ನನ್ನವ
ಅವ,
ನನ್ನೆದೆಯ ಗೂಡೊಳಗಿನ,
ನಿರಂತರ ಕಲರವ..
ಅವನ ಕಣ್ಣಲ್ಲಿ ಕಣ್ಣ,
ಇಟ್ಟು ಮಾತನಾಡಲು..
ಅದೆನೋ ಢವ..ಢವ..
ಎದುರಿದ್ದಕ್ಕಿಂತ,
ಮರೆಯಾದಾಗಲೇ..ಹೆಚ್ಚು,
ಕಾಡುವನವ..
ಅವನಿದ್ದ ದಿನ,
ನನ್ನೆದೆಯ ಗುಡಿಯ,
ದೇವನಿಗದೋ..ಬ್ರಹ್ಮೋತ್ಸವ..
ಅವ, ನನ್ನೊಳಗೆ,
ನನಗರಿವೇ ಇಲ್ಲದಂತೆ..
ಬೆರೆತು ಹೋದಂತಹ..
ಒಂದು..ಭಾವ.
Rating