ನಗೆಹನಿಗಳು ( ಹೊಸವು ?) - ಇಪ್ಪತ್ತೈದನೇ ಕಂತು

ನಗೆಹನಿಗಳು ( ಹೊಸವು ?) - ಇಪ್ಪತ್ತೈದನೇ ಕಂತು

- ೯೭ -

- ೧೯೯೦ ರಲ್ಲಿ ಹುಟ್ಟಿದ ಒಬ್ಬ ವ್ಯಕ್ತಿಗೆ ಈಗ ಎಷ್ಟು ವರ್ಷ ವಯಸ್ಸು ?
- ಆ ವ್ಯಕ್ತಿ ಗಂಡಸೋ, ಹೆಂಗಸೊ?

- ೯೮ -
ಶಾಲೆಯಲ್ಲಿ ಟೀಚರ್ ಒಬ್ಬ ಹುಡುಗನಿಗೆ ಕೇಳಿದರು - ಫ್ರಾಗ್ ಸ್ಪೆಲ್ಲಿಂಗ್ ಹೇಳು
ಹುಡುಗ - ಎಫ್ , ಆರ್ , ... ಆರ್. . . .
ಟೀಚರ್ - ಸರಿ, ಮುಂದೆ?
ಅದೇ ಹೊತ್ತಿಗೆ ಅವನ ಹಿಂದಿನ ಹುಡುಗ ಅವನಿಗೆ ಒಂದು ಸೂಜಿಯಿಂದ ಚುಚ್ಚಿದ. ಆ ಹುಡುಗ ಉದ್ದರಿಸಿದ - ಓ
ಟೀಚರ್ - ಸರಿ, ಮುಂದೆ?

- ೯೯-

- ಒಬ್ಬ ಮನುಷ್ಯ ನಿನಗೆ ಇಟ್ಟುಕೊಳ್ಳಲು ಸಾವಿರ ರೂಪಾಯಿ ಕೊಟ್ಟು ಆಮೇಲೆ ಸತ್ತು ಹೋದರೆ ನೀನು ಅವನಿಗಾಗಿ ದೇವರಲ್ಲಿ ಬೇಡಿಕೊಳ್ಳುತ್ತೀ ತಾನೆ ?
- ಇಲ್ಲ, ಅವನಂತಹ ಇನ್ನೊಬ್ಬನಿಗಾಗಿ ಬೇಡಿಕೊಳ್ಳುತ್ತೇನೆ!

- ೧೦೦ -
ತರಗತಿಯಲ್ಲಿ
- 'ವಿಶ್ಲೇಷಣೆ' ಶಬ್ಬವನ್ನು ಬಳಸಿ ಒಂದು ವಾಕ್ಯವನ್ನು ರಚಿಸು
- ಟೀಚರು ನನಗೆ 'ವಿಶ್ಲೇಷಣೆ' ಶಬ್ಬವನ್ನು ಬಳಸಿ ಒಂದು ವಾಕ್ಯವನ್ನು ರಚಿಸಲು ಹೇಳಿದರು

Rating
No votes yet