ನಗೆ ಮಲ್ಲಿಗೆ

ನಗೆ ಮಲ್ಲಿಗೆ

ನಗೆ ಮಲ್ಲಿಗೆ

ಶರತ್ಕಾಲ,ಹಿಮದ ಕೌದಿ ಹೊದಿಸಿ
ಭುವಿವ ಮೈ ಹಾಸಿನ ಮೇಲೆಲ್ಲ
ಕೊರೆವ ಚಳಿ ಆವರಿಸಿ
ಬಸಿದು ವೃಕ್ಷಗಳ ಬನಿಯನು
ಎಲೆಯುದಿರಿಹ ರೆಂಬೆ-ಕೊಂಬೆಗಳ
ಬೋಳುವನ ಶೋಭಿಸುವುದು
ಉರಿವ ತಾಪದಲೆ,
ಜಳಪಿಸುವ ರವಿಯ ಕಿರಣಗಳಿಗೆ
ಮೈಯೊಡ್ಡಿ ನಲುಗಿ ನಲಿವುದು ಬನ.

ಮಾಗಿಯಲಿ ಮಾಗಿದೆಲೆಗಳ
ಕೊಂಡಿ ಕಳಚಿ ಜಾರಿದೆಲೆಗಳ
ತಬ್ಬಿಮಣ್ಣು ಪ್ರೀತಿ ಹಬ್ಬಲು
ಸೊಗಸ ಸೂಸಿ ಬೆಳೆದಾವು
ಸುಖದ ಚಿಗುರೆಲೆಯು.

ಅಂಬೆಗಾಲಿಡಲು ತಂಬೆಲರು
ನಗೆ ತುಂಬಿ ವನದಲಿ
ಹಸಿ ಹಸಿರಲಿ ಚಿಮ್ಮಿ ಹರುಷದ ಹೊನಲು
ಹೂವರಳುವುದು ಹೊಂಬಿಸಿಲಲಿ;

ಚೈತ್ರದ ಚೆಲುವು ಪಸರಿಸಿ ಜಗವೆಲ್ಲ
ಮೌನಕರಗಿ ಉಲಿವ ಕೋಗಿಲೆ ಗಾನದ
ಇಂಪಿಗೆ ಈ ನಶ್ವರನೆದೆಯಲು
ಅನಂತಸಿರಿಯ ನಗೆಮಲ್ಲಿಗೆ ಸುಧೆಯು!!
ಎಚ್.ಎನ್.ಈಶಕುಮಾರ್

Rating
No votes yet