ನಗೆಹನಿಗಳು ( ಹೊಸವು ?) - ಇಪ್ಪತ್ಮೂರನೇ ಕಂತು

ನಗೆಹನಿಗಳು ( ಹೊಸವು ?) - ಇಪ್ಪತ್ಮೂರನೇ ಕಂತು

- ೮೯-

ಮ್ಯೂಸಿಯಂನಲ್ಲಿ ಶಿಕ್ಷಕ ಹುಡುಗಿಯರಿಗೆ - ನೋಡ್ರೇ , ಇದು ಮಿನರ್ವ ದೇವತೆಯ ಮೂರ್ತಿ
- ಸರ್, ಅವಳಿಗೆ ಮದುವೆ ಆಗಿದೆಯಾ ?
- ಮಿನರ್ವ ಜಾಣತನದ ದೇವತೆ ಅಂತ ಮರೆತುಬಿಟ್ರಾ ?

- ೯೦ -

ಆ ಕ್ರೈಸ್ತ ಕುಟುಂಬದಲ್ಲಿ ಅವತ್ತು ಊಟಕ್ಕೆ ರೇಡಿಯೋ ಉದ್ಘೋಷಕಿ ಬಂದಿದ್ದಳು, ಊಟದ ಮುಂಚಿತ ಪ್ರಾರ್ಥನೆಯನ್ನು ಅವಳು ಮಾಡಬೇಕಾಗಿ ಬಂದಾಗ ಹೇಳಿದಳು
- ಈ ಭೋಜನವನ್ನು ಪ್ರಾಯೋಜಿಸಿದ್ದು ಕರುಣಾಮಯ ಭಗವಂತ !

- ೯೧-

(ಚಿಕ್ಕ ಮಗಳು) - ಅಪ್ಪ ಯಾಕೆ ಈ ಹೊತ್ತಿನಲ್ಲಿ ಹಾಡು ಹಾಡುತ್ತಾ ಇದ್ದಾರೆ ?
ತಾಯಿ- ಮಗೂನ ಮಲಗಿಸುತ್ತಾ ಇದ್ದಾರೆ ಕಣೇ ,
ಚಿಕ್ಕ ಮಗಳು - ನಾನೇನಾದ್ಲೂ ಆ ಮಗು ಆಗಿದ್ರೆ ಮಲಗಿದ ಹಾಗೆ ನಟಿಸುತ್ತಿದ್ದೆ !

-92-

ತಾಯಿ ಹಣ್ಣಿನ ಹಣ್ಣಿನ ಅಂಗಡಿಯವನಿಗೆ ಕೇಳಿದಳು - ನನ್ನ ಮಗೂನ ನಿಮ್ಮ ಅಂಗಡಿಗೆ ಎರಡು ಕಿಲೊ ಮಾವಿನಹಣ್ಣು ತರಲು ಕಳಿಸಿದ್ದೆ. ತೂಕ ಮಾಡಿ ನೋಡಿದಾಗ ಒಂದೂವರೆ ಕಿಲೊ ಮಾತ್ರ ಇದೆ ?
- ತಾಯೀ , ನಿಮ್ಮ ಮಗುವನ್ನು ತೂಕ ಮಾಡಿ ನೋಡಿದ್ರಾ ?

Rating
No votes yet