ನನ್ನ ಅಪ್ಪ
ನನ್ನ ಅಪ್ಪ
ಹಸಿರು ಹಸಿರು ಹಸಿರು
ಹಸಿರೊಂದಿಗೆ ಒಂದಾಗುತ್ತಿವೆ ನನ್ನ ಉಸಿರು
ದುಃಖದಿ ಬಂದು ಕುಳಿತಿರುವೆ
ಕಂಬನಿಯ ಕಣ್ಣಲಿ ತಂದಿರುವೆ
ಕನಸುಗಳ ಸಾಲನು ಕಟ್ಟಿರುವೆ
ಜನ್ಮ ಕೊಟ್ಟ ತಂದೆಯು
ಜೊತೆ ಇಲ್ಲದೆ ಹೋದರಲ್ಲ
ಪ್ರೀತಿಯ ತೋರಿಸಿ
ನಾ ಪ್ರೀತಿಸಲು ಇಲ್ಲವಲ್ಲ
ವಿದ್ಯೆಯು ಕೊಟ್ಟು
ನಾ ಕಲಿತ ವಿದ್ಯೆ ನೋಡಲಿಲ್ಲ
ಸಿಹಿತಿನಿಸುಗಳನ್ನು ಕೊಟ್ಟರು
ಸಿಹಿಮಾತನಾಡಲು ಇಲ್ಲವಲ್ಲ
ಆಣ್ಣ ತಮ್ಮ ಅಕ್ಕ ತಂಗಿಯರ ಕೊಟ್ಟರು
ಅವರ ಸುಖ ಸಂತೋಷ ನೋಡಲಿಲ್ಲ
ಆಸ್ತಿ ಆಂತಸ್ತು ಕೊಟ್ಟು
ಅದರ ಸುಖ ಅನುಭವಿಸಲಿಲ್ಲ
ಒಂದನ್ನು ಮಾತ್ರ ಕೇಳುವೆ ಅಪ್ಪ
ಕನಸಿನಲ್ಲಿ ನಾ ಕಾಣಲು ಬಾ ಅಪ್ಪ
ಸುಗುಣ ಪುಜಾರಿ
Rating