ನನ್ನ ಇತ್ತೀಚಿನ ಓದು -ಡಾ||ಶಾಂತಿನಾಥ ದೇಸಾಯಿ ಅವರ ಸಮಗ್ರ ಕಥೆಗಳು
ಇತ್ತೀಚೆಗೆ ’ಡಾ||ಶಾಂತಿನಾಥ ದೇಸಾಯಿ ಅವರ ಸಮಗ್ರ ಕಥೆಗಳು’ ಓದಿದೆ. ಹಿಂದೆ ಅವರ ’ಓಂ ಣಮೋ’ ಕಾದಂಬರಿ ಓದಿದ್ದೆನಾದರೂ ಅವರು ಕಥೆಗಳನ್ನು ಬರೆದಿರುವುದು ನನಗೆ ಗೊತ್ತಿರಲಿಲ್ಲ. ಇಲ್ಲಿ ನಲವತ್ತೊಂಭತ್ತು ಕತೆಗಳು ಇದ್ದು ಎಲ್ಲವೂ ಓದಿಸಿಕೊಂಡು ಹೋಗುತ್ತವೆ. ಎಲ್ಲವೂ ಓದತಕ್ಕವೇ ಕೂಡ.
ಸುದೀರ್ಘ ಮುನ್ನುಡಿಯಲ್ಲಿ ಹೆಚ್ಚಿನಂಶ ದೇಸಾಯಿಯವರ ಕುರಿತೇ ಇದೆ. ಕೆಲವು ಭಾಗ ಮಾತ್ರ ಕತೆಗಳ ಬಗೆಗೆ ಇದೆ. ಅಲ್ಲಿ ಸತ್ಯದ ಬಹುಮುಖತ್ವ, ಮನಶ್ಶಾಸ್ತ್ರೀಯ ನೆಲೆ, ಅಸ್ತಿತ್ವವಾದ , ಬದುಕಿನ ಸ್ಥಗಿತ ಸ್ಥಿತಿಯಿಂದ, ಅರ್ಥ ಕಳೆದುಕೊಂಡ ಅಸಹನೀಯ ಸ್ಥಿತಿಯಿಂದ ಪಾತ್ರಗಳು ಬಿಡುಗಡೆ ಪಡೆಯುವ ಮತ್ತು ಸಂಪ್ರದಾಯದ , ನೈತಿಕತೆಯ , ಲೈಂಗಿಕತೆಯ ಕಟ್ಟುಪಾಡುಗಳನ್ನು ಪಾತ್ರಗಳು ಮೀರುವ ಕತೆಗಳು ಬಗ್ಗೆ ವಿಮರ್ಶಕ ಗಿರಡ್ಡಿ ಗೋವಿಂದರಾಜರು ಬರೆದಿದ್ದಾರೆ.
ಬಹುತೇಕ ಕತೆಗಳು ಮಧ್ಯಮವರ್ಗದವೇ ಆಗಿದ್ದು, ವೈಯುಕ್ತಿಕ ನೆಲೆಯಲ್ಲಿವೆ. ಗಂಡು-ಹೆಣ್ಣಿನ ಸಂಬಂಧಗಳ ಕುರಿತೇ ಅನೇಕ ಕತೆಗಳು. ದೇಸಾಯಿ ಅವರು ತಮ್ಮ ಪಾತ್ರಗಳ ವರ್ತನೆ , ನಿರ್ಣಯಗಳ ಬಗೆಗೆ ಯಾವದೇ ತೀರ್ಮಾನ ಕೊಡದೆ ತಟಸ್ಥವಾಗಿ ಉಳಿಯುತ್ತಾರೆ. ಬದುಕನ್ನು ಅರ್ಥಪೂರ್ಣವಾಗಿ , ಸಂಪೂರ್ಣವಾಗಿ ಅನುಭವಿಸಬೇಕು ಎನ್ನುವುದು ಅವರ ಕಾಳಜಿ ಅಂತೆ . ರಹಮತ್ ತರೀಕೆರೆ ಅವರು ಶಾಂತಿನಾಥ ದೇಸಾಯಿ ಅವರನ್ನು ಆಧುನಿಕತೆಯ ಆರಾಧಕ ಅಂತ ಕರೆದಿದ್ದಾರಂತೆ. ಖ್ಯಾತ ವಿಮರ್ಶಕ ಜಿ. ಎಸ್. ಅಮೂರ ದೇಸಾಯಿಯವರ ಎಲ್ಲ ಕಥೆಗಳ ವಿಶ್ಲೇಷಣೆ ಮಾಡಿ ಚರ್ಚಿಸಿದ್ದಾರಂತೆ.
ಪುಸ್ತಕದ ಹಿಂಬದಿಯಲ್ಲಿ ಯು. ಆರ್. ಅನಂತಮೂರ್ತಿಯವರು ಹೀಗೆ ಬರೆದಿದ್ದಾರೆ-ಬದುಕಿಗೆ ಸಂಬಂಧಿಸಿದ ಯಾವದೇ ವಿಷಯದಲ್ಲೂ ಇದೇ ಕೊನೆಯ ಮಾತು ಎಂದು ಹೇಳುವಂತಿಲ್ಲವೆಂಬುದೇ ಅವರ ಕಾಣ್ಕೆಯ ಅನನ್ಯತೆ.
ವಿಮರ್ಶಕರು ಏನೇ ಬರೆಯಲಿ, ಸಾಮಾನ್ಯ ಓದುಗರಿಗೆ ಅವು ಒಳ್ಳೆಯ ಕತೆಗಳು, ಬದುಕನ್ನು ಅರ್ಥ ಮಾಡಿಕೊಳ್ಳುವಲ್ಲಿ ಹೊಸ ಒಳನೋಟಗಳನ್ನು ಕೊಡುತ್ತವೆ ಎಂದು ನನಗೆ ಅನಿಸಿತು. ನೀವೂ ಈ ಕತೆಗಳನ್ನು ಓದಿ ಎಂದು ನನ್ನ ಶಿಫಾರಸು.
ಪುಸ್ತಕದ ಪ್ರಕಾಶಕರು - ಸಪ್ನ ಬುಕ್ ಹೌಸ್ , ಪುಟಗಳು - ೫೪೦ , ಬೆಲೆ ರೂ ೨೨೫.೦೦.
Comments
ಉ: ನನ್ನ ಇತ್ತೀಚಿನ ಓದು -ಡಾ||ಶಾಂತಿನಾಥ ದೇಸಾಯಿ ಅವರ ಸಮಗ್ರ ಕಥೆಗಳು
ಉ: ನನ್ನ ಇತ್ತೀಚಿನ ಓದು -ಡಾ||ಶಾಂತಿನಾಥ ದೇಸಾಯಿ ಅವರ ಸಮಗ್ರ ಕಥೆಗಳು
In reply to ಉ: ನನ್ನ ಇತ್ತೀಚಿನ ಓದು -ಡಾ||ಶಾಂತಿನಾಥ ದೇಸಾಯಿ ಅವರ ಸಮಗ್ರ ಕಥೆಗಳು by ramaswamy
ಉ: ನನ್ನ ಇತ್ತೀಚಿನ ಓದು -ಡಾ||ಶಾಂತಿನಾಥ ದೇಸಾಯಿ ಅವರ ಸಮಗ್ರ ಕಥೆಗಳು
In reply to ಉ: ನನ್ನ ಇತ್ತೀಚಿನ ಓದು -ಡಾ||ಶಾಂತಿನಾಥ ದೇಸಾಯಿ ಅವರ ಸಮಗ್ರ ಕಥೆಗಳು by ramaswamy
ಉ: ನನ್ನ ಇತ್ತೀಚಿನ ಓದು -ಡಾ||ಶಾಂತಿನಾಥ ದೇಸಾಯಿ ಅವರ ಸಮಗ್ರ ಕಥೆಗಳು