ನಗೆಹನಿಗಳು ( ಹೊಸವು ? ) - ಎರಡನೇ ಕಂತು

ನಗೆಹನಿಗಳು ( ಹೊಸವು ? ) - ಎರಡನೇ ಕಂತು

( ಕನ್ನಡದಲ್ಲಿ ನೀವು ನೋಡಿರಲಿಕ್ಕಿಲ್ಲದ ಜೋಕುಗಳು)

- ೫-

- ನನ್ನ ಹತ್ರ ಒಂದು ಛತ್ರಿ ಇಪ್ಪತ್ತು ವರ್ಷದಿಂದ ಇದೆ , ಗೊತ್ತೇನ್ರಿ ?
- ಹೌದಾ ? ನೀವು ಇನ್ನಾದರೂ ಅದನ್ನು ವಾಪಸ್ ಮಾಡಬೇಕ್ರೀ .

- ೬ -

- ಅಲ್ಲಿ ಕೂತಿರೋ ಆ ಕುರೂಪಿ ಮನುಷ್ಯ ಯಾರೋ ?
- ಏನು? ಅವನಾ ? ಅವನು ನಮ್ಮ ಅಣ್ಣ ರೀ
- ಓ ಹ , ಕ್ಷಮಿಸಿ, ನಾನು ನಿಮ್ಮ ನಡುವಿನ ಹೋಲಿಕೆಯನ್ನು ಗಮನಿಸಲಿಲ್ಲ

- ೭-

- ಇವತ್ತು ಸಂಜೆ ಸ್ವಲ್ಪ ನಿಮ್ಮ ಇಸ್ತ್ರಿ ಪೆಟ್ಟಿಗೆ ಕೊಡ್ತೀರಾ?
- ಆಗೋದಿಲ್ಲ ರೀ, ನನಗೆ ತುಂಬಾ ಬಟ್ಟೆ ಇಸ್ತ್ರಿ ಮಾಡೋದಿದೆ.
- ಒಳ್ಳೇದೇ ಆಯ್ತು! ಹಾಗಿದ್ರೆ ನಿಮ್ಮ ಟೆನಿಸ್ ರ್ಯಾಕೆಟ್ ಖಾಲಿ ಇರುತ್ತಲ್ಲ, ನನಗೆ ಕೊಡಿ. ನನ್ನದು ಮುರಿದು ಹೋಗಿದೆ.

- ೮ -

- ನನ್ನ ಜೀವ ಉಳಿಸಿದ್ದಕ್ಕೆ ಅವನಿಗೆ ಸಾವಿರ ರೂಪಾಯಿ ಕೊಟ್ಟೆ . ಆದರೆ .....
- ಏನಾಯಿತು ?
- ಅವನು 980 ರೂಪಾಯಿ ವಾಪಸ್ ಕೊಟ್ಟ!

Rating
No votes yet

Comments