ನಗೆಹನಿಗಳು ( ಹೊಸವು ?) - ಇಪ್ಪತ್ತೇಳನೇ ಕಂತು

ನಗೆಹನಿಗಳು ( ಹೊಸವು ?) - ಇಪ್ಪತ್ತೇಳನೇ ಕಂತು

- ೧೦೫ -
- ರೋಮ್ ಅನ್ನು ಕಟ್ಟಿದ್ದು ಯಾವಾಗ ?
- ರಾತ್ರಿ ಸಮಯದಲ್ಲಿ
- ಯಾರು ಹೇಳಿದರು ನಿನಗೆ ಹಾಗಂತ ?
- ಎಲ್ಲರೂ ಹೇಳುತ್ತಾರೆ - Rome was not built in a day ಅಂತ!

-106-
ಕೆಲಸ ಹುಡುಕಿ ಬಂದವನನ್ನು ಮಾಲೀಕ ಕೇಳಿದ - ಹಿಂದಿನ ಉದ್ಯೋಗದ ದಾಖಲೆ , ಸರ್ಟಿಫಿಕೇಟು ಏನಾದರೂ ತಂದಿದ್ದೀಯಾ?
ಅವನು ಕೊಟ್ಟ ಸರ್ಟಿಫಿಕೇಟಿನಲ್ಲಿ ಬರೆದಿತ್ತು - ಈ ಸರ್ಟಿಫಿಕೇಟು ತಂದವನು ನನ್ನಲ್ಲಿ ಒಂದು ತಿಂಗಳು ಕೆಲಸ ಮಾಡಿ ಬಿಟ್ಟಿದ್ದಾನೆ. ನಾನು ಸಂತೋಷ ಪಟ್ಟಿದ್ದೇನೆ,

- ೧೦೭-
- ನನ್ನ ಪರಿಚಯದ ಒಬ್ಬ ಕಲಾವಿದ ಒಂದು ಜೇಡರ ಬಲೆಯನ್ನು ಎಷ್ಟು ನೈಜವಾಗಿ ಗೋಡೆಯ ಮೇಲೆ ಚಿತ್ರಿಸಿದ ಎಂದರೆ ಕೆಲಸದವಳು ಅದನ್ನು ತೆಗೆದು ಹಾಕಲು ಗಂಟೆಗಟ್ಟಲೆ ಶ್ರಮಿಸಿದಳು !
- ಇದನ್ನು ನಂಬಲು ಸಾಧ್ಯವೇ ಇಲ್ಲ!
- ಯಾಕಿಲ್ಲ ? ಕಲಾವಿದರು ಇಂಥವನ್ನು ಮಾಡುತ್ತಲೇ ಇರುತ್ತಾರೆ.
- ಇರಬಹುದು , ಆದರೆ ಅಂಥ ಕೆಲಸಗಾರರು ಇರಲಿಕ್ಕೆ ಸಾಧ್ಯವೇ ಇಲ್ಲ !

- ೧೦೮-
ಪಾರ್ಟಿಯಲ್ಲಿ ಮಹಿಳೆ ಒಬ್ಬಳು ಏನನ್ನೋ ಹುಡುಕುತ್ತ ಇನ್ನೂಬ್ಬ೪ನ್ನು ಕೇಳಿದಳು
- ಇಲ್ಲಿ ಸುಂದರಿ ಒಬ್ಬಳು ಡ್ರಿಂಕ್ಸ್ ಹಂಚುತ್ತ ಇದ್ದಳಲ್ಲ , ಎಲ್ಲಿ ಅವಳು?
- ಏಕೆ? ನಿಮಗೆ ಡ್ರಿಂಕ್ಸ್ ಬೇಕೆ?
- ಇಲ್ಲ, ನಾನು ನನ್ನ ಗಂಡನನ್ನು ಹುಡುಕುತ್ತಾ ಇದ್ದೇನೆ

Rating
No votes yet