ನಗೆಹನಿಗಳ ಅನುವಾದ - 45 ನೇ ಕಂತು

ನಗೆಹನಿಗಳ ಅನುವಾದ - 45 ನೇ ಕಂತು

ಆತನ ಹೆಂಡತಿ ಸಿಟ್ಟಿಗೆದ್ದು ಅವನ ಗಂಟೆಮೂಟೆ ಕಟ್ಟಿ , 'ಎಲ್ಲಾದರೂ ಹಾಳಾಗಿ ಹೋಗು , ಮರಳಿ ಬರಬೇಡ ' ಎಂದು ಅರಚಿದಳು.
ಆತ ಗಂಟೆಮೂಟೆ ಎತ್ತಿಕೊಂಡು ಬಾಗಿಲು ದಾಟುತ್ತಿದ್ದಂತೆ 'ನೀನು ನಿಧಾನವಾಗಿ ನರಳಿ ನರಳಿ ಸಾಯಿ' ಅಂತ ಕಿರುಚಿದಳು.
ಆತ ಕೂಡಲೇ ನಿಂತು 'ಹಾಗಾದರೆ ನಾನು ಈಗ ವಾಪಸ್ ಬರಬೇಕು ಅಂತ ನೀನು ಹೇಳ್ತಿದೀಯ ?' ಅಂತ ಕೇಳಿದ.
------
ನನ್ನ ಹೆಂಡತಿ ಮತ್ತು ನಾನು ಮದುವೆಯಾಗಿ 43 ವರ್ಷ ಆದವು . ವಿಚ್ಛೇದನದ ಬಗ್ಗೆ ನಾವು ಎಂದಿಗೂ ಯೋಚಿಸಲಿಲ್ಲ. ಕೊಲೆಯ ಬಗ್ಗೆ ?, ಹೌದು. ಆದರೆ ವಿಚ್ಛೇದನ? ಇಲ್ಲವೇ ಇಲ್ಲ
-------
ಒಬ್ಬ ಗಂಡ ತನ್ನ ಹೆಂಡತಿಗೆ ಕೇಳಿದ - ನಾನು ಸತ್ತರೆ ನೀನು ಮತ್ತೆ ಮದುವೆ ಆಗುವಿಯಾ ?
ಅವಳು - ಇಲ್ಲರೀ , ನಾನು ಹೋಗಿ ನನ್ನ ತಂಗಿಯ ಜತೆಯಲ್ಲಿ ಇರುತ್ತೇನೆ. ಮತ್ತೆ , ನಾನು ಸತ್ತರೆ ನೀವು ಮತ್ತೆ ಮದುವೆ ಆಗುತ್ತೀರಾ ?
ಗಂಡ ಹೇಳಿದ - ಇಲ್ಲ ಕಣೇ?, ನಾನೂ ಕೂಡ ಹೋಗಿ ನಿನ್ನ ತಂಗಿಯ ಜತೆಯಲ್ಲಿ ಇರುತ್ತೇನೆ.
----

Rating
No votes yet

Comments

Submitted by smurthygr Tue, 11/28/2017 - 15:56

ಈ ರೀತಿ ಹೆಂಡತಿಯನ್ನು ಅಪಹಾಸ್ಯ ಮಾಡುವ 'ನಗೆಹನಿಗಳು' ಯಾಕೋ ಸರಿ ಅನ್ನಿಸುವುದಿಲ್ಲ. ಅದನ್ನು ಯಾವ ರೀತಿಯಲ್ಲಿ 'ಕೇವಲ ತಮಾಷೆ' ಎಂಬಿತ್ಯಾದಿಯಾಗಿ ಸಮರ್ಥಿಸಿಕೊಂಡರೂ ಕೂಡ.

Submitted by shreekant.mishrikoti Tue, 11/28/2017 - 20:22

In reply to by smurthygr

ನಾಲ್ಕನೇದರ ಬಗ್ಗೆ ನಿಮ್ಮ ಆಕ್ಷೇಪ ಇರಬಹುದು, ಅದನ್ನು ನಿರ್ವಾಹಕರ ಮೂಲಕ ತೆಗೆಸುತ್ತೇನೆ.
ಅಜಾಗರೂಕತೆಗಾಗಿ ಕ್ಷಮಿಸಿ. ಮುಂದೆ ಹೀಗಾಗದಂತೆ ಎಚ್ಚರ ವಹಿಸುತ್ತೇನೆ.

Submitted by smurthygr Wed, 11/29/2017 - 16:58

In reply to by shreekant.mishrikoti

ನಾಲ್ಕನೆಯದು ಅಂತ ಅಲ್ಲ, ಸಾಮಾನ್ಯವಾಗಿ ಹೆಂಡತಿಯರು ರಾಕ್ಷಸಿಯರು ಅನ್ನೋ ತರ ಬರೆದು ಅದನ್ನೇ ಹಾಸ್ಯ ಅಂತಾರಲ್ಲ ಅದಕ್ಕೇ ... :-( . ಎಲ್ಲರ ಹಾಸ್ಯದಲ್ಲೂ ಇದು ಮಾಮೂಲಿ ಆದ್ದರಿಂದ ನಿಮಗೆಂದೇ ಪ್ರತ್ಯೇಕವಾಗಿ ಹೇಳಿದ್ದಲ್ಲ. ನನ್ನ ಅನಿಸಿಕೆ ಅಷ್ಟೇ. ಬಹಳಷ್ಟು ಜನ ಇಂತಹದ್ದನ್ನೇ ಮೆಚ್ಚುವುದರಿಂದ ತೆಗೆಸುವ ಅವಶ್ಯಕತೆಯೇನೂ ಕಾಣುವುದಿಲ್ಲ.

Submitted by Iynanda Prabhukumar Thu, 11/30/2017 - 15:52

ಹೆಂಡ್ತೀನ ತಮಾಶೇನೂ ಮಾಡ್ಬಾರ್ದಾ? (ನಮ್ ಒಳ್ಳೇದಕ್ಕೇನೇ ಹೇಳಿದ್ದೀರಾ?) ಸರಿ ಬಿಡಿ; ಸುಮ್ನೆ ಶಿವಲಿಂಗದ್ ಥರಾ ಸ್ಥಾಪಿತವಾಗಿರ್ತೀನಿ ;)