ನಗೆಹನಿಗಳು ( ಹೊಸವು ? ) - ಮೂರನೇ ಕಂತು

ನಗೆಹನಿಗಳು ( ಹೊಸವು ? ) - ಮೂರನೇ ಕಂತು

- ೯-
(ಪತ್ರಿಕಾ ಕಚೇರಿಗೆ ಫೋನ್ )
- ಏನ್ರೀ , ನಿಮ್ ಪೇಪರಿನಲ್ಲಿ ನಾನು ಸತ್ತಿದೀನಿ ಅಂತ ಸುದ್ದಿ ಹಾಕಿದೀರಿ ?
- ಸಾರ್, ನೀವು ಎಲ್ಲಿಂದ ಮಾತಾಡೋದು ?

-೧೦-
- ನಾನು ನಿನ್ನೆ ಎರಡು ಒಳ್ಳೆಯ ಕೆಲಸ ಮಾಡಿದೆ
- ಏನವು ?
- ದಾರಿಯಲ್ಲಿ ಬರುವಾಗ ಒಬ್ಬ ಹಸಿದ ಮನುಷ್ಯನನ್ನ ನೋಡಿದೆ, ಅವನಿಗೆ 100 ರೂಪಾಯಿ ಕೊಟ್ಟು ಬಿಟ್ಟೆ.
- ಹೌದಾ? ಒಳ್ಳೆ ಕೆಲಸ ಮಾಡಿದ್ರಿ . ಮತ್ತೊಂದು ಒಳ್ಳೆಯ ಕೆಲಸ ಏನು?
- ಒಂದು ವರುಷದಿಂದ ನನ್ನ ಹತ್ರ ಇದ್ದ ನೂರರ ನಕಲಿ ನೋಟನ್ನ ದಾಟಿಸಿಬಿಟ್ಟೆ!

- ೧೧-
- ಅವನು ನಿನ್ನ ಸಂಬಂಧಿ ಅಂತ ಹೇಳಿಕೊಳ್ತಾನೆ ?
- ಅವನೊಬ್ಬ ಮೋಸಗಾರ ಕಣ್ರೀ ,
- ಹೋಗಲಿ ಬಿಡಿ, ಅದು ಆಕಸ್ಮಿಕ ಇರಬಹುದು.

-೧೨-
ಒಬ್ಬಾತ ದುಃಖದಲ್ಲಿ ಹೇಳುತ್ತಾನೆ - ಸಂಬಂಧಿಗಳನ್ನು ಕಳೆದುಕೊಳ್ಳುವದು ತುಂಬಾ ಕಠಿಣ ಸಂಗತಿ
ಶ್ರೀಮಂತ ಮನುಷ್ಯನ ಪ್ರತಿಕ್ರಿಯೆ - ಕಠಿಣ ? ಅದು ಅಸಾಧ್ಯ!

Rating
No votes yet