(ನ)ಗಣ್ಯರು
(ನ)ಗಣ್ಯರು
=====
ಈ ದಿನದ ಬಾನುವಾರದ ಪ್ರಜಾವಾಣಿ ಪತ್ರಿಕೆಯ ಸಾಹಿತ್ಯ ಪುರವಣಿಯಲ್ಲಿ , ಕವಿ, ಪ್ರಕಾಶಕ ವಸುಧೇಂದ್ರ ಎಸ್ ರವರ ಬರಹ ಒಂದಿದೆ 'ಆಡಿಯೋ ಪುಸ್ತಕಗಳು ಹೆಚ್ಚಾಗಿ ಬರಬೇಕು..." . ಬರಹದ ಕಟ್ಟ ಕಡೆಯ ಸಾಲುಗಳನ್ನು ನಿಮ್ಮೆಲ್ಲರಿಗಾಗಿ ಇಲ್ಲಿ ಹಾಕುತ್ತಿದ್ದೇನೆ
ಕಥ್ಜಾಸಂಕಲನದ ಹಿಂದಿನ ದಿನ ನನಗೊಂದು ವಿಶೇಷ ದೂರವಾಣಿ ಕರೆ ಬಂತು.
"ಇದು ಛಂಧ ಪುಸ್ತಕದ ಅಂಗಡಿಯೇನ್ರಿ...."
"ಹೌದು"
'ನಾಳೆ ಪುಸ್ತಕ ಬಿಡುಗಡೆ ಸಮಾರಂಭ ಅದೆ ಅಲ್ವೇನ್ರಿ?"
'ಹೌದು'
"ನಾವು ಪೋಲಿಸ್ ಸ್ಟೇಷನ್ನಿಂದ ಪೋನ್ ಮಾಡ್ತೀದ್ದೀವಿ"
ನನ್ನ ಎದೆ ಬಡಿತ ಎರಡು ಕ್ಷಣ ನಿಂತಿತು, ಪೋಲಿಸು ಕಾನೂನು ಎಂದರೆ ನನಗೆ ವಿಪರೀತ ಭಯವಿದೆ. ಆದ್ದರಿಂದ ಉತ್ತರಿಸದೆ ಸುಮ್ಮನೆ ಮೌನ ವಹಿಸಿದೆ.
'ಯಾರಾದ್ರು ಗಣ್ಯವ್ಯಕ್ತಿ ಬರ್ತಾ ಇದ್ದಾರೇನ್ರಿ?"
"ಹೌದು ಸಾರ್, ಸಾಗರದಿಂದ ಹಿರಿಯ ವಿಮರ್ಶಕ ಟಿ.ಪಿ.ಆಶೋಕ, ಮುಧೋಳದಿಂದ ಕನ್ನಡದ ಮುಖ್ಯಕವಿ ಆನಂದ ಝಂಜರವಾಡ ಅವರೂ ಬರ್ತ್ತಿದ್ದಾರೆ"
"ಥೂ ಥೂ ಥೂ ! ಅಂತವರರೆಲ್ಲ ಅಲ್ಲಾ ಬಿಡ್ರಿ ! ಗಣ್ಯವ್ಯಕ್ತಿಗಳು ಅಂದರೆ ರಾಜಕೀಯದವರು ಸಿನಿಮಾದವರು ಅಂತಹವರು ಯಾರಾದರು ಯಾರಾದ್ರು ಬರ್ತಾರಾ?"
'ಇಲ್ಲ ಸಾರ್ ಬರೀ ಸಾಹಿತ್ಯಾಸಕ್ತರು ಮಾತ್ರ ಬರ್ತಾರೆ "
'ಹಂಗಾರೆ ನಿಮಗೆ ಸೆಕ್ಯೂಟರಿ ಬೇಕಾಗಿಲ್ಲ ಬಿಡ್ರಿ' ಎಂದ ಅವನೇ ಪೋನ್ ಡಿಸ್ಕನೆಕ್ಟ್ ಮಾಡಿದ
ಸಾಹಿತ್ಯ ಲೋಕದಲ್ಲಿ ಜೀವಿಸುತ್ತಿರುವ ನಾವು ಅಲ್ಪಸಂಖ್ಯಾತರು, ಏನೇ ಸಾಧನೆ ಮಾಡಿದರು ಜಗತ್ತಿನ ಕಣ್ಣಲ್ಲಿ ನಾವು ಗಣ್ಯವ್ಯಕ್ತಿಗಳಂತು ಆಗಲು ಸಾದ್ಯವಿಲ್ಲ. ಆದರೆ ನಮ್ಮ ನಮ್ಮ ಕಣ್ಣಲ್ಲಿ ನಾವು ನಗಣ್ಯರಾಗದೆ ಉಳಿದುಕೊಳ್ಳುವದಷ್ಟೆ ನಮಗೆ ಈಗಿರುವ ದಾರಿ
Comments
ಉ: (ನ)ಗಣ್ಯರು
ನಗ-ನಾಣ್ಯ ಇಲ್ಲದವರು ನಗಣ್ಯರು, ಅಲ್ಲವೇ ಪಾರ್ಥ ಸರ್? :))
In reply to ಉ: (ನ)ಗಣ್ಯರು by makara
ಉ: (ನ)ಗಣ್ಯರು
ನಗ-ನಾಣ್ಯ ಇಲ್ಲದವರು ನಗಣ್ಯರು,
ಸಂಪದದಲಾಗಿಹರಲ್ಲ ಅಗ್ರಗಣ್ಯರು,
ಕರ್ಮ ಸಿದ್ಧಾಂತ ಯೋಗಿವರೇಣ್ಯರು,
ಫಲಾಪೇಕ್ಷೆಯಿರದೆ ನೀ ಮಾಡೆಂದರು,
ಆ ಕರ್ಮಫಲವೆ - ಬರಹಗಾರನ ಹಾಡು,
ಹೆಂಡತಿಯೂ ಪರಿಗಣಿಸದೆ-ನಾಯಿಪಾಡು!
:-)
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು