ನಗೆಹನಿಗಳು - 48 ನೇ ಕಂತು

ನಗೆಹನಿಗಳು - 48 ನೇ ಕಂತು

-ನೀವು ದಿನಕ್ಕೆ ಎಷ್ಟು ಸಲ ದಾಡಿ (shave) ಮಾಡುತ್ತೀರಿ ?
- 15-20 ಸಲ
- ದೇವರೇ, ನಿಮಗೇನು ಹುಚ್ಚೇ ?
- ಇಲ್ಲ , ನಾನೊಬ್ಬ ಕ್ಷೌರಿಕ
-----------
ನನ್ನದು ಸ್ವಚ್ಛ ಮನಸ್ಸಾಕ್ಷಿ , ಈತನಕ ಅದನ್ನು ಬಳಸಿಯೇ ಇಲ್ಲ .
-----------
ಟೀಚರ್ ಕೇಳಿದರು - ಯಾಕೋ ಶಾಲೆಗೆ ಬರಲು ತಡ ?
ಹುಡುಗ ಹೇಳಿದ - ದಾರಿಯಲ್ಲಿ ಒಂದು ಬೋರ್ಡ್ ಇತ್ತು , ಅದರಲ್ಲಿ ಬರೆದಿದ್ದರು , 'ಮುಂದೆ ಶಾಲೆ ಇದೆ , ನಿಧಾನವಾಗಿ ಹೋಗಿ' ಅಂತ.
--------
ಎರಡು ಬಸವನಹುಳುಗಳು ( ನಿಮಗೆ ಗೊತ್ತು ತಾನೇ ? ಬರಹ ನಿಘಂಟು ನೋಡಿ , ಮತ್ತೆ ನಿಘಂಟು ?? ) ರಸ್ತೆಯ ಪಕ್ಕದಲ್ಲಿ ಇದ್ದವು.
ಒಂದು ಹೇಳಿತು - ನಾನು ರಸ್ತೆ ದಾಟಬೇಕು
ಇನ್ನೊಂದು ಹೇಳಿತು - ಹುಷಾರಾಗಿರು , ಇನ್ನೊಂದು ಗಂಟೆಗೆ ಇಲ್ಲಿ ಒಂದು ಬಸ್ ಬರಲಿದೆ

Rating
No votes yet