ನಗೆಹನಿಗಳು ( ಹೊಸವು ?) - ಇಪ್ಪತ್ತಾರನೇ ಕಂತು

ನಗೆಹನಿಗಳು ( ಹೊಸವು ?) - ಇಪ್ಪತ್ತಾರನೇ ಕಂತು

-೧೦೧ -
ಮೊದಲನೇ ದಿನ ಶಾಲೆಗೆ ಹೋಗಿ ಬಂದ ಮಗುವನ್ನು ತಾಯಿ ಕೇಳಿದಳು - ಶಾಲೆಯಲ್ಲಿ ಮೊದಲ ದಿನ ಹೇಗಿತ್ತು?
ಮಗು ಹೇಳಿತ್ತು - ಅಲ್ಲಿ ಒಬ್ಬ ಹೆಂಗಸಿಗೆ CAT ಶಬ್ದದ ಸ್ಪೆಲ್ಲಿಂಗ್ ಗೊತ್ತಿರಲಿಲ್ಲ, ನನಗೆ ಕೇಳಿ ತಿಳಿದುಕೊಂಡಳು.

- ೧೦೨ -

-Hobson's choice ಏನದು ?
- Mrs. Hobson !

( ಸೂಚನೆ -Hobson's choice ಗೂಗಲಿಸಿ ತಿಳಿದುಕೊಳ್ಳಿ)

-103-

ಸಿಟ್ಟಿಗೆ ಹೆಸರಾದ ಟೀಚರ್ ಗದರಿಸುತ್ತ ಕೇಳಿದರು - ಭೂಮಿ ಗುಂಡಗೆ ಇದೆ ಎಂದು ಹೇಗೆ ಸಾಧಿಸುತ್ತೀ ?
ಹುಡುಗ ಹೆದರಿ ಹೇಳಿದ- ನಾನು ಹಾಗೆ ಹೇಳಲೇ ಇಲ್ಲ, ಟೀಚರ್!

-104-

-ಯಾವ ತಿಂಗಳಲ್ಲಿ 28 ದಿನ ಇವೆ ?
-ಎಲ್ಲಾ ತಿಂಗಳಲ್ಲಿ !

Rating
No votes yet