ನನಗೆ ಎಂಥದೋ ಒಂದು ಪ್ರಶಸ್ತಿ ಸಿಕ್ಕಿದೆ . ನಿಮಗೆ?
ಇದು ನಾನು ಬಹಳ ಹಿಂದೆ ಓದಿ ಇಂದಿಗೂ ನೆನಪಿನಲ್ಲುಳಿದ , ಅ.ರಾ.ಸೇ ಅವರ ಒಂದು ಹಾಸ್ಯ ಲೇಖನ.
ಒಂದು ಕಾರು ಪ್ರಯಾಣದ ಮಧ್ಯೆ ಒಂದು ಹಳ್ಳಿಯಲ್ಲಿ ಕೆಟ್ಟು ನಿಲ್ಲುತ್ತದೆ. ಕಾರಿನ ಮೇಲೆ ಚೆನ್ನೈ ಸಂಗೀತ ಅಕಾಡೆಮಿ ಎಂಬ ಬೋರ್ಡ್ ಇದೆ. ಅಲ್ಲೊಬ್ಬ ಸಂಗೀತಾಭಿಮಾನಿ. ಅವನು ಈ ಕಾರಿನ ಪ್ರಯಾಣಿಕರಿಗೆ ಎಲ್ಲ ಅನುಕೂಲ ಮಾಡಿಕೊಡುತ್ತಾನೆ. ತಿಂಡಿ, ವಿಶ್ರಾಂಟಿ , ಕಾರು ರಿಪೇರಿ ಇತ್ಯಾದಿ . ಕೊನೆಗೆ ಅವರು ಹೊರಡುವ ವೇಳೆ ಅವರ ಕಿವಿಗೆ ಬೀಳುವಂತೆ ಸಣ್ಣ ದನಿಯಲ್ಲಿ ಸಂಗೀತದ ಸಣ್ಣ ಆಲಾಪ ಮಾಡುತ್ತಾನೆ. ಪ್ರಯಾಣಿಕರು ಅದನ್ನು ಕೇಳಿ ಇವನತ್ತ ಹೊರಳಿ ನಂತರ ತಮ್ಮತಮ್ಮಲ್ಲಿ ಕಣ್ಣೋಟಗಳ ವಿನಿಮಯ ಮಾಡಿಕೊಂಡು ' ನಿಮಗೆ ನಂತರ ಪತ್ರ ಬರೆಯುತ್ತೇವೆ' ಎಂದು ಹೇಳಿ ಹೊರಡುತ್ತಾರೆ.
ಕೆಲದಿನಗಳ ನಂತರ ಚೆನ್ನೈ ಸಂಗೀತ ಅಕಾಡೆಮಿ ಯ ಲೆಟರ್‍ಹೆಡ್‍ನಲ್ಲಿ ಒಂದು ಪತ್ರ ಬರುತ್ತದೆ. 'ತಮ್ಮ ಸಂಗೀತದ ತುಣುಕು ಕೇಳಿದೆವು. ಕರ್ಣಾಟಕ ಸಂಗೀತದ ಭವಿಷ್ಯದ ಹಿತವನ್ನು ಗಮನಿಸಿ ತಮ್ಮಲ್ಲಿ ಕೇಳಿಕೊಳ್ಳುವದೇನೆಂದರೆ ತಾವು ದಯವಿಟ್ಟು ಸಂಗೀತ ಕಛೇರಿ ಕೊಡುವ ವಿಚಾರವನ್ನೆಂದೂ ಮಾಡಬಾರದು. ಚೆನ್ನೈ ಸಂಗೀತ ಅಕಾಡೆಮಿಯ ದಿಕ್ಕಿನಲ್ಲಿ ತಲೆಯನ್ನು ಕೂಡ ಹಾಕಬಾರದು. ಅಂದರೆ ಕರ್ಣಾಟಕ ಸಂಗೀತಕ್ಕೇ ತಮ್ಮಿಂದ ಬಹಳ ಸೇವೆಯಾಗುತ್ತದೆ' ಎಂದು.
ಆಗ ಈತ ಹೇಳುತ್ತಾನೆ- ನನಗೆ ಎಂಥದೋ ಒಂದು ಪ್ರಶಸ್ತಿ ಸಿಕ್ಕಿದೆ . ನಿಮಗೆ?
ಹಿಂದಿನ ಬ್ಲಾಗ್ ಒಂದರಲ್ಲಿ ಈ ಬಗ್ಗೆ ಬರೆಯುತ್ತೇನೆ ಎಂದು ಹೇಳಿದ್ದೆ. ಬರೆದಿದ್ದೇನೆ. ಅ.ರಾ.ಸೇ. ಅವರಿಗೆ ಧನ್ಯವಾದಗಳು. ಅವರಿಂದ ಇನ್ನಷ್ಟು ಇಂತಹ ಲೇಖನಗಳು ಬರಲಿ.