ನಗರ ಜೀವನ .

ನಗರ ಜೀವನ .

ಹಳ್ಳಿಗಳಲ್ಲಿ ಹೇಳುವುದು ಸಾಮಾನ್ಯ ,
ನಗರ ಜೀವನವೆಂದರೆ ಅದೊಂದು " ದಂಡಕಾರಣ್ಯ " ;
ಅದಕ್ಕೆ ಇರುವುವು ಕಾರಣ ಅನನ್ಯ .

ವನಸಿರಿಯ ತುಂಬಿರುವ ಹಳ್ಳಿ ಬಿಟ್ಟ -
ಆಗಲೇ ರೈತ ಕೆಟ್ಟ ;
ಅವನ ಬುದ್ಧಿ ಆಯಿತು ಏಕೆ ಸೊಟ್ಟ ?

ಕಾರ್ಯ ಹುಡುಕಲು ನಗರಕೆ ಬಂದ ,
ಸೂರ್ಯನ ಧಗೆಯಲಿ ಚೆನ್ನಾಗಿ ಬೆಂದ ,
ನೆಲೆಯಿಲ್ಲದೇ , ಹೊಟ್ಟೆಗಿಲ್ಲದೇ ನೊಂದ .

ನಗರದಲಿ ಎಬ್ಬಿಸಲು ಇರುವುದಿಲ್ಲ ಕೋಳಿ ,
ಆದರು ಎಳುತ್ತಾನೆ ಕಾರ್ಖಾನೆಗಳ ಸದ್ದು ಕೇಳಿ ,
ಅವನ್ನು ಬಯ್ಯುವಿರಿ ಎಲ್ಲರೊಂದಿಗೆ ಘೀಳಿ .

ಕಛೇರಿಗೆ ಹೋದರೆ ದ್ವಿಚಕ್ರದ ಮೇಲೆ ,
ಕೇಳುವನು ಮನದಲ್ಲಿ ಅರಿಯದೆ -
" ಏನು ಮಾಡಲಿ ಎಲೈ ಕಾಲನೇ ?
ತೆಗೆದುಕೊಳ್ಳಬೇಕಾಗುವುದೇ " Insurance " ನ್ನೇ . . . ? " ಎಂದು !

ಇಲ್ಲೋ ಸಿಗುವುದಿಲ್ಲ ಒಳ್ಳೆಯ ಗಾಳಿ ,
ವಾಹನಗಳು ಕಾರ್ಖಾನೆಗಳು ಒಟ್ಟಿಗೇ ನಡೆಸಿವೆ ದಾಳಿ .
ಈಗ ನಮ್ಮನ್ನು ಬದುಕಿಸಲು -
ಭೂಮಿಗಿಳಿದು ಬರಬೇಕು ಆ ಭದ್ರಕಾಳಿ !

Rating
No votes yet