ನಗೆಹನಿಗಳು ( ಹೊಸವು ? ) -ನಾಲ್ಕನೇ ಕಂತು

ನಗೆಹನಿಗಳು ( ಹೊಸವು ? ) -ನಾಲ್ಕನೇ ಕಂತು

(ನಾನು ಕನ್ನಡದಲ್ಲಿ ಈತನಕ ಓದಿರದ ಈ ನಗೆಹನಿಗಳು ನನಗೆ digital library of indiaದ ತಾಣದಲ್ಲಿನ ಹಳೆಯ ಇಂಗ್ಲಿಷ್ ಪುಸ್ತಕದಲ್ಲಿ ಸಿಕ್ಕವು - ನಿಮಗಾಗಿ ಅವನ್ನು ಅನುವಾದಿಸಿದ್ದೇನೆ)
- ೧೩ -
- ನಮ್ಮ ಅಜ್ಜ 90 ವರ್ಷ ವಯಸ್ಸಿನವರಾಗಿದ್ದರೂ ಗ್ಲಾಸ್ ಉಪಯೋಗಿಸ್ತಿರಲಿಲ್ಲ
- ಹೌದು , ಕೆಲವರು ನೇರವಾಗಿ ಬಾಟಲಿಯಿಂದಲೇ ಕುಡೀತಾರೆ
- ೧೪-
- ನಿಮ್ಮ ಚಿಕ್ಕಪ್ಪನಿಗೆ ಕೊನೆಯ ತನಕವೂ ಎಚ್ಚರ ಇದ್ದಿತೆ ? ಮೆದುಳು ಸರಿಯಾಗಿ ಕೆಲಸ ಮಾಡುತ್ತಿತ್ತೆ?
- ಅದನ್ನು ಈಗಲೇ ಹೇಳೋಕೆ ಆಗುವದಿಲ್ಲ. ಅವನ ಉಯಿಲನ್ನು ಮುಂದಿನ ವಾರ ಓದುತ್ತಾರೆ.
- ೧೫-
-ನಾನು ಪ್ರಾಮಾಣಿಕ ಜೀವನ ನಡೆಸಬೇಕೆಂದು ಈ ಊರಿಗೆ ಬಂದಿದ್ದೇನೆ ,
-ಹಾಗಿದ್ದರೆ ಈ ಊರಲ್ಲಿ ನಿನಗೇನೂ ಸ್ಪರ್ಧೆಯೇ ಇಲ್ಲ!
- ೧೬-
-ನಿನ್ನೆ ರಾತ್ರಿ ಯಾರೋ ಸುಂದರಿ ಜತೆ ಸುತ್ತುತಾ ಇದ್ದೆಯಲ್ಲ, ಯಾರಯ್ಯಾ ಅದು ?
- ನನ್ ಹೆಂಡ್ತಿಗೆ ಹೇಳಲ್ಲಾಂತ ಪ್ರಾಮಿಸ್ ಮಾಡು, ಹೇ ಳತೀನಿ
- ಸರಿ, ಪ್ರಾಮಿಸ್
- ಅವಳು ನನ್ ಹೆಂಡ್ತಿ , ಕಣಯ್ಯ !

Rating
No votes yet