ನಗೆಯ ಬಗೆಗಳು !
’ನಗೆ’ ಪ್ರಕೃತಿ ದತ್ತವಾಗಿ ಮನಕುಲಕ್ಕೆ ವರವಾಗಿ ಬಂದಿದೆ. ಮನುಷ್ಯನಿಗಷ್ಟೆ ಭಾವನೆಗಳನ್ನು ನಗುವ ಮೊಲಕ ವ್ಯಕ್ತಪಡಿಸುವ ಅವಕಾಶವುಂಟು.“ನಗು” ನಮ್ಮೆಲ್ಲಾ ದುಃಖಗಳನ್ನ ಮರೆಸುವ immunity. ಇಂದು ನಗೆಕೂಟಗಳು ನಮ್ಮೆಲ್ಲಾ ಒತ್ತಡಗಳಿಂದ ಹೊರತರಲು ಶ್ರಮಿಸುತ್ತಿವೆ. ನಗೆಯೋಗ ಒಂದು ಉದ್ಯೋಗವಾಗಿ ಪರಿವರ್ತನೆಗೊಳ್ಳುತ್ತಿದೆ. ಹಾಸ್ಯ ಕಾರ್ಯಕ್ರಮಗಳಲ್ಲಿ ಕಿಕ್ಕಿರಿದು ಸೇರುವ ಜನಸ್ತೋಮ ನೋಡಿದರೆ, “ನಗು” ಇವತ್ತೆ ಯಾವ ರೂಪ ಪಡೆದುಕೊಳ್ಳುತ್ತಿದೆ ಅಂತ ಯೋಚಿಸುವಂತಾಗಿದೆ. ಹಾಸ್ಯ ಚಟಾಕಿ ಹಾರಿಸುವ ಪ್ರಾಣೇಶ, ರಿಚರ್ಡ್ ಲೂಯಿಸ್, ಮತ್ತು ಇತರರು ನಮಗೆಲ್ಲಾ immunity ಕೊಡುವ ಡಾಕ್ಟರ್ ಗಳಾಗಿದ್ದಾರೆ. ಟಿ.ವಿ. ವಾಹಿನಿಗಳಲ್ಲಿ ಬಿತ್ತರಿಸುವ ಹಾಸ್ಯ ಕಾರ್ಯಕ್ರಮಗಳನ್ನ ಯಾರು ಮಿಸ್ ಮಾಡಲ್ಲ. ಇಂತಹ “ನಗು”ವಿನ ಬಗೆಗಳ ಬಗ್ಗೆ ಕೊಂಚ ಹೇಳಬೇಕೆನಿಸಿತು: ಅದಕ್ಕೆ ಈ ಪೀಠಿಕೆ: ) “ನಗು”ಗಳಲ್ಲಿ ಪ್ರಥಮ ಸ್ಥಾನ : ಮುಗ್ಧ ನಗುವಿನದು --- (ಪುಟ್ಟ ಕಂದಮ್ಮನ ನಗು) ) ಸ್ನಿಗ್ಧ ನಗು – (ಮೋನಾಲಿಸಾ ನಗು) ) ಕಳ್ಳ ನಗು - ( ತುಂಟ ಹುಡುಗಿಯ ನಗು) ) ಕೆರಳಿಸೋ ನಗು – ( ನಿಮ್ಮ ಬಾಸ್ ನ ನಗು) ) ರಾ ರಾ ನಗು --- ( ಆಪ್ತಮಿತ್ರ ಚಿತ್ರದಲ್ಲಿ climaxನಲ್ಲಿ “ ಸೌಂದರ್ಯ” ನಗುವ ನಗೆ) ) Evergreen ವಜ್ರಮುನಿ ನಗು --- No Explanation required/ and also can’t illustrate. ) ತೃಪ್ತಿ ನಗು – ( ಮಗುವಿಗೆ ಎದೆಹಾಲು ಕುಡಿಸುವ ತಾಯಿಯ ನಗು) ) ಮುಗುಳು ನಗೆ – ( ನಮ್ಮದೆ ಆದ ವಿಶಿಷ್ಟವಾದ ನಗೆ) ) ಕೆಣಕುವ ನಗೆ – ( Flirt ನಗೆ) ) Ironical ನಗೆ – ( ಕೆಲವೊಂದು ಸಲ ನಿಮ್ಮ ಸಹೋದ್ಯಗಿಗಳು ನೀಡುವ ನಗೆ) ) ಅರಿವಿಲ್ಲದೆ ನಗೆ –( ಸಿಧು, ಅರ್ಚನ ಪೊರಣ್ ಸಿಂಗ್ ನಗು ) ) ಜಯದ ನಗು - ( ಅಂಗುಲಿ ಮಾಲನ ಪರಿವರ್ತಿಸಿದ ಭಗವಾನ ಬುದ್ದನ ಅಮರ ನಗು) ) ಪ್ರಕೃತಿ ನಗು – ( ಸೂರ್ಯನ ಆಗಮನಕ್ಕೆ ಅರಳುವ ಪುಷ್ಪದ ನಗು, ಮಳೆಯ ತಂಪಿಗೆ ನಲುಗುವ ಎಲೆಗಳ ನಗೆ, ಚಂದ್ರನ ಬೆಳದಿಂಗಳಿಗೆ ಉಕ್ಕುವ ಶರಧಿಯ ನಗೆ, ಇನ್ನೂ ಇದೆ...) ) ಸಮ್ಮತಿ ನಗೆ --- ( ಹುಡುಗಿ ಪ್ರೀತಿಯನ್ನು ಸಮ್ಮತಿಸುವ ನಗೆ ) ಮೇಲೆ ಕಾಣಿಸಿದಂತೆ ಪಟ್ಟಿ ಮಾಡುತ್ತ ಹೋದರೆ ಹನುಮಂತನ ಬಾಲಕ್ಕಿಂತ ಉದ್ದ ಹೋಗಬಹುದು. ಆದರೆ ಆ ಪಟ್ಟಿ ಬೆಳುಸುವ ಉದ್ದೇಶ ನಂದಲ್ಲ. ಹೀಗೆ ಹೇಳುತ್ತ !!!! ಒಂದು ಮುಖ್ಯವಾದ ನಗುವನ್ನೇ ಬಿಟ್ಟಿದ್ದೀನಿ !!!! ಅದು “ ನಾವು ಮರೆತ ನಗು” . ಬಹು ಮುಖ್ಯವಾದ ನಗು ಇದು. ನಗುವನ್ನು ಅರಸುತ್ತ ಟಿ.ವಿ. ವಾಹಿನಿ, ನಗೆ ಕೂಟ, ನಗೆ ಯೋಗ ಹುಡುಕುವ ನಾವು ಒಂದು ಕಾಲದಲ್ಲಿ ಮನಬಿಚ್ಚಿ ನಗುತ್ತಿದ್ದೆವು ಅಂತ ಮರೆತು ಹೋಗಿದೆ. ಮಗುವಾಗಿದ್ದಾಗ ನಾವು ಅಮ್ಮನ ಕಂಡ ತಕ್ಷಣ ಕೊಡುತ್ತಿದ್ದ ಅತೀ ಪ್ರೀತಿಯ ನಗೆ, ಇಂದು ಕೂಡ ಇದೆಯೇ?, ಸ್ಕೂಲಿನಲ್ಲಿ ಸಹಪಾಠಿಗಳೊಂದಿಗೆ ಹಂಚಿ ತಿನ್ನುವಾಗ ವಿನಿಮಯಗೊಳ್ಳುತ್ತಿದ್ದ ನಮ್ಮದೆ ಆದ “ಗೆಳೆತನ”ದ ನಗು. ಇಂದು ಅದೆ ಗೆಳೆಯರು ಸಿಕ್ಕರೆ ಆ “ಗೆಳೆತನದ” ನಗು ಮರುಕಳಿಸುತ್ತದಯೇ?, ಕಾಲೇಜಿನಲ್ಲಿ ಹುಡುಗಿಯರನ್ನು ಛೇಡಿಸುತ್ತಿದ್ದ ಅ ನಗೆ, ಇವತ್ತು ಬ್ರಿಗೇಡ್ ರೋಡ್ನಲ್ಲಿ ಕಾಣುವ ಹುಡುಗಿಯರನ್ನ ನೋಡಿ ಬರುತ್ತದೆಯೇ? ಕೆಲಸ ಹುಡುಕುವಾಗ ಕಂಪನಿಯ HR ಹುಡುಗಿಗೆ ಕಾಳು ಹಾಕುವ ನಗುವು, ಈಗ ಇನ್ನೂ ಇದೆಯೆ ? ಕ್ಯಾಂಟಿನ್ ನಲ್ಲಿ ಕುಂತು ಸಹೊದ್ಯೋಗಿಗಳೊಡನೆ ಹರಟೆ ಹೊಡೆಯುತ್ತ , team leader, manager, boss , ನ ನಟನೆ -ಮಿಮಿಕ್ರಿ ಮಾಡಿ ನಗುತ್ತಿದ್ದ ನಗು ಇಂದಿಗೂ ಇದೆಯೇ ? ಕೆಲಸ ಸಿಕ್ಕ ಮರು ಘಳಿಗೆ, ಅಮ್ಮನಿಗೆ ತಿಳಿಸಿದ ಸಂದರ್ಭದಲ್ಲಿ ಬಂದ “ ಸಂಭ್ರಮ ನಗೆ” ,ಇವತ್ತು ಕಂಪನಿ ಬದಲಾಯಿಸಿದಾಗ ಬರುತ್ತದೆಯೇ? ಮದುವೆಗೆಂದು ಮೀಟ್ ಮಾಡುತ್ತಿದ್ದ ಹುಡುಗಿಯರೊಡನೆ , ಹೋಟೆಲ್ ನ ಟೇಬಲ್ ಮೇಲೆ ಹಂಚಿ ಕೋಳ್ಳುತ್ತಿದ್ದ ನಗು, ಮರೆಯಾಗಿ ಹೋಗಿದೆಯಲ್ಲವೆ? Fiancé ಯ ಕೈ ಹಿಡಿದು ಪಾರ್ಕಗಳ ಕೊನೆಯನ್ನ ಹುಡುಕಿ, ಕದ್ದು-ಕದ್ದು ಮಾಡುತ್ತಿದ್ದ ಕೀಟಲೆಗಳನ್ನ ನೆನೆದು ನಕ್ಕ “ನಗು”, ಇವತ್ತು ಹೆಂಡತಿಯಾದ ಅದೆ Fiancé ಯೊಡನೆ ಹೋದ್ರೆ ಬರುತ್ತದೆಯೆ? ನಮ್ಮ ಮೊದಲ ಕರುಳಿನ ಕುಡಿ ಭುವಿಗೆ ಬಂದಾಗ, ಅದರ ಅಳುವಿಗೆ, ನಾವು ಆನಂದಭಾಷ್ಪ ದೊಡನೆ ಬಂದಿದ್ದ “ ಹೃದಯದ ನಗು”, ಇವತ್ತಿಗೂ ನಗುತ್ತಿದೆಯೇ? ಹೀಗೆ ಪಟ್ಟಿ ಮಾಡುತ್ತಾ ಹೋದರೆ “ನಾವು ಮರೆತ ನಗು” ಗಳು ಬಹಳಷ್ಟು ಇವೆಯಲ್ಲವೇ?. ಹೌದು ಇವತ್ತಿನ ಒತ್ತಡದ ಬದುಕು, ಸಮಯದ ಅಂಕೆ, ಕೆಲಸದ ಪ್ರೆಶರ್, ಟ್ರಾಫಿಕ್ ನ ಕ್ರಿ-ಕ್ರಿ ಮತ್ತು ಕಿರಿಕಿರಿ, ಗೊಂದಲದ ಮಸಃಸ್ಥಿತಿಯಿಂದಾಗಿ, ನಾವು ನಮ್ಮ ಸ್ವಂತವಾದ, ನಮ್ಮದೆ ಎನ್ನುವಂತ ಅ ಚೆಂದದ ನಗೆಯನ್ನು ಮರೆತು ಬಿಟ್ಟಿದ್ದೀವಿ. ಬನ್ನಿ ಗೆಳೆಯರೇ, ನಾವು ಮರೆತ ಆ ನಗೆಗಳ ಮೆಲುಕು ಹಾಕುವ.ಅವುಗಳನ್ನ ನಾವು ನೆನಪಿಸಿಕೊಂಡು ಮತ್ತೆ ನಗೆ-ನೆನಪಲ್ಲಿ ವಿಹರಿಸೋಣವೇ? ನಮ್ಮ ಶಾಲೆಯಲ್ಲಿ, ಕಾಲೇಜಿನಲ್ಲಿ, ಕಂಪನಿಗಳಲ್ಲಿ, ನಾವು ಮಾಡಿದ ಅಥವ ಸಾಕ್ಷಿಯಾದ ಚೇಷ್ಟೆ ಗಳು, ಕೀಟಲೆಗಳು, ಹಾಸ್ಯ ಸನ್ನಿವೇಶಗಳನ್ನು, ನಮ್ಮ ನೆನಪಿನ ಗಣಿಯಿಂದ ಬಗೆದು ಎಲ್ಲರ ಮುಂದಿಡಲು ಪ್ರಯತ್ನಿಸೋಣ. ನಾವೂ ನಗೋಣ, ಎಲ್ಲರನ್ನು ನಗಿಸೋಣ ,,,,,, !!!!! Please contribute your writings --- Letz Be happy and make others Happy !!!
Comments
ಉ: ನಗೆಯ ಬಗೆಗಳು !!!!
In reply to ಉ: ನಗೆಯ ಬಗೆಗಳು !!!! by santhosh_87
ಉ: ನಗೆಯ ಬಗೆಗಳು !!!!
ಉ: ನಗೆಯ ಬಗೆಗಳು !!!!
ಉ: ನಗೆಯ ಬಗೆಗಳು !!!!
In reply to ಉ: ನಗೆಯ ಬಗೆಗಳು !!!! by vani shetty
ಉ: ನಗೆಯ ಬಗೆಗಳು !!!!
In reply to ಉ: ನಗೆಯ ಬಗೆಗಳು !!!! by RAMAMOHANA
ಉ: ನಗೆಯ ಬಗೆಗಳು !!!!