ನನ್ನೂರಿಗೆ ಪಯಣ
ನನ್ನೂರಿಗೆ ಪಯಣ
ಗೃಹವಿರಹದ ದುಗುಡವು ಕಾಡಿದೆ ಎನಗೆ
ಮಾತೃವಾತ್ಸಲ್ಯದ ಕೂಗು ತಲುಪಿದೆ ಕಿವಿಗೆ
ಊರಿನ ದಾರಿ ಕೈಚಾಚಿ ಕರೆಯುತಿದೆ ಇಂದು
ಹಬ್ಬದ ನೆಪ ಮಾಡಿ ಮನೆಗೊರಡುವ ಎಂದು
ಮುಂಜಾವಿನ ನಸುಕಿನಲೇ ನಾ ಹತ್ತಿದೆ ರೈಲು
ಕಾಯಲಾರೆ ನಾ ಮನೆಯವರನು ನೋಡಲು
ಬೆಳಗಿನ ಆಹ್ಲಾದದಲಿ ಬೆಚ್ಚನೆ ರೈಲಿನ ಪಯಣ
ಬಿಡಿಸಿಕೊಳ್ಳಲು ಆಗುವುದೇ ನಮ್ಮೂರಿನ ಋಣ
ಪಯಣದ ಹಾದಿಯಲಿ ಸಿಗುವ ಎಲ್ಲಾ ಊರುಗಳು
ಕ್ರಮೇಣವಾಗಿ ಇಳಿಸುವವು ವಿರಹದ ಭಾರಗಳ
ಊರು ಸಮೀಪಿಸಿದಾಗ ಕರೆಯಿತು ಎನ್ನ ಒಲುಮೆ
ಊರನು ತಲುಪಿದೊಡೆ ನಾ ಉತ್ಸಾಹದ ಚಿಲುಮೆ
ಕೈ-ಚೀಲವ ಹೊತ್ತು ನಾ ಹಾಕಿದೆ ಸರ ಸರ ಹೆಜ್ಜೆ
ನನಗೂ ಇರುವುದು ಕೇವಲ ಎರಡು ದಿನಗಳ ರಜೆ
ಮನೆಯಲಿ ಕಾದಿಹರು ಮನೆಯವರೆಲ್ಲ ನನಗಾಗಿ
ನಾ ಬಂದು ಒತ್ತುವ ಆ ಕರೆಘಂಟೆಯ ಸದ್ದಿಗಾಗಿ
- ತೇಜಸ್ವಿ .ಎ .ಸಿ
Rating
Comments
ಉ: ನನ್ನೂರಿಗೆ ಪಯಣ
In reply to ಉ: ನನ್ನೂರಿಗೆ ಪಯಣ by manju787
ಉ: ನನ್ನೂರಿಗೆ ಪಯಣ
ಉ: ನನ್ನೂರಿಗೆ ಪಯಣ
In reply to ಉ: ನನ್ನೂರಿಗೆ ಪಯಣ by kamath_kumble
ಉ: ನನ್ನೂರಿಗೆ ಪಯಣ
ಉ: ನನ್ನೂರಿಗೆ ಪಯಣ
In reply to ಉ: ನನ್ನೂರಿಗೆ ಪಯಣ by asuhegde
ಉ: ನನ್ನೂರಿಗೆ ಪಯಣ