಮ್ಮ ಭಾಗದಲ್ಲಿ )

ಆಮೇಲೆ ಇನ್ನೊಂದು ....

ಇದು ಖರೇ ಅಂದ್ರ ಧಾರವಾಡಕ್ಕಷ್ಟS ಸೀಮಿತ ಅಲ್ಲ . ಇದು ಉಳಕೀ ಕಡೇನೂ ಲಾಗೂ ಆಗ್ತದ ...
ಇದು ನನ್ನ ಲಕ್ಷ್ಯಕ್ಕೆ ಬಂದ ವಿಷ್ಯ .

ಇದನ್ನು ಬ್ಯಾರೇದಾವರೂ ಹೇಳಿರಬಹುದು / ಗಮನಿಸಿರಬಹುದು ...

ಮೊದಲು ಉದಾಹರಣೆನೇ ನೋಡೋಣ .. ನಿಯಮ ಹೇಳೋದು ನಂಗ ಸುಲಭ ಆಗ್ತದ :)

ಬೇರೆ - ಬ್ಯಾರೆ
ಬೇನೆ - ಬ್ಯಾನಿ
ಪೇಟೆ - ಪ್ಯಾಟಿ
ಮೇಲೆ - ಮ್ಯಾಲೆ
ಬೇಡ - ಬ್ಯಾಡ

ಕೋಟೆ - ಕ್ವಾಟಿ ,
ತೋಟ - ತ್ವಾಟ
ಜೋಳ - ಜ್ವಾಳ
ಜೋಕೆ - ಜ್ವಾಕಿ

ಹೋದ ( ಹೋದನು) - ಹ್ವಾದ ಅಂತನೂ ಬಳಸುವರು .

ಅಂದರ ’ಏ’ ಇದ್ದಲ್ಲೆಲ್ಲ ’ಯ’ , ’ಓ’ ಇದ್ದಲ್ಲೆಲ್ಲ ’ವ’ !
ಹಳೇ ಮೈಸೂರು ಮತ್ತಿತರ ಗ್ರಾಮೀಣ ಕಡೆಗಳಲ್ಲೂ ಇದು ಕಂಡು ಬರ್ತದ .

Rating
No votes yet

Comments