ನಗೆಹನಿಗಳು ( ಹೊಸವು ?) - ಮೂವತ್ತನೇ ಕಂತು

ನಗೆಹನಿಗಳು ( ಹೊಸವು ?) - ಮೂವತ್ತನೇ ಕಂತು

( ಇಂಗ್ಲೀಷ್ ನ ಜೋಕುಗಳ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮಗಾಗಿ ಕನ್ನಡಿಸುತ್ತಿದ್ದೇನೆ )

- 117 -

- ನಿನ್ನ ಸಂಬಳ ಎಷ್ಟು ಅಂತ ಯಾರಿಗೂ ಹೇಳಕೂಡದು .
- ಯಾರಿಗೂ ಹೇಳುವದಿಲ್ಲ , ಬಾಸ್ , ನನಗೂ ನಿಮ್ಮಷ್ಟೇ ನಾಚಿಕೆ ಎನಿಸುತ್ತದೆ

-118-

- ಮದುವೆ ಆದವರಿಗಷ್ಟೇ ನನ್ನ ಕಚೇರಿಯಲ್ಲಿ ಕೆಲಸ
- ಯಾಕೆ ?
- ಅವರಿಗೆ ಆಜ್ಞೆಗಳನ್ನು ಮರುಮಾತಿಲ್ಲದೆ ಪಾಲಿಸುವುದು ಅಭ್ಯಾಸ ಆಗಿರುತ್ತದೆ. ಅದಕ್ಕೆ!

-119-

-ನಿನ್ನ ಕಚೇರಿಯಲ್ಲಿ ಕೆಲಸ ಮಾಡುವ ಜನರಲ್ಲಿ ಯಾರ ಮದುವೆ ಆಗಿದೆ , ಯಾರದು ಆಗಿಲ್ಲ ಅಂತ ಖಚಿತವಾಗಿ ಗುರುತಿಸಬಲ್ಲೆ
- ಅದು ಹೇಗೆ ?
- ಇನ್ನೇನು ಅವರೆಲ್ಲ ಬರುವ ಹೊತ್ತು . ಯಾರೆಲ್ಲ ಫುಟ್ ರಗ್ಗಿಗೆ ಕಾಲೊರಸಿ ಒಳಗೆ ಬರ್ತಾರೋ ಅವರೆಲ್ಲ ಮದುವೆ ಆದೋರು , ಉಳಿದವರು ಅಲ್ಲ !

-120-

- ಏನು ಇವತ್ತು ಕಛೇರಿಗೆ ಲೇಟು ?
- ಸರ್ , ನಿದ್ದೆ ಸ್ವಲ್ಪ ಹೆಚ್ಚಾಗಿ ಏಳುವುದು ತಡ ಆಯಿತು.
- ಏನು? ನೀವು ಮನೆಯಲ್ಲೂ ನಿದ್ದೆ ಮಾಡ್ಥೀರಾ ?

Rating
No votes yet