ನಂದ ಕಿಶೋರನ ಹುಟ್ಟುಹಬ್ಬ!

ನಂದ ಕಿಶೋರನ ಹುಟ್ಟುಹಬ್ಬ!

ಅನಿಕೇತ, ಬ್ರ್ಹಹ್ಮಜ್ಞಾನಿ, ಗೋಪಿ ವಲ್ಲಭ, ಮುರಲಿಮನೋಹರನಾದ ಶ್ರೀಕೄಷ್ಣನ ಜನ್ಮದಿನದ ಶುಭಾಶಯಗಳು! ಮಹಾವಿಷ್ಣುವಿನ ಪರಿಪೂರ್ಣಾವತಾರವಾದ ಶ್ರೀಕೄಷ್ಣನು ಭಗವದ್ಗೀತೆಯಲ್ಲಿ ಎಲ್ಲಾ ರೀತಿಯ ಮಾನವರಿಗೆ ಹೊಂದುವಂತೆ ವಿವಿದ ರೀತಿಯಲ್ಲಿ ಜ್ಞಾನೋಪದೇಶ ಮಾಡುತ್ತಾನೆ. ಭಕ್ತಿ, ಜ್ಞಾನವಿಜ್ಞಾನ, ಧ್ಯಾನ, ಕರ್ಮ ಯೋಗಗಳ ಮುಲಕ ಅರ್ಜುನನೊಂದಿಗೆ ಎಲ್ಲಾ ಮಾನವ ಕುಲಕ್ಕೂ ವಿಶ್ವ ದರ್ಶನ ಮಾಡಿಸುತ್ತಾನೆ. ಮೋಕ್ಷ ಪ್ರಾಪ್ತಿಗೆ ಸುಲಭವಾದ ಭಕ್ತಿ ಮತ್ತು ಕರ್ಮದ ಮಾರ್ಗ ತೋರಿಸಿದ್ದಾನೆ.
ನಮ್ಮ ಪ್ರತಿಯೊಂದು ಕೆಲಸದಲ್ಲಿ ಪ್ರಾಮಾಣಿಕತನ, ಪ್ರೀತಿ ಮತ್ತು ಭಕ್ತಿಯಿರಲಿ ಎಂದು ಉಪದೇಶಿಸುತ್ತಾನೆ. ನೂರಾರು ಹರಕೆ ಹೊತ್ತು ಎಲ್ಲಾ ದೇವಸ್ಥಾನದ ಭೇಟಿ ಮಾಡಿ ತೋರಿಕೆಯ ಭಕ್ತಿಗಿಂತ ಒಂದೇ ತುಲಸೀ ದಳದ ಅರ್ಪಣೆ ಮೇಲು ಎನ್ನುತ್ತಾನೆ! ತಾಳ ಜಾಗಟೆ ಶಂಖ ಘಂಟೆ ಮೊದಲಾದ ವಾದ್ಯಗಳಿಗಿಂತ ನಿಷ್ಕಳಂಕಿತ ಪ್ರೀತಿ ತೋರಿಸಿ ಎನ್ನುತ್ತಾನೆ.ಪ್ರತಿಯೊಬ್ಬರೂ ತಮ್ಮ ತಮ್ಮ ಕರ್ತವ್ಯವನ್ನು ಮಾಡಿ, ಫಲಾಫಲಗಳನ್ನು ಹರಿಯ ಇಚ್ಚೆಗೆ ಬಿಡಿ, ಎಲ್ಲವೂ ಸರಿಯಾಗುತ್ತದೆ ಎಂದು ಭರವಸೆ ಕೊಡುತ್ತಾನೆ.
ಪ್ರಕೄತಿಯಲ್ಲಿ ವಾಸಿಸುವ ಪ್ರತಿಯೊಂದು ಜೀವಿಯನ್ನು ಪ್ರೀತಿಸಿ, ಮಾನವೀಯತೆ ತೋರಿಸಿದರೆ ನಾವು ಭಗವಂತನನ್ನೇ ಆರಾದಿಸಿದಂತಾಗುತ್ತದೆ. ಎಲ್ಲರಿಗೂ ಸನ್ಮಂಗಳವಾಗಲಿ. ವಿಶ್ವ ಶಾಂತಿ ನೆಲೆಸಲಿ. ಎಲ್ಲಾ ಧರ್ಮ, ಜಾತಿಯನ್ನು ಮೀರಿ ಮಾನವ ಜಾತಿಯೊಂದೇ ಮುಖ್ಯವಾಗಲಿ! ಮಾನವೀಯತೆಯೇ ಮುಖ್ಯ ಗುಣವಾಗಲಿ, ಭಗವಂತನ ಆರಾಧನೆಯ ರೂಪವಾಗಲಿ.

Rating
No votes yet