ನನ್ನ ಕಥೆಯ ಹೇಳಿಕೊಂಡರೆ ಅಳುವೆ ನೀನೇಕೆ?
ನನ್ನ ಕಥೆಯ ಹೇಳಿಕೊಂಡರೆ ಅಳುವೆ ನೀನೇಕೆ?
||ನಾ ನನ್ನ ಕಥೆಯ ಹೇಳಿಕೊಂಡರೆ
ಅಳುವೆ ನೀನೇಕೆ
ನನ್ನೀ ಹೃದಯದ ದುರವಸ್ಥೆ ಹೀಗಾಗಿರೆ
ಅಳುವೆ ನೀನೇಕೆ||
ಈ ನೋವು ಈ ಕಷ್ಟ ನನ್ನದಾದರೂ
ಸಹಿಸುವೆ ನೀನೇಕೆ
ಈ ಕಣ್ಣೀರು ನನ್ನದಾದರೂ ನಿನ್ನ ಕಣ್ಣಿಂದ
ಹರಿದಿದೆ ಇಂದೇಕೆ
ನನ್ನೀ ನೋವಿನಗ್ನಿಯನು ನಾನೇ ಹಚ್ಚಿರೆ
ಅಳುವೆ ನೀನೇಕೆ
||ನಾ ನನ್ನ ಕಥೆಯ ಹೇಳಿಕೊಂಡರೆ
ಅಳುವೆ ನೀನೇಕೆ||
ಬಹಳಷ್ಟು ಕಣ್ಣೀರು ಹರಿಸಿಯಾಗಿದೆ
ಬಿಡು ನಾನಿನ್ನು ಅಳಲಾರೆ
ನಾ ನೆಮ್ಮದಿಯ ಕೆಡಿಸಿಕೊಂಡು
ನಿನ್ನ ನೆಮ್ಮದಿಯನೂ ಕೆಡಿಸಲಾರೆ
ಕಣ್ಣೀರು ವಿನಾಶದ ಸೂಚನೆ ನೀಡುತಿರೆ
ಅಳುವೆ ನೀನೇಕೆ
||ನಾ ನನ್ನ ಕಥೆಯ ಹೇಳಿಕೊಂಡರೆ
ಅಳುವೆ ನೀನೇಕೆ||
ಈ ಅಶ್ರುಧಾರೆ ನಿಲ್ಲದಿರೆ ಕೇಳು
ನಾನೂ ಅತ್ತು ಬಿಡುವೆ
ನನ್ನ ಕಣ್ಣೀರಿನಲ್ಲಿ ಆ ಚಂದ್ರ
ತಾರೆಯರ ಮುಳುಗಿಸಿಬಿಡುವೆ
ಈ ಸೃಷ್ಟಿಯ ವಿನಾಶವಾಗಬಹುದು
ಅಳುವೆ ನೀನೇಕೆ
||ನಾ ನನ್ನ ಕಥೆಯ ಹೇಳಿಕೊಂಡರೆ
ಅಳುವೆ ನೀನೇಕೆ||
******
ಇದು ಇನ್ನೊಂದು ಭಾವಾನುವಾದದ ಯತ್ನ!
ಮೂಲ ಗೀತೆ:
ಚಿತ್ರ: ವೊ ಕೌನ್ ಥೀ
ಗಾಯಕರು: ಲತಾ ಮಂಗೇಶ್ಕರ್
ಜೋ ಹಮ್ ನೇ ದಾಸ್ತಾನ್ ಅಪ್ನೀ ಸುನಾಯೀ ಆಪ್ ಕ್ಯೋಂ ರೋಯೇಂ
ತಬಾಹಿ ತೊ ಹಮಾರೇ ದಿಲ್ ಪೆ ಆಯೀ ಆಪ್ ಕ್ಯೋಂ ರೋಯೇಂ
ಹಮಾರಾ ದರ್ದ್-ಒ-ಘಮ್ ಹೈ ಯಹ್ ಇಸೆ ಕ್ಯೋಂ ಆಪ್ ಸಹ್ ತೇ ಹೈಂ
ಯಹ್ ಕ್ಯೋಂ ಆಂಸೂ ಹಮಾರೇ ಆಪ್ ಕೀ ಆಂಖೋಂ ಸೇ ಬಹತೀ ಹೈಂ
ಘಮೋಂ ಕೀ ಆಗ್ ಹಮ್ ನೇ ಖುದ್ ಲಗಾಯೀ ಆಪ್ ಕ್ಯೋಂ ರೋಯೇ
ಜೋ ಹಮ್ ನೇ ದಾಸ್ತಾನ್ ಅಪ್ನೀ ಸುನಾಯೀ ಆಪ್ ಕ್ಯೋಂ ರೋಯೇಂ
ಬಹುತ್ ರೋಯೇ ಮಗರ್ ಅಬ್ ಆಪ್ ಕೀ ಖಾತಿರ್ ನ ರೋಯೆಂಗೇ
ನ ಅಪ್ನಾ ಚೈನ್ ಖೋಕರ್ ಆಪ್ ಕಾ ಹಮ್ ಚೈನ್ ಖೋಯೇಂಗೇ
ಖಯಾಮತ್ ಆಪ್ ಕೇ ಅಶ್ಕೋಂ ನೇ ಡಾಯೀ ಆಪ್ ಕ್ಯೋಂ ರೋಯೇ
ಜೋ ಹಮ್ ನೇ ದಾಸ್ತಾನ್ ಅಪ್ನೀ ಸುನಾಯೀ ಆಪ್ ಕ್ಯೋಂ ರೋಯೇಂ
ನ ಯಹ್ ಆಂಸೂಂ ರುಖೆ ತೋ ದೇಖಿಯೇ ಫಿರ್ ಹಮ್ ಭೀ ರೋಯೇಂಗೇ
ಹಮ್ ಅಪ್ನೆ ಆಂಸೂವೋಂ ಮೆ ಚಾಂದ್ ತಾರೋಂ ಕೋ ಡುಬಾ ದೇಂಗೇ
ಫನಾಹ ಹೋ ಜಾಯೆಗೀ ಸಾರಿ ಖುದಾಯಿ ಆಪ್ ಕ್ಯೋಂ ರೋಯೇ
ಜೋ ಹಮ್ ನೇ ದಾಸ್ತಾನ್ ಅಪ್ನೀ ಸುನಾಯೀ ಆಪ್ ಕ್ಯೋಂ ರೋಯೇಂ
***************************