ನಕಾರಾತ್ಮಕ ಮತದ ಬಗೆಗೆ ದಿಕ್ಕು ತಪ್ಪಿಸುವ ಪತ್ರಿಕಾ ವರದಿ

ನಕಾರಾತ್ಮಕ ಮತದ ಬಗೆಗೆ ದಿಕ್ಕು ತಪ್ಪಿಸುವ ಪತ್ರಿಕಾ ವರದಿ

ಇಂದಿನ ವಿಜಯ ಕರ್ನಾಟಕದಲ್ಲಿ ನಕಾರಾತ್ಮಕ ಮತಗಳೂ ಗಣನೆಗೆ ಎಂದು ಓದಿ ತುಂಬಾ ಕುಶಿಯಾಯಿತು. ಎಲ್ಲವೂ ನನ್ನ ಅನಿಸಿಕೆಗೆ ಅನುಗುಣವಾಗಿಯೇ ಇದೆ. ರಾಜಕಾರಣಿಗಳಿಗೆ ಸ್ವಲ್ಪವಾದರೂ ಬಿಸಿ ಮುಟ್ಟಿಸಲು ಸಾದ್ಯ ಅಂದುಕೊಂಡೆ. ಓದುತ್ತಾ ಹೋದಂತೆ ಇವರೆಲ್ಲೋ ದಾರಿ ತಪ್ಪಿದ್ದಾರೆ ಅನ್ನುವ ವಿಚಾರ ಸ್ಪಷ್ಟವಾಯಿತು. ಆದರೂ ತಿರುಳೆಷ್ಟು ಅರಿಯಲು ಆಂಗ್ಲ ಪತ್ರಿಕೆ ಬಿಡಿಸಿದೆ. ಆಗ ನಿಜಕ್ಕೂ ಅಘಾತವಾಯಿತು. ಪತ್ರಿಕೆಯೊಂದರ ಬಾಷಾಂತರ ಇಷ್ಟೋಂದು ಕಳಪೆ ಮಟ್ಟದ್ದಾಗಿರಬಾರದು ಅನ್ನಿಸಿತು.

ದೆಹಲಿಗೆ ಸಿಮಿತವಾದ ರಾಜ್ಯ ಮಟ್ಟದ ಅಧಿಕಾರಿಗಳು ಕೊಟ್ಟ ಘೋಷಣೆಯನ್ನು ಇಂದಿನ ವಿಜಯ ಕರ್ನಾಟಕ ಇಡೀ ದೇಶಕ್ಕೆ ಅನ್ವಯ ಎಂದು ಪ್ರಕಟಿಸಿದೆ. ಕಳೆದ ಚುನಾವಣೆಯಲ್ಲಿ ಲೆಕ್ಕಕ್ಕೆ ತೆಗೆದುಕೊಂಡಿರಲಿಲ್ಲ. ಈ ಸಲ ಲೆಕ್ಕ ಮಾಡಿ ಘೋಷಿಸುತ್ತೇವೆ ಆದರೆ ಅದು ಫಲಿತಾಂಶದ ಮೇಲೆ ಯಾವುದೇ ಪ್ರಭಾವ ಬೀಳದೆಂದು ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ. ಲಕ್ಷ ಮತದಾರರಲ್ಲಿ ಉಳಿದವರೆಲ್ಲರೂ ನಿರಾಕರಣ ಮತ ಹಾಕಿ ಹತ್ತು ಜನ ಮತದಾನ ಮಾಡಿದರೂ ಅವರಲ್ಲಿ ಹೆಚ್ಚು ಮತ ಪಡೆದ ಅಭ್ಯರ್ಥಿ ವಿಜಯಿ ಎಂದೇ ನಮ್ಮ ನಿಲುವು ಎಂದಿದ್ದಾರೆ . ಬಾಷಾಂತರಗೊಳ್ಳುವಾಗ ವಿಷಯದ ಅರ್ಥವೇ ಬದಲಾಗಿದೆ.

ಇನ್ನೊಂದು ಮಾತಿನಲ್ಲಿ ಲಕ್ಷ ಮತದಾರರಲ್ಲಿ 99,990 ನಿರಾಕರಣ ಮತ ಚಲಾಯಿಸಿದರೂ ಮತದಾನವಾದ ಹತ್ತರಲ್ಲಿ ಆರು ಮತ ಪಡೆದವರನ್ನು ವಿಜೇತನೆಂದು ಘೋಹಿಸುತ್ತೇವೆ ಎಂದಿದ್ದಾರೆ. ಅಭ್ಯರ್ಥಿಯ ಗೆಲುವಿನ ಅಂತರಕ್ಕಿಂತ ನಕಾರಾತ್ಮಕ ಮತಗಳ ಸಂಖ್ಯೆಯೇ ಹೆಚ್ಚಿದ್ದರೆ ಆ ಕ್ಷೇತ್ರಕ್ಕೆ ಮರುಮತದಾನ ನಡೆಯುವುದು. ಕಣದಲ್ಲಿದ್ದ ಯಾವ ಅಭ್ಯರ್ಥಿಯೂ ಪುನಹ ಸ್ಪರ್ಧಿಸುವಂತಿಲ್ಲ ಎನ್ನುವುದು ಸಂಪೂರ್ಣ ತಪ್ಪು ವರದಿ.

ನಿರಾಕರಣ ಮತಕ್ಕೆ ಇನ್ನೂ ಮೌಲ್ಯ ಬಂದಿಲ್ಲ ಎನ್ನುವುದು ಬೇಸರದ ಸಂಗತಿ. ಮೌಲ್ಯ ಬರಲು ನಮ್ಮ ಜನಪ್ರತಿನಿಧಿಗಳು ಅವಕಾಶ ಕೊಡುವುದಿಲ್ಲ. ನಮ್ಮ ಮತವನ್ನು ಬೇರೆಯವರು ಚಲಾವಣೆ ಮಾಡುವುದರ ತಪ್ಪಿಸಲು ಹಾಗೂ ಒಂದು ಪ್ರತಿಭಟನಾ ಸಂದೇಶ ಕಳುಹಿಸಲು ಮಾತ್ರ ಈ ನಿರಾಕರಣ ಮತದಿಂದ ಸಾದ್ಯ. ಮುಂದಿನ ಚುನಾವಣೆಯಲ್ಲಾದರೂ ಮೌಲ್ಯ ದೊರಕಲೆಂದು ಹಾರೈಸೋಣ.

http://www.vijaykarnatakaepaper.com/epaper/pdf/2009/04/27/20090427a_013101006.pdf

http://www.hindustantimes.com/StoryPage/StoryPage.aspx?id=77e7c054-4be3-4bba-ad99-0bb7295a8711

Rating
No votes yet

Comments