ಧೂಮ್ ೩
ಕ್ರಿಸ್ಮಸ್ ರಜೆಯಲ್ಲಿ ಮಿನಿಮಮ್ ಖರ್ಚಲ್ಲಿ ಚಿಕಾಗೋ, ಸ್ವಿಝರ್ಲ್ಯಾಂಡ್.. ಸುತ್ತಾಟ! ಹೆಚ್ಚೆಂದರೆ ೫೦೦ ರೂ ಖರ್ಚಾಗಬಹುದು (ಟಿಕೆಟ್, ಪಾರ್ಕಿಂಗ್, ಕೂಲ್ಡ್ರಿಂಕ್ಸ್ ಎಲ್ಲಾ ಸೇರಿ ಪರ್ ಹೆಡ್). ರೆಡಿನಾ? ಸಮೀಪದ ಮಲ್ಟಿಪ್ಲೆಕ್ಸ್ಲ್ಲಿ "ಧೂಮ್ ೩" ನೋಡಿ. :)
ಸಿಂಪ್ಲ್ ಆಗಿ ಹೇಳಬೇಕೆಂದರೆ, "ಧೂಮ್ ೧" ಮತ್ತು "ಧೂಮ್ ೨" ರಂತೆ ಇದರ ಕತೆಯೂ ರಾಬರಿನೇ.. ಈ ಬಾರಿ ಇಂಡಿಯಾಕ್ಕೇನೂ ತೊಂದರೆ ಇಲ್ಲ. ವಿದೇಶೀ ಬ್ಯಾಂಕ್ ರಾಬರಿ. ಅಲ್ಲಿನ ಪೋಲೀಸರಿಗೆ ಸಾಧ್ಯವಾಗದೇ, ನಮ್ಮ ಭಾರತದ ಜಯ್(ಅಭಿಷೇಕ್ ಬಚನ್) ಮತ್ತು ಅಲಿ(ಉದಯ್ ಚೋಪ್ರ)ಯವರನ್ನು ಕರೆಸುವರು!!
ಚಿಕಾಗೋ( http://www.suntimes.com/entertainment/movies/24449129-421/chicago-takes-... ) ಸ್ವಿಝರ್ಲ್ಯಾಂಡ್ ( http://www.filmapia.com/sites/default/files/filmapia/pub/place/8999515.jpg ) ಗಳ ಸೂಪರ್ ಸೀನರಿ ಇದೆ. ಆಕ್ಟಿಂಗ್ ಮಟ್ಟಿಗೆ ಆಮೀರ್ ಖಾನ್ (ಚಿತ್ರದಲ್ಲಿ ವಿಲನ್) ಫೈಟ್, ಬೈಕ್ ಸ್ಟಂಟ್, ಸರ್ಕಸ್, ಡ್ಯಾನ್ಸ್, ಕಾಮಿಕ್ ಸೀನ್ ಎಲ್ಲದರಲ್ಲೂ ಪರ್ಫೆಕ್ಟ್...ಸೂಪರ್ ಸೆ ಊಪರ್.
ಅಭಿಷೇಕ್ ಮತ್ತು ಚೋಪ್ರಾ ಧೂಮ್ ೧ ಮತ್ತು ೨ ರ ಆಕ್ಟಿಂಗ್ನ್ನೇ ಇಲ್ಲೂ ಮುಂದುವರೆಸಿರುವರು. ಕತ್ರಿನಾ ಧರೆಗಿಳಿದ ಅಪ್ಸರೆಯೇ.. http://www.youtube.com/watch?v=DczsvsaCwpc
ಯಾಕೆ ವಿದೇಶೀ ಬ್ಯಾಂಕ್ ರಾಬರಿಯ ಕತೆ ಮಾಡಿದ್ದಾರೆ? ಇಂಡಿಯಾದ್ದು ಯಾಕಿಲ್ಲಾ? ವಿದೇಶದಲ್ಲಿ ಸರ್ಕಸ್ ನಡೆಸುತ್ತಿದ್ದ ತಂದೆ, ವಿದೇಶೀ ಬ್ಯಾಂಕ್ ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿದ ಸೇಡು ಮಗ ಆಮೀರ್ಖಾನ್ ತೀರಿಸುವುದು. ಸಾಲ ಪಡೆದ ರೈತರು ತೀರಿಸಲಾಗದೇ ಆತ್ಮಹತ್ಯೆ ಮಾಡಿದ ಲೆಕ್ಕ ಇಟ್ಟರೆ..ಭಾರತದ ಎಲ್ಲಾ ಬ್ಯಾಂಕ್ಗಳಿಗೂ ಆಮೀರ್ ಖಾನ್ ನುಗ್ಗಬೇಕಾಗುವುದು :)
ಸಿನೆಮಾ ಮುಗಿದಾಗ ಆಮೀರ್ ಖಾನ್ ಸ್ಟೈಲಲ್ಲಿ ನನ್ನ ಬೈಕ್ ಹತ್ತಿ ಸ್ಟಾರ್ಟ್ ಮಾಡಿ ............................ದ್ದು ಅಷ್ಟೇ.. ಮಾಲ್ನಿಂದ ರಸ್ತೆಗೆ ಬರಲು ಇಲ್ಲಿನ ಟ್ರಾಫಿಕ್ನಲ್ಲಿ ಒಂದು ಗಂಟೆ ಬೇಕಾಯಿತು.:(
Comments
ಉ: ಧೂಮ್ ೩
ನನ್ನ ಬೈಕ್ ಹತ್ತಿ ಸ್ಟಾರ್ಟ್ ಮಾಡಿ ............................ದ್ದು ಅಷ್ಟೇ......
ಅಯ್ಯಯ್ಯೋ ಇದೇನು ಗಣೇಶರು ಸಂಪದದ ಹಾಗೆ ತಮ್ಮ ರೂಪ ಬದಲಿಸುತ್ತಿದ್ದಾರೆ....
ಆ ಹಳೆಯ ಸ್ಕೂಟರ್ ಏನಾಯಿತು ! ಅದಕ್ಕೆ ಏನೊ ಹೆಸರಿಟ್ಟಿದಿರಲ್ಲ..... ಬೆಟ್ಟದ ಮೇಲಿಂದ ತಳ್ಳಿ ಬಂದು ಬಿಟ್ಟಿರಾ ?
ಏನೋಪ ಆರ್ಥವಾಗಲ್ಲ.... ಒಂದು ಮಲ್ಲಿಗೆ ಹೂವಿನ ಬಳ್ಳಿಯ ಮನೆಯಿಂದ... ಫ್ಲಾಟ್
ಸ್ಕೂಟರ್ ನಿಂದ ಬೈಕ್ .... ಸಪ್ತಗಿರಿಯ ಭಯಕ್ಕೆ ಹೀಗೆ ದಿನವೂ ರೂಪ ಬದಲಸಿಬೇಕಿಲ್ಲ ಬಿಡಿ.
In reply to ಉ: ಧೂಮ್ ೩ by partha1059
ಉ: ಧೂಮ್ ೩
:) ಸಪ್ತಗಿರಿಯ ಭಯಕ್ಕೆ...:) :)
ಪಾರ್ಥರೆ, ಆಫೀಸ್ಗೆ ಹೋಗುವ ವಾಹನದಲ್ಲೇ ಸಿನೆಮಾಕ್ಕೆ ಅದೂ ಮಾಲ್ನಲ್ಲಿ ಹೋದರೆ ನನಗೆ ಒಳಗೆ ಬಿಟ್ಟಾರಾ?:) ಆಫೀಸ್ಗೆ ಬೈಕ್ ತೆಗೆದುಕೊಂಡು ಹೋದರೆ, ಸ್ವಲ್ಪ ಈಗ ಬಂದೆ ಅಂತ ಉದ್ರಿ ತೆಗೆದುಕೊಂಡು ಹೋಗುವವರೇ ಜಾಸ್ತಿ. ಪರ್ಕುಟ್ ಸ್ಕೂಟರ್ ಲಾಕ್ ಮಾಡದಿದ್ದರೂ ಮುಟ್ಟುವುದಿಲ್ಲ. :)
ಮಧ್ಯಾಹ್ನ ಸ್ವಲ್ಪ ಫ್ರೀ ಟೈಮಿತ್ತು. ಹಾಗೇ ಬಂದವನು ಸಂಪದ ತೆರೆದೆ.. ಮತ್ತೆ ರಾತ್ರಿ ಬರುವೆ..
ಉ: ಧೂಮ್ ೩
ಗಣೇಶ ಜಿ, ತಮ್ಮ ಧೂಮ್ 3 ಚಿತ್ರ ಪರಿಚಯ ವಿನೂತನ. ಸಿನೇಮಾದಂತೆ ರೋಚಕ. ಇನ್ನು ಸ್ವಚ್ಜರಲಂಡ್ ಮತ್ತಿತರ ದೃಶ್ಯಗಳಿಗೆ ಅದನ್ನು ನೋಡಲೇಬೇಕೆನಿಸಿದೆ. ಧನ್ಯವಾದಗಳು ಸರ್.
In reply to ಉ: ಧೂಮ್ ೩ by lpitnal
ಉ: ಧೂಮ್ ೩
ಇತ್ನಾಳರೆ, ಚಿತ್ರದ ಕ್ಲೈಮ್ಯಾಕ್ಸ್ "contra dam"ನಲ್ಲಿ ಚಿತ್ರೀಕರಿಸಿರುವರು. ಅದರ ಬಗ್ಗೆ ಕೆಲ ವಿವರ- http://en.wikipedia.org/wiki/Contra_Dam
ಉ: ಧೂಮ್ ೩
ಟಿಕೇಟ್ ಇಲ್ಲದೇ ಸಿನಿಮಾ ತೋರಿಸಿಬಿಟ್ಟಿರಲ್ಲ ಗಣೇಶಣ್ಣ.. ಧನ್ಯವಾದಗಳು.
ಧೂ....ಮ್
In reply to ಉ: ಧೂಮ್ ೩ by ಕೀರ್ತಿರಾಜ್ ಮಧ್ವ
ಉ: ಧೂಮ್ ೩
ಕೀರ್ತಿರಾಜರೆ, Contra Damನಿಂದ ಒಬ್ಬಳು ಧೂ........................ http://www.youtube.com/watch?v=07kA52UIttY ...ಮ್ಕಿದ ದೃಶ್ಯ ನೋಡಲು ಮರೆಯದಿರಿ.