ನದಿ-ತಟಾಕದಲ್ಲಿ ಹರಿವ ನೀರೇ ನದಿಃ ಗಾದೆಗೊಂದು ಗುದ್ದು--೭೭

ನದಿ-ತಟಾಕದಲ್ಲಿ ಹರಿವ ನೀರೇ ನದಿಃ ಗಾದೆಗೊಂದು ಗುದ್ದು--೭೭

 (೩೯೧) ಕಾರಿನ ಮೇಲ್ಛಾವಣೆ ಮತ್ತು ಚಾಲಕನ ನಡುವಣ ವ್ಯತ್ಯಾಸವನ್ನು ಅತ್ಯಂತ ಕಡಿಮೆಗೊಳಿಸಿ, ಚಾಲಕನ ಶಿರದ ಆಕಾರಕ್ಕೆ ಆ ಮೇಲ್ಛಾವಣೆಯನ್ನು ಬಾಗಿಬಗ್ಗಿಸಿದಾಗ ದೊರಕುವುದನ್ನು ಶಿರಸ್ತ್ರಾಣ (ಹೆಲ್ಮೆಟ್) ಎನ್ನುತ್ತೇವೆ.

(೩೯೨) ಸಿಗರೇಟು ಸೇವನೆಯೊಂದೇ ನೇತ್ಯಾತ್ಮಕ-ಧೂಮಪಾನವೆಂಬ (ಪ್ಯಾಸಿವ್ ಸ್ಮೋಕಿಂಗ್) ದುಶ್ಚಟವನ್ನು ತಡೆಯಲಿರುವ ಸೂಕ್ತ ಪರಿಯಾರ!

(೩೯೩) ಸೂಕ್ತಕಂಡ ಮಾನವ ದೇಹವನ್ನು ಆಯ್ದ ಭಂಗಿಗಳಲ್ಲಿ, ವಿವಸ್ತ್ರಿತ ರೂಪದಲ್ಲಿ ಕಲ್ಪಿಸಿಕೊಳ್ಳುವುದೇ ಕಾಮ. ಮಿಕ್ಕುಳಿದ ಇಂತಹದ್ದೇ ಕ್ರಿಯೆಗಳ ಭೌತಿಕ ಆಯಾಮವನ್ನು ಲೈಂಗಿಕತೆ ಎನ್ನುತ್ತೇವೆ.

(೩೯೪) ಎಂದೂ ಸಾಧಿಸಲಾಗದೆ ಕೇವಲ ’ಕೊಡಮಾಡಿರುವುದು’ ಅಥವ ’ಸ್ವೀಕರಿಸಲ್ಪಟ್ಟಿರುವುದನ್ನು’ ಪ್ರಶಸ್ತಿ ಎನ್ನುತ್ತೇವೆ. 

(೩೯೫) ನದಿಯು ನದಿ-ತಟಾಕದ ದಡದಲ್ಲಿ ಹರಿಯುತ್ತದೆ.

 

Rating
No votes yet