ನಗೆಹನಿಗಳು ( ಹೊಸವು ?) - ಇಪ್ಪತ್ತೆಂಟನೇ ಕಂತು
- ೧೦೯ -
ಶಾಲೆಯಲ್ಲಿ
- ಎರಡು ಸರ್ವನಾಮಗಳನ್ನು ಹೇಳು
- ಯಾರು, ನಾನೇ?
- ೧೧೦-
- ಬಹಳಷ್ಟು ಸಮಯ ಉಳಿಸುವಂಥದ್ದು ಯಾವುದನ್ನಾದರೂ ಹೇಳಿ
- ಮೊದಲ ನೋಟದ ಪ್ರೇಮ!
- ೧೧೧-
ರಸಾಯನಶಾಸ್ತ್ರದ ಕ್ಲಾಸಿನಲ್ಲಿ
- HN03 ಅಂದರೆ ಏನು? ನೀನು ಹೇಳಯ್ಯ
- ಅದು... ಅದು... ನಾಲಗೆ ತುದಿಯಲ್ಲಿ ಇದೆ....
- ಬೇಗ ಉಗುಳು, ನಾಲಗೆ ಸುಟ್ಟೀತು , ಅದು ನೈಟ್ರಿಕ್ ಆಸಿಡ್ !
- ೧೧೨-
-John Milton ಕವಿಯ ಕೃತಿಗಳ ಬಗ್ಗ ಹೇಳಿ
- ಅವನು ಮದುವೆ ಆದಾಗ Paradise Lost ಬರೆದ , ಅವಳು ಸತ್ತಾಗ Paradise Regained ಬರೆದ !
Rating