ನಗೆಹನಿಗಳು ( ಹೊಸವು ?) - 34 ನೇ ಕಂತು

ನಗೆಹನಿಗಳು ( ಹೊಸವು ?) - 34 ನೇ ಕಂತು

( ಇಂಗ್ಲೀಷ್ ನ ಜೋಕುಗಳ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮಗಾಗಿ ಕನ್ನಡಿಸುತ್ತಿದ್ದೇನೆ )

- *** -

ಫೋನಿನಲ್ಲಿ
- ಬಾಸ್ ಆಫೀಸಿನಲ್ಲಿಲ್ಲ , ಮೇಡಂ . ಅವರು ಹೆಂಡತಿ ಜತೆ ಊಟಕ್ಕೆ ಹೋಗಿದ್ದಾರೆ
- (ಬಾಸ್ ನ ಹೆಂಡತಿ ) ಹೌದಾ? ಹಾಗಾದರೆ ಅವರ ಸ್ಟೆ ನೋ ಫೋನ್ ಮಾಡಿದ್ದಳು ಅಂತ ಹೇಳಿಬಿಡು

- *** -

( ಔಷಧ ಅಂಗಡಿಯಲ್ಲಿ)
- ಈ ಒಂದೇ ಮಾತ್ರೆಗೆ ನನ್ನ ನೆಗಡಿ ವಾಸಿಯಾಗುತ್ತಾ ?
- ಹೌದು ಸರ್, ಇದನ್ನು ತಗೊಂಡೋರು ಯಾರೂ ಮರಳಿ ಬಂದಿಲ್ಲ

- *** -

ಔಷಧ ಅಂಗಡಿಯಲ್ಲಿ ಮಾಲಕನನ್ನು ಯಾರೋ ಕೇಳಿದರು - ನಿಮ್ಮ ಅಂಗಡಿಯಲ್ಲಿದ್ದ ಆ ಚೆಂದದ ಸೇಲ್ಸ್ ಗರ್ಲ್ ಅನ್ನು ಕೆಲಸದಿಂದ ತೆಗೆದು ಹಾಕಿದಿರಾ?
ಮಾಲಕ - ಹೌದು. ಎಲ್ಲರೂ ಅವಳ ಮುಗುಳು ನಗೆ ಟಾನಿಕ್ಕಿಗೆ ಸಮ ಅಂತ ಹೇಳತಾ ಇದ್ದರು.

- *** -

( ಔಷಧ ಅಂಗಡಿಯಲ್ಲಿ)
ಗಿರಾಕಿ ಕೇಳಿದ- ನೀವು ಪೆನ್ ಇಟ್ಟಿದ್ದೀರಾ ?
ಅಂಗಡಿಯಾತ ಜಾಣತನದಿಂದ ಹೇಳಿದ - ಇಲ್ಲ, ನಾವು ಪೆನ್ ಮಾರುತ್ತೇವೆ .
ಗಿರಾಕಿ - ಸರಿ. ಇಷ್ಟೊಂದು ಜಾಣತನ ಇಲ್ಲದಿದ್ದರೆ ನೀನು ನನಗೆ ಮಾರಬಹುದಾಗಿದ್ದ ಪೆನ್ನನ್ನು ನೀನೇ ಇಟ್ಕೋ.

Rating
No votes yet