ನನ್ನಲ್ಲಿ ಒಬ್ಬ ಕವಿ ಹುಟ್ಟಿದ್ದು ಹೀಗೆ....

ನನ್ನಲ್ಲಿ ಒಬ್ಬ ಕವಿ ಹುಟ್ಟಿದ್ದು ಹೀಗೆ....

ನನ್ನಲ್ಲಿ ಒಬ್ಬ ಕವಿ ಇದಾನೆ ಅನ್ನೋ ಸತ್ಯ ನನಗೆ ಗೊತ್ತಿರಲಿಲ್ಲ. ನನ್ನ ಸ್ನೇಹಿತರೆಲ್ಲ ನೀನು ಒಂದೊಂದ್ ಸಲ ಕವಿ ಥರ ಮಾತಾಡ್ತಿಯ ಅಂಥ ಹೇಳ್ತಿದ್ರು ಆದ್ರೆ ನನಗೆ ಎಂದು ಆ ಥರ ಅನ್ನಿಸಿರಲಿಲ್ಲ. ಈಗ ಕವಿ ಹುಟ್ಟಿದ ಕಥೆ ಹೇಳ್ತೀನಿ, ಆಗಸ್ಟ 4, 2007 ರಾತ್ರಿ 9 ಗಂಟೆಗೆ ಬೆಂಗಳೂರು ಮಜೆಸ್ಟಿಕ್ ಇಂದ ಹೊಸಕೆರೆಹಳ್ಳಿ ನಲ್ಲಿ ಇದ್ದ ನನ್ನ ಮನೆಗೆ ಹೋಗೋಕೆ 45G ಬಸ್ ಹತ್ತಿದೆ. ಮಜೆಸ್ಟಿಕ್ ಹತ್ರ ಇರೋ ಶಾಂಥಳ ಸಿಲ್ಕ್ಸ್ ಹತ್ರ ಇದ್ದ ಸಿಗ್ನಲ್ ಹತ್ರ ಬಸ್ ನಿಲ್ತು....ಆಗ ಒಬ್ಬಳು ಹುಡುಗಿ ರೋಡ್ ಕ್ರಾಸ್ ಮಾಡೋದು ನೋಡಿದೆ...ತುಂಬ ಸುಂದರವಾಗಿ ಇದ್ದಳು...ಅವಳ ನೋಟ...ಅವಳ ಮುಖದಲ್ಲಿದ್ದ ಮುಗ್ಧತೆ... ಕಣ್ಣಿನಲ್ಲಿದ್ದ ಒಂದು ದುಗುಡ....ನಾನು ಅವಳನ್ನ ಮತ್ತೆ ಮತ್ತೆ ನೋಡೋ ಹಾಗೆ ಮಾಡಿತು....ಬಸ್ ಏನೋ ಮುಂದೆ ಹೋಯಿತು ಆದ್ರೆ ಅವಳು ಮಾತ್ರ ನನ್ನ ಕಣ್ಣಿನ ರೆಪ್ಪೆ ಒಳಗೆ ಇದ್ದಳು...ಅವಳನ್ನ ವರ್ಣಿಸಿ ಒಂದು ಕವನ ಬರೆದೆ.....ಅಲ್ಲಿಂದ ಶುರುವಾದ ನನ್ನ ಕವನ ಬರೆಯೋ ಪಯಣ ಇನ್ನು ಸಗ್ತಾನೆ ಇದೆ... ನನ್ನೊಳಗೆ ಒಬ್ಬ ಕವಿಯನ್ನ ಹುಟ್ಟು ಹಾಕಿದ ಆ "ಭಾವನೆಗಳ ಬಾಲೆ"ಗೆ ನಾನೆಂದು ಚಿರಋಣಿ.... ನಾ ಬರೆದ ಮೊದಲ ಕವನದ ಎರಡು ಸಾಲುಗಳನ್ನು ಇಲ್ಲಿ ಬರೆಯುತ್ತಿದ್ದೇನೆ...ಪೂರ್ತಿ ಕವನ ನಾಳೆ ನನ್ನ ಬ್ಲಾಗ್ ನಲ್ಲಿ ಬರೆಯುತ್ತೇನೆ...
"ನಾ ನಿನ್ನ ನೋಡಿದ ಆ ಕ್ಷಣ ಮರುಕ್ಷಣ
ನನ್ನಲ್ಲಿ ಹುಟ್ಟಿದ ಭಾವನೆಗಳ ತುಂಬಿದ ಪ್ರೇಮ ಕವಿ "

-Vರ ( Venkatesha ರಂಗಯ್ಯ )

Rating
No votes yet

Comments