ನಡೆಸು ಪಯಣವನು

ನಡೆಸು ಪಯಣವನು

ವೇಗದಲಿ ಸಾಗುವರು ಇಲ್ಲಿ ಎಲ್ಲರು
ನಿನ್ನ ಒಲಿತನು ಯಾರು ಬಯಸರು
ರಭಸಕ್ಕೆ ನೀ ಸಿಲುಕಿ ನಲುಗದಿರು
ಕುರಿಮಂದೆ ಹಿಂದೆ ನೀ ಹೋಗದಿರು

ಇವರ ಹೊರನೋಟ ಬಲು ಆಕರ್ಷಕ
ಸಿಹಿ ನುಡಿಯ ಸುರಿಮಳೆ ಬರಿ ನಾಟಕ
ಸುಲಿಯದಿರು ಇವರ ಬಳಿ ಇರಲಿ ಎಚ್ಚರ
ಕೊಳೆತ ಮನಸಿನವರು ಹೋಗು ನೀ ದೂರ

ವಸ್ತುಗಳ ವ್ಯಾಮೋಹದಲಿ ಮುಳುಗಿರುವರು
ಈ ಸ್ಪರ್ಧೆಯ ವೇಗಕ್ಕೆ ಕೊಚ್ಚಿಹೋಗುವರು
ಕುರುಡು ಕಾಂಚಾಣದ ದಾಸರಾಗಿಹರು
ನೋಡು ಗ್ರಾಹಗೀಕರಣದ ಭೂತ ಹಿಡಿದವರು

ಮನುಜನ್ಮ ಅತ್ಯಮೂಲ್ಯ ತಿಳಿದಿರಲಿ ಗೆಳೆಯ
ಮರುಜನ್ಮ ಇಹುದೆಂದು ಯಾರು ಬಲ್ಲವರು
ವ್ಯರ್ಥ ಮಾಡದೆ ನಿನಗೆ ಸಿಕ್ಕ ಅವಕಾಶವನು
ಸಂತಸದಿ ದಿನ ದಿನವು ನಡೆಸು ಪಯಣವನು
****

ವಕ್ರ ವ್ಯಾಕರಣಗಳ ತಿಳಿಸಿ ಸಹಕರಿಸುವವರಿಗೆ ನನ್ನಿ.

Rating
No votes yet