ನನ್ನೋoಟಿತನದ ಆ ಒಂದು ಸಂಜೆ

ನನ್ನೋoಟಿತನದ ಆ ಒಂದು ಸಂಜೆ

ಚಿತ್ರ
ಹೀಗೆ  ಮಳೆಗಾಲದ ಒಂದು ದಿನ( date, time, ಮರೆತುಹೋಗಿದೆ ) ಕೆಲಸವಿಲ್ಲದ  ನಾನು   ಸಂದರ್ಶನದ  (interview ) ರಗಳೆಯ  ಮುಗಿಸಿಕೊಂಡು  ನಿರುದ್ಯೋಗಿಯಾಗಿಯೇ company ಇಂದ ಹೊರಬಿದ್ದೆ , ಮುಂಜಾನೆಯಿಂದ ಅವುಡುಗಚ್ಚಿದ್ದ  ಹಸಿವು ಒಮ್ಮೆಲೇ  ಹೊಟ್ಟೆಯಲ್ಲಿ  ಬೆಂಕಿ  ಹತ್ತಿಸಿತ್ತು , ಹಸಿವ  ತಣಿಸಲು  ಜೇಬಲ್ಲಿ  ನಯಾ ಪೈಸೆ ಇಲ್ಲ ,ಅದರೊಟ್ಟಿಗೆ ಮನದಾಳದಲ್ಲಿ  ಕೆಲಸ  ದೊರೆಯಲಿಲ್ಲವೆಂಬ ಒಂದು ಸಣ್ಣ ಕೊರಗು, ಹೇಗೋ ಮನದ ಅಪಹಾಸ್ಯವ ಆಲಿಸುತ್ತ  ಬದಿಯ ಪಾನ್  ಅಂಗಡಿಯವನಿಗೆ ದ್ರೋಹವೆಸಗಿ ಒಂದು ಸಿಗರೇಟ್   ಚಹ ಪಡೆದು ಅಲ್ಲಿಂದ ಕಾಲ್ಕಿತ್ತು, ಬಸ್ ಹತ್ತಿ ಪಾಸ್ ಎಂದ್ಯಾಮಾರಿಸಿ ಕೊನೆಗೆ ಕಾಮಾಕ್ಷಿಪಾಳ್ಯದ ಮನೆ ಸೇರಿದೆ, ಕದ ತೆರೆದು ಒಳ ಹೊಕ್ಕು ಕಣ್ಣಂಚಲಿ ಕಂಬನಿಯನಿರಿಸಿ ಪಕ್ಕದಲ್ಲೇ ಇದ್ದ ಮಂಚದ ಮೇಲೆ file ಎಸೆದು ಏನೋ ಕಳಕೊಂಡಂತೆ ಯೋಚಿಸುತ್ತ  ಕುಳಿತೆ, ಮುಂಜಾನೆಯಿಂದಲೂ 4 ಸಂದರ್ಶನದಲ್ಲಿ ಪಾಸಗದೆ ಘಾಸಿಗೊಂಡ ಮನಸ್ಸು, ಅನಿರೀಕ್ಷಿತ ನೀರವ ಮೌನ, ಆತ್ಮಹತ್ಯೆಗೆ ಹುರಿದುಂಬಿಸುವ ವಾತಾವರಣ, ಈ  ಎಲ್ಲದರ ನಡುವೆ ಹಸಿವ ಹೊತ್ತ ಅರೆಪ್ರಜ್ಞಾವಸ್ಥೆ, ನನ್ನಿರುವಿನಿಂದ ಮತ್ತೆಲ್ಲಿಗೋ ಸೆಳೆಯುತ್ತಿತ್ತು, ಈ ಗೊಂದಲದ ಯೋಚನಾ ಲಹರಿಯಲಿ ಘಟಿಸಿದ ಘಟನೆಗಳು ಹಾಗೆ ಕಣ್ಮುಂದೆ ಹಾದು  ಹೋಗುತಿದ್ದವು, ಎದೆಯೊಳಗೆ ಬೆಂಕಿಯನ್ನಿರಿಸಿ ಸಮಯ  ದೂಡುವುದು  ದುಸ್ತರವಾಗಿ FM on ಮಾಡಿದೆ . FM on ಮಾಡುತ್ತಲೇ ಕಾಕತಾಳಿಯವೆಂಬಂತೆ  ನನ್ನಂತರoಗವ ಬಡಿದೆಬ್ಬಿಸುವ ಹಾಡೊಂದು ತೇಲಿ  ಬಂತು  ( ಹೊಂಗನಸ ಚಾದರದಲ್ಲಿ ಮುಳ್ಳಿನ  ಹಾಸಿಗೆಯಲಿ  ಮಲಗಿ ಯಾತನೆಗೆ ಮುಗುಳ್ನಗು ಬರಲು ) ಈ ಪದಗಳ ಕೇಳುತ್ತಲೇ ಧುತ್ತೆಂದು ಅವಿತಿದ್ದ ನನ್ನಾವೆದನೆಯೊಂದು ಕಣ್ಣಮುಂದೆ ಬಿತ್ತರಿಸಿತು.
   " ಬದುಕು ಕೆಲವೊಮ್ಮೆ ಕೆಲವರೆಡೆಗೆ ಕ್ರೂರವಾಗುತದೆ ಎಂದೆಲ್ಲೋ ಓದಿದ್ದೆ ಆದರೆ ಅದು ನನ್ನ ಪಾಲಿಗೂ ಆಹ್ವಾನವಾಗಿ ಬರುತ್ತೆ ಎಂದು  ನಾ ನಿರೀಕ್ಷಿಸಿರಲಿಲ್ಲ ,ಅಪವಾದವೋ ಎಂಬಂತೆ ನನ್ನ ಬಾಳಲ್ಲೂ ಪ್ರೀತಿಯ ಪ್ರವೇಶವಾಗಿತ್ತು!. ಬಂದನೆನ್ನ ಭಾಗ್ಯವೆಂದೆoದುಕೊಂಡು, ಹೊರಟೆ ಪ್ರೀತಿಯ ಬೆನ್ನೇರಿ ಜಾಡ ಹಿಡಿದು ತಿಳಿಯದ ದಾರಿ, ಎಷ್ಟೋ ಸಂಗತಿಗಳು ಘಟಿಸಿದ ನಂತರ, ನಾ , ಮನೆ ತೊರೆದೆ ಹಂಬಲಿಸಿದ ಪ್ರೀತಿಯ ಪಡೆದೆ,  ಅಂದು ಕೈಗೆಟುಕಿದಂತೆ ಕೈಜಾರ್ವ ಪರಿಸಿತ್ದಿಯದಗಿತ್ತು, ಯಾರೊಬ್ಬರ ಸಹಾಯವಿಲ್ಲ, ನನ್ನವಳೊಡನೆ ನಾನೊಬ್ಬನೇ, ಹಾಗೋ ಹೇಗೋ ಕಷ್ಟಪಟ್ಟು  ಗುಲ್ಬರ್ಗದ ಗೆಳಯನ ಸೇರಿಕೊಂಡೆವು, ಆನಂತರದ ೫೦ ದಿನಗಳು (Feb 25/2007 to April 16/2007) ವರ್ಣಿಸಲು ಅಸಹನೀಯ, ನಮ್ಮವರೆoದಿದ್ದವರಿಗೆ ನಾವೇ ವಜ್ಜಾಗಿದ್ದೆವು ( ಭಾರವಗಿದ್ದೆವು ಈ ಸಂಗತಿ ತಿಳಿದದ್ದು ಒಂದು ಫೋನ್ ಸಂಭಾಷಣೆಯಲ್ಲಿ,) ಕೊನೆಯ ದಿನಗಳಲ್ಲಿ  ನೆರಳ ನಂಬಿ ಎಷ್ಟೋ ಬಾರಿ ಕಾಡಿನಲ್ಲಿ ಸಂಚರಿಸಿದ್ದೇನೆ ಹೊತ್ತು ಊಟಕ್ಕಾಗಿ .
ಅಬಬ್ಬಾ!!!!! ಹೇಗೋ ಕಾಲಡಿಯಲ್ಲಿಯೇ ಕಾಲ ದೂಡಿದೆವು, ಕೇಡು ಬಯಸಿದವನಿಂದಲೇ ಎಲ್ಲವೂ ಸುಸೂತ್ರವಾಗಿತ್ತು,  ಅನಂತರ ಮದುವೆ ಎಲ್ಲ ಸಂಕಷ್ಟಗಳ ಕಳೆದು ಬದುಕು ಕಟ್ಟಿಕೊಳ್ಳೋಣವೆಂದು ಬೆಂಗಳೂರಿಗೆ ಬಂದರೆಇಲ್ಲಿನ ವಾತಾವರಣವೋ ಅಸಹನೀಯ, ಪ್ರತಿದಿನ ಹಸಿವಿನಾಹ್ವಾನ, ಪುಡಿಗಾಸೂ ಇಲ್ಲದ ಜೋಡಿ ಪಯಣ ಯೆನ್ನದಾಗಿತ್ತು, ಬಿಸಿ ರಕ್ತವೂ ಕೂಡ ಈ ಮೋಸದ ನಗರಿಯಲ್ಲಿ ಶೀತಲವಾಗಿತ್ತು , ಮುಂದಿನ ಜೀವನ ಒಂದು ಪ್ರಶ್ನೆಯಂತೆ ಗೋಚರಿಸಿ, ಕಂಗಳು ವೇದನೆಯ ಕಂಬನಿಯಲಿ ತೊಯ್ದವು, ಕಣ್ಹನಿಯ ಸ್ಪರ್ಶಕ್ಕೆ ಮನಸ್ಸು ಚಂಚಲವಾಗಿ ಕಲ್ಪನೆ ಇಂದ ವಾಸ್ತವಕ್ಕಿಳಿಯಿತು"
ಛೆ ಛೆ !! ಎಂದುಕೊಂಡು ಹೊತ್ತ ಆವೇದನೆಯಿಂದ ಹೊರಬಂದು , ಕಣ್ ಹನಿ ಒರೆಸಿಕೊಳ್ಳುತ್ತಾ. ದುಗುಡವ ಮರೆಯಲು ಧೂಮಪಾನವನ್ನಾಶ್ರಯಿಸಿ, ( Ye duniya yeh mehafir mere kaamki nahi ) ಎಂದು ಮನದಲ್ಲೇ ಗುನುಗುತ್ತ ಹೊಸ್ತಿಲಿನ್ದೊರ ಹೊರಟೆ.


Rating
No votes yet

Comments