ನನಗಾಗಿ ಕಣ್ಣೀರ ಹರಿಸಿಯಾರು ಏಕೆ?

ನನಗಾಗಿ ಕಣ್ಣೀರ ಹರಿಸಿಯಾರು ಏಕೆ?

ಸಖೀ,


ನಿನ್ನ ಪ್ರೀತಿ ತುಂಬಿದ್ದ ನನ್ನ ಹೃದಯವನ್ನು


ನಾನು ಅದೆಂದೋ ಛಿದ್ರ ಮಾಡಿಯಾಗಿದೆ


ನಾ ಛಿದ್ರ ಮಾಡಿಯಾಗಿದೆ


ನಿನಗೆ ಅಪಮಾನ ಆಗಬಾರದೆಂದು ನಾನು


ನಿನ್ನ ಹೆಸರ ಕೂಗುವುದನ್ನೇ ನಿಲ್ಲಿಸಿಯಾಗಿದೆ


ಸಖೀ, ನಾ ನಿಲ್ಲಿಸಿಯಾಗಿದೆ


 


ನಿನ್ನ ನೆನಪು ಆದಾಗಲೆಲ್ಲಾ ನಾನು ನಿನ್ನನ್ನು


ಪ್ರೀತಿಸಿರಲೇ ಇಲ್ಲ ಎಂದು ಎಣಿಸುತ್ತೇನೆ


ನಿನ್ನ ಭೇಟಿ ಆದಾಗಲೆಲ್ಲಾ ನಾನು ನಿನ್ನನ್ನು


ನೋಡಿರಲೇ ಇಲ್ಲ ಎಂದು ಎಣಿಸುತ್ತೇನೆ


ನಿನ್ನ ಮನೆಗೆ ನನ್ನನ್ನು ಕರೆದೊಯ್ಯುತ್ತಿದ್ದ


ಆ ಬೀದಿಯನ್ನು ನಾನೆಂದೋ ತೊರೆದಾಗಿದೆ


ಸಖೀ, ನಾನೆಂದೋ ತೊರೆದಾಗಿದೆ


 


ನನ್ನನ್ನು ತನ್ನವನೆಂದೆನಲು ನಾನು ಯಾರು


ಯಾರೇ ಆದರೂ ನನ್ನವರಾದಾರು ಏಕೆ


ತಮ್ಮ ಕಣ್ಣೀರನ್ನು ಯಾರೇ ಆದರೂ


ನನಗಾಗಿ ವ್ಯರ್ಥ ಹರಿಸಿಯಾರು ಏಕೆ


ನಡು ನೀರಿನಲ್ಲಿ ನನ್ನ ಕೈಬಿಟ್ಟು ಹೋಗಿದ್ದ


ಆ ನಾವಿಕನಿಗೂ ನನ್ನ ಮೇಲೆ ಮುನಿಸಿದೆ ಏಕೆ


ಸಖೀ, ನನ್ನ ಮೇಲೆ ಮುನಿಸಿದೆ ಏಕೆ?


*********************


 


-ಆತ್ರಾಡಿ ಸುರೇಶ್ ಹೆಗ್ಡೆ


 


ದಿವಂಗತ ಮುಖೇಶ್ ಹಾಡಿರುವ ಹಳೆಯ ಹಿಂದೀ ಚಲನ ಚಿತ್ರಗೀತೆಯ ಭಾವಾನುವಾದದ ಪ್ರಯತ್ನ ಇಲ್ಲಿದೆ.


ಮೂಲ ಗೀತೆಯ ಆರಂಭ ಹೀಗಿದೆ:


"ಜಿಸ್ ದಿಲ್ ಮೆ ಬಸಾ ಥಾ ಪ್ಯಾರ್ ತೆರಾ..."

Rating
No votes yet