ನಂದನ ಕಂದನಿಗೆ

ನಂದನ ಕಂದನಿಗೆ

ಪೊಂಗೊಳಲ ರಂಧ್ರಗಳ

ಚೆಂಬೆರಳ ತುದಿಗಳಲಿ

ಮುಚ್ಚುತಾ ತೆರೆಯುತಿಹನ



ತಿರುತಿರುಗಿ ಮರಮರಳಿ

ತನ್ನುಸಿರ ಗಾಳಿಯನು

ಕೊಳಲಿನಲಿ ತುಂಬುವವನ



ಅರಳಿದ ತಾವರೆಯ

ಹೋಲುವಾ ಕಂಗಳಿಹ

ಚೆಂದದಾ ನಿಲುವಿನವನ



ವಂದಿಸುವೆ ನಾನೀಗ

ಬೃಂದಾವನದಿ ನಲಿವ

ನಂದಗೋಪನ ಕಂದನ

 

 

 
ಸಂಸ್ಕೃತ ಮೂಲ ( ಲೀಲಾ ಶುಕನ ಕೃಷ್ಣಕರ್ಣಾಮೃತದಿಂದ):
 

ಅಂಗುಲ್ಯಗ್ರೈಃ ಅರುಣಕಿರಣೈಃ ಮುಕ್ತಸಂರುದ್ಧರಂಧ್ರಂ

ವಾರಂ ವಾರಂ ವದನಮರುತಾ ವೇಣುಮಾಪೂರಯಂತಂ |
ವ್ಯತ್ಯಸ್ತ್ಯಾಂಘ್ರಿಂ ವಿಕಚಕಮಲಚ್ಛಾಯವಿಸ್ತಾರ ನೇತ್ರಂ
ವಂದೇ ವೃಂದಾವನಸುಚರಿತಂ ನಂದಗೋಪಾಲ ಸೂನುಂ ||
 
ಸಂಪದಿಗರಿಗೆಲ್ಲ  ದೀಪಾವಳಿಯ ಹಾರೈಕೆಗಳು.
 
-ಹಂಸಾನಂದಿ



ಚಿತ್ರ:  ನಮ್ಮ ಮನೆಯ ಹಜಾರದಲ್ಲಿರುವ ವೇಣುಗೋಪಾಲ ಕೃಷ್ಣ.  ಈ ಪದ್ಯದಲ್ಲಿ ಹೇಳಿರುವ "ವ್ಯತ್ಯಸ್ತ್ಯಾಂಘ್ರಿಂ" ಎಂಬ ನಿಲುವಿಗೆ ಒಳ್ಳೇ ಉದಾಹರಣೆಯೆನಿಸಿ ಹಾಕಿದ್ದೇನೆ.
Rating
No votes yet