ನನ್ನ ಉಸಿರು -ಶ್ರೀ ಗುರು
ನನ್ನ ಉಸಿರಾಗಿ
ನನ್ನ ಜೀವನಾಡಿಯಾಗಿ
ಸಲುಹಿರುವೆ ಈ ತನಕ
ಓ ಗುರು ರಾಘವೇಂದ್ರ
ಮುಂದೆಯೂ ಸಲಹು ಶ್ರೀ ಗುರುವೇ
ಬಂದಿರುವೆ ಹೇಗೋ ಈ ಲೋಕದಿ
ಕರ್ಮಫಲ ಬಂಧಿಯಾಗಿ
ಸಂಯೋಗ ವಿಯೋಗ ಚಕ್ರವ್ಯೂಹದಲಿ
ಸಿಲುಕಿರುವ ಎನಗೆ
ಕರುಣಿಸು ನಿನ್ನ ಚರಣದಾಸಯೋಗ
ನೀನೇ ಸರ್ವಲೋಕ ಹಿತೈಷಿ
ಭವರೋಗ ಹರಣ ವೈದ್ಯನು
ಪರಿಹರಿಸು ಈ ಮಾಯಾ ವಾಸನಾ
ಈ ಸಂಸಾರಚಕ್ರದಿ ಮುಕ್ತಗೊಳಿಸು
ಸರ್ವಶಕ್ತ ಶ್ರೀ ಗುರುವೇ ಓ ಗುರುವೇ
ಶ್ರೀ ನಾಗರಾಜ್
Rating