ನನ್ನೆದೆಯಲ್ಲೀಗ ಮೊಗ್ಗು ಚಿಗುರಿಲ್ಲ ಹೂವು ಅರಳಿಲ್ಲ.
ನನ್ನೆದೆಯಲ್ಲಿ
ಮೊಗ್ಗೊಂದು ಅರಳಿದಾಗಲೇ
ಹಿಚುಕಿ ಹಾಕಿ
ಬಿಡಬೇಕೆಂದುಕೊಂಡೆ,
ಮೊಗ್ಗರಳಿ ಹೂವಾಗಿ
ನಗುತಿರಲು ಹಿತವಾಗಿ
ಮನ ಸೋತಿತು ..
ಅಂದದಲಿ ಚಂದದಲಿ
ಸೌಗಂಧ ಚೆಲ್ಲಿರಲು
ನನದೆಂದೇ ಬಗೆದೆ ನಾನು
ಆದರೆ
ಒಂದೇ ರಾತ್ರಿಯಲಿ
ಇದ್ದಕ್ಕಿದ್ದಂತೆ ಸುರಿದ
ಮಳೆಗಾಳಿಯಾರ್ಭಟದಿ
ಮುರುಟಿ ನೆಲಕಚ್ಚಿತ್ತು.
ನನ್ನೆದೆಯಲ್ಲೀಗ ಮೊಗ್ಗು ಚಿಗುರಿಲ್ಲ
ಹೂವು ಅರಳಿಲ್ಲ.
Rating