ನಗುವುದೋ ಅಳುವುದೋ ನೀವೇ ಹೇಳೀ......!

ನಗುವುದೋ ಅಳುವುದೋ ನೀವೇ ಹೇಳೀ......!

 

ಬೆಳಗ್ಗೆ ೯:೩೦, ನಾನು ಆಫೀಸ್ ಗೆ ರೆಡಿ ಆಗುವಸ್ಟುರಲ್ಲಿ ಕ್ಯಾಬ್ ಗೆ ಟೈಮ್ ಆಗಿತ್ತು. ಅವತ್ತು ಯಾಕೋ ಏನೋ ಗೊತ್ತಿಲ್ಲಾ ತುಂಬಾ ಬೇಜಾರಗಿತ್ತು ...:-(. ಏನ್ ಮಾಡೋದು ಬಿಡೀ...ಹೊಟ್ಟೆ ಕೆಳ್ಬೇಕಲ್ಲ ಆಫೀಸ್ ಗೆ ಹೋಗ್ಲೇಬೇಕು,ದುಡಿಲೇಬೇಕು, "ಉದ್ಯೋಗಂ ಪುರಷ ಲಕ್ಷಣಂ" ಅಂತ ಗಾದೆನೆ ಇದೆ.

ಯಾವನ್ ಹೇಳಿದ್ನೋ ಈ ಗಾದೇನಾ..?  ಪಾಪ..... ಏನು ಮಾಡೋದು ಬಿಡಿ, ಅವನು ಗಾದೆ ಮಾಡಿದಾಗ ಈ IT ಉದ್ಯೋಗ ಇರಲಿಲ್ಲ ಅಲ್ವ ???. ಇದ್ದಿದ್ರೆ ಈ ಗಾದೆ ಖಂಡಿತ ಹೇಳ್ತಾ ಇರಲಿಲ್ಲ ಅನ್ಸುತ್ತೆ..!

ಅದೇ ಯೋಚನೆಯಲ್ಲಿ...ಅಂತು ಕಷ್ಟಪಟ್ಟು ೯:೩೦ ಟೈಮ್ ಸರಿಯಾಗಿ ಕ್ಯಾಬ್ pickup point ಗೆ ಬಂದು ನಿಂತೆ, ಕ್ಯಾಬ್ ಕೂಡ ಬಂತು.

ನನಗೆ ಆಫಿಸ್ ಕ್ಯಾಬಿನಲ್ಲಿ ಸುಮ್ಮನೆ ಕುಳಿತು ಕೊಳ್ಳೋದೇ ಬೇಜಾರು, ಕ್ಯಾಬ್ ಡ್ರೈವರ್ ಕೂಡ ಸುಮ್ಮನೆ ಎಂದೂ ಡ್ರೈವ್ ಮಾಡಲ್ಲ... ಏನಾದ್ರು ಒಂದು ವಿಷಯದ ಬಗ್ಗೆ ತರ್ಕ ಮಾಡ್ತಾನೆ . ನಾನು ಕ್ಯಾಬ್ ನಲ್ಲಿ  ನನ್ನ ಪಾಡಿಗೆ  ಪೇಪರ್ ಓದುತ್ತ  ಕುಳಿತಿದ್ದೆ , ನಮ್ಮ ಡ್ರೈವರ್ ಏನೂ ಗೊಣಗಿ ಕೊಳ್ಳುತ್ತಾ ಇದ್ದ.  ಸಾರ್ ಕಳ್ಣನ್ ಮಕ್ಕಳು ಪೋಲಿಸ್ ರು ೪ ಗಂಟೆ ಸ್ಟೇಷನ್ ನಲ್ಲಿ ಕೂರಿಸಿ ಫೈನ್ ಕಟ್ಟಿಸಿ ಕೊಂಡ್ರು ಅಂದ . ಅಷ್ಟು ಮಾತ್ರ ನನ್ನ ಕಿವಿಗೆ ಬಿತ್ತು. ಕ್ಯಾಬ್ ನಲ್ಲಿ ಎಲ್ಲ ಜೋರಾಗಿ ನಗ್ತಾ ಇದ್ರು ........! ನನಗೆ ಅರ್ಥ ಆಗ್ಲಿಲ್ಲ.

ನಾನು ಆಮೇಲೆ ಅವರನ್ನ ಕೇಳಿದೆ, ಏನೂ ಪೋಲಿಸ್ ಸ್ಟೇಷನ್ ಗೆ ಹೋಗಿದ್ರಾ ....!   ಓಹ್, ಫೈನ್ ಬೇರೆ ಕಟ್ಟಿದ್ರಾ ಅಂದೇ...!
ಅದಕ್ಕೆ ಕ್ಯಾಬ್ ಡ್ರೈವರ್....ಸಾರ್ ನನ್ನ ಕಥೆ ನಿಮ್ಗೆ ಜೋಕ್ ಆಗಿದೆನಾ ಅಂದ...! ಅದಕ್ಕೆ ಜೊತೆಯಲ್ಲಿ ಇದ್ದ ಸ್ನೇಹಿತರು ನೀವು ಇನ್ನುಂದು ಸಾರಿ ಆದನ್ನೇ ಹೇಳಬೇಕು ಅಂತ ಕೇಳ್ತಾ ಇದಾನೆ ಅಂದ್ರು.

ಆಗ ಮತ್ತೆ ನಮ್ಮ ಡ್ರೈವರ್ ಶುರು ಮಾಡಿದ ......!
ಸಾರ್, ನಾನು ನನ್ನ ಗೆಳೆಯ  ಬೆಂಗಳೂರಿಗೆ ಕೆಲಸ ಹುಡುಕಿ ಕೊಂಡು ಬಂದ್ವಿ ನನ್ನ ಗೆಳೆಯ  ಎಬ್ಬಟ್ಟು ಸಾರ್ ....ಮಗನಿಗೆ ಓದಾಕೆ ಬರಲ್ಲ , ಬರೆಯೋಕೆ ಬರಲ್ಲ. ಫಿಲಂ ಡೈರೆಕ್ಟ್ ಆಗಬೇಕು ಅಂತ ಹೇಳ್ತಾ ಇದ್ದ ...ನಾನು ಆವನು ಹೇಳಿದ ಕಥೆಗಲ್ನೆಲ್ಲ ಕೇಳ್ತಾ ಇದ್ದೆ. ನನಗೆ ಫಿಲಂನಲ್ಲಿ ಒಂದು ಚಾನ್ಸ್ ಕೊಡಿಸ್ಥಿನಿ ಅಂತ ಅವನು ಹೇಳ್ತಾ ಇದ್ದ, ನಾನು ಕನಸಿನ ಕೋಟೆನೆ ಕಟ್ಟಿಕೊಡು ಆವನು ಹೇಳಿದ ಕಥೆಗಳನ್ನು ಬರೆಯೋಕೆ ಶುರು ಮಾಡಿದೆ.

ಒಂದು ದಿನ ಪಾರ್ಕ್ನಲ್ಲಿ ನನ್ನ ಗೆಳೆಯ ಕಥೆ ಹೇಳ್ತಾ ಇದ್ದ. ನಾನು ನನಗೆ ತಿಳಿದ ಹಾಗೆ ಬರಿತ ಇದ್ದೆ ...ಯಾಕಂದ್ರೆ ನಾನು ಕೂಡ SSLC ಫೇಲ್ . ನಾವು ನಮ್ಮ ಲೋಕದಲ್ಲಿ ಮುಳುಗಿ ಹೋಗಿದ್ವಿ ............
ಅದೇ ಸಮಯ ಪಕ್ಕದಲ್ಲಿ ಪೋಲಿಸ್ ಬಂದು ಲಾಟಿಯಲ್ಲಿ ಹೀಗೆ ಮಾತಾಡಿಸಿದ, ಏನ್ರಲೇ ಏನ್ ಮಾಡ್ತಾದಿರಾ ಇಲ್ಲಿ ....ಹುಡುಗಿರ್ನ ಚುಡಯಿಸೋಕೆ ಇಲ್ಲಿ ಬಂದು ಕುಳಿತು ಕೊಂಡಿದ್ದಿರಾ ಅಂದ ! ನಮ್ಗೆ ಫಿಜ್ ಹೋಗಿತ್ತು ....! ನನ್ನ ಕಯ್ಯಲ್ಲಿ ಇದ್ದ ಹಾಳೆಯನ್ನು ಕಿತ್ತು ಕೊಂಡು ಏನೂ ಇದು? ..ಲವ್ ಲೆಟರ.... ಅಂದ ...! ಈ ಪಾರ್ಕ್ ನಲ್ಲಿ ಬಹಳ ಹುಡುಗಿರ್ನ ಚುಡಯಿಸುತಿರ ಅಂತ ಕಂಪ್ಲೇಂಟ್ ಕೊಟ್ಟಿದ್ದಾರೆ ಅಂದ .....! ನಾನು ....ಸಾರ್ ಸಾರ್ ಫಿಲಂ ಸ್ಟೋರಿ ಬರಿಥಾ ಇದಿವಿ ಅಂದೆ. ನನ್ನ ಫ್ರೆಂಡು ಪೋಲಿಸ್ ಆವರಿಗೆ ಸ್ಟೋರಿ ಹೇಳೋಕೆ ಶುರು ಮಾಡಿದ . ಆಗ ಅವರು, ಸ್ಟೋರಿ ಸ್ಟೇಷನ್ನಲ್ಲಿ ಹೇಳುವೆಯಂತೆ ಆತ್ತು ಜೀಪು ಅಂತ ಸ್ಟೇಷನ್ ಗೆ ಎತ್ತಿ ಹಾಕಂಡು ಹೋದ್ರು.

ಸ್ಟೇಷನ್ನಲ್ಲಿ ಒಬ್ಬ ನಾನು ಬರೆದ ಸ್ಟೋರಿನ ಗಟ್ಟಿಯಾಗಿ ಓದೋಕೆ ಶುರು ಮಾಡಿದ ....! ಅದರಲ್ಲಿ "ಪ್ರಿಯೆ ನೀನಿಲ್ಲದ ನಾನು ನೀರಿಲ್ಲದ ಮೀನು " "ಹುಡುಗಿಯ ನಗೆ ಹುಡಗನಿಗೆ ಹೋಗೆ " ಅಂತ ಇತ್ತು , ಅದನ್ನು ಕೇಳಿದ ಪೋಲಿಸ್ ಸಬ್ ಇನ್ಸ್ ಪೆಕ್ಟರ್ ಮಕ್ಳಾ ನಿಮ್ಗೇ ಹೋಗೆ ಹಾಕ್ತಿವಿ ಈಗ ಅಂದ್ರು. ನಮ್ಮನ್ನು ಒಂದು ಮೂಲೆಯಲ್ಲಿ ಕುರಿಸಿ, ಅವರು ಟೀ ಕೊಡಿಯೋದಿಕ್ಕೆ ಹೋದ್ರು.
ನಮ್ಗೆ ಏನು ಮಾಡೋದು ಅಂತ ಗೊತ್ತೇ ಹಾಗ್ಲಿಲ್ಲಾ. ನಾವು ಕುಳಿತಿರುವದನ್ನು ನೋಡಿ ಜೈಲಿನ ಹೊಳಗಿರುವ ಕೈದಿಗಳು ಏನು ಮಾಡ್ದೆ ಗುರು ಅಂಥಾ ಕೇಳಿದ್ರು, ಅದಕ್ಕೆ ತುಂಬ ಸಿಟ್ಟು ಬಂತು. ಆಮೇಲೆ ಹೋಗ್ಲಿ ಅಂತ ಸಮಾದಾನ ಮಾಡುಕೊಂಡು, ನಾವು ಏನು ಮಾಡಿಲ್ಲ ಅಂತ ಹೇಳಿದ್ವಿ.!

ಹಾಗೆ ಸ್ವಲ್ಪ ಸಮಯದ ನಂತರ ಒಬ್ಬ ಕಾನ್ಸ್ಟೇಬಲ್ ಆಗ ತಾನೇ ಡ್ಯೂಟಿಗೆ ಬಂದ ....! ತಿರುಪತಿ ಪ್ರಸಾದ ತಂದಿದ್ದ ....ನಮ್ಗೂ ಕೊಟ್ಟ...:), ಟೀ ಗೆ ಹೋಗಿದ್ದ ಎಲ್ಲಾ ಮಾಮಗಳು ಬಂದ್ರು . ಆಗ ಒಬ್ಬ ಕಾನ್ಸ್ಟೇಬಲ್ , ಯಾರಪ್ಪ ಇದು ಹೊಸ ಕೇಸು ? ಅಂತ ಕೇಳಿದ ! ಅದಕ್ಕೆ ಇನ್ನೊಬ್ಬ ಕಾನ್ಸ್ಟೇಬಲ್, ಏನು ಇಲ್ಲಾ month end ಸಲ್ಪ ಕೇಸ್ ಗಳು ಕಮ್ಮಿ ಇತ್ತು, ಆದಕ್ಕೆ ಒಂದು ಚಿಟ್ ಚಾಟ್ ಕೇಸ್ ಬುಕ್ ಮಾಡನ ಅಂತ ಎತ್ತಿ ಹಾಕ್ಕೊಂಡು  ಬಂದ್ವಿ ಅಂದ್ರು .

ಆಮೇಲೆ ಅವನು ನಮ್ಗೆ ಕರೆದು ೫೦೦ ರುಪಾಯಿ ಫೈನ್ ಕೊಟ್ಟು ಹೋಗಿ anda ...! ಊರು ಬಿಟ್ಟು ಬಂದಿರೂ ನಮ್ಮ ಆತ್ರ ೫೦೦ ರುಪಾಯಿ ಎಲ್ಲಿಂದ ಬರಬೇಕು .... ಇಲ್ಲಾ ಸಾರ್ ಅಂದ್ವಿ . ನಾಳೆ ಬೆಳಿಗ್ಗೆ ತಂದು ಕೊಡು ಇಲ್ಲಾ ಅಂದ್ರೆ ಬೆಂಡು ತಗಿತಿವಿ ಅಂದ......! ಸರಿ ಬೆಳಿಗ್ಗೆ ಫೈನ್ ಕಟ್ಟುತಿವಿ ಅಂತ ಹೇಳಿ ಸ್ಟೇಷನ್ ನಿಂದ ಹೊರಗೆ ಬಂದ್ವಿ ........!

ಆಮೇಲೆ ಒಂದು ಸಾರಿ ಸ್ಟೇಷನ್ ಕಡೆ ತಿರುಗಿ ನೋಡಿದೇ ,  ನಂಗೆ ಸಿಟ್ಟು .!   ಬೇಜಾರು ....!   ಆಳು .! ನಗು .!   ಎಲ್ಲಾ ಒಂದೇ ಸಾರಿ ಬರ್ತಾ ಇತ್ತು.
ನಗೊದೂ, ಆಳುದೂ, ಒಂದೂ ಗೊತ್ತೇ ಹಾಗಿಲಿಲ್ಲ, ನೋಡಿ ಸಾರ್ ನಿಯತ್ತಾಗಿ ಇರೋರಿಗೆ ಪೋಲಿಸರು ಎಂಗೆ ಮಾಡ್ತಾರೆ ...., ಅಂದ ನಮ್ಮ ಡ್ರೈವರ್ .

ಕ್ಯಾಬ್ ನಲ್ಲಿ ನಗುವಿನ ಮಳೆ ಸುರಿದಿತ್ತು ......ನಮ್ಮ ಆಫೀಸ್ ಕೂಡ ಬಂದಿತ್ತು.
ಆಮೇಲೆ ಈ ಕಥೆಯನ್ನು ಕೇಳಿದ ನನಗೆ ಕದುಥಿದ್ದ ಪ್ರಸ್ನೆ ಎಂದರೆ, ನಾವು ಸರಿ ಇಲ್ವಾ ... ಅಥವಾ ...ನಮ್ಮ ಸಿಸ್ಟಮ್ ಸರಿ ಇಲ್ವಾ ಅಂಥಾ ?

ಆಮೇಲೆ ಹಾಗೆ ಯೋಚನೆ ಮಾಡ್ತಾ.....ಸಿಸ್ಟಮ್ ಆಗಿರೂದೆ ನಮ್ಮಿಂದಾನೆ ತಾನೆ ..., ಅಂದ್ರೆ ನಾವೇ ಸರಿ ಇಲ್ಲಾ ಅಂಥಾ......ಯಾಕಂದ್ರೆ ಸಿಸ್ಟಂ ಒಂತರ ಸಾದನ(computer is tool). ನಾವು ಯಾಗೆ ಬೇಕಾದ್ರೂ ಬಳಕೆ ಮಾಡಬಹುದು ಅಲ್ವಾ?

-ಕೃಷ್ಣ

 

Rating
No votes yet

Comments