ನಗೆಹನಿಗಳು ( ಹೊಸವು? ) -ಆರನೇ ಕಂತು

ನಗೆಹನಿಗಳು ( ಹೊಸವು? ) -ಆರನೇ ಕಂತು

- ೨೧ -
- ಈ ಚಿತ್ರಾನ ಇಲ್ಲಿ ಯಾಕೆ ನೇತು ಹಾಕಿರೋದು ?
- ಅದನ್ನು ಚಿತ್ರಿಸಿದ ಕಲಾವಿದ ಸಿಕ್ಕಿಲ್ಲ , ಅದಕ್ಕೆ

- ೨೨ -
- ನೀವು ಸಂಗೀತ ಪ್ರಿಯರಂತೆ , ಎಲ್ರೂ ಹೇಳುತ್ತಾರೆ.
- ಹೌದು , ಆದರೆ ನೀವು ಚಿಂತಿಸಬೇಡಿ. ನುಡಿಸ್ತಾ ಇರಿ.

- ೨೩ -
- ನಿನ್ನೆ ಪ್ರವಚನಕ್ಕೆ ಹೋಗಿದ್ರಲ್ಲಾ ? ಏನು ಕೇಳಿದ್ರಿ ?
- ಮುಂದಿನ ಬೀದಿ ರಾಮಣ್ಣನ ಕೆಲಸ ಹೋಯಿತಂತೆ , ಆ ಶಾಮಣ್ಣನ ಮಗಳು ಓಡಿ ಹೋದಳಂತೆ. ಮತ್ತೆ ಆ ಪಾರ್ವತಕ್ಕನ ಮಗಳು ಕದ್ದು……

- ೨೪-
ಸಂಗೀತ ವಿಮರ್ಶಕ - ನಿನ್ನೆ ಆ ಹೊಸಬನ ಸಂಗೀತ ಕಾರ್ಯಕ್ರಮಕ್ಕೆ ಹೋಗಬಾರದಿತ್ತು . ನನ್ನ ಸಮಯವೆಲ್ಲ ವ್ಯರ್ಥ ಆಯಿತು.
- ಯಾಕೆ , ಏನಾಯಿತು ?
- ಏನು ಹೇಳಲಿ, ಅವನ ಸಂಗೀತ ಟೀಕಿಸುವ ಹಾಗೇ ಇರಲಿಲ್ಲ ?

Rating
No votes yet