ನನ್ನ ಕನಸು
ಯಾರೋ ನೀನು ?
ನನ್ನ ಕಣ್ಣು ತುಂಬಿ ಬಂದಾಗ ನೆನಪಾದೆ ನೀನು
ಕಣ್ಣೀರು ಕೆನ್ನೆಗಿಳಿಯುವ ಮುನ್ನ
ಕೆನ್ನೆ ಬಿಸಿ ಸ್ಪರ್ಶ ತಿಳಿಯುವ ಮುನ್ನ
ಏನಾಯಿತೋ ಎಂದು ಚಡಪಡಿಸಿದೆ ನಿನ್ನ ಮನ.
ನನ್ನ ಮನ ಅತೀವ ಖುಷಿ ಆದಾಗ ನೆನಪಾದೆ ನೀನು
ನನ್ನ ಮನದ ಸಂತಸ ನನಗರಿವಾಗುವ ಮುನ್ನ
ನನ್ನ ತುಟಿಯಲ್ಲಿ ನಗುವರಳುವ ಮುನ್ನ
ಸಂತೋಷದಿಂದ ನಲಿದಾಡುವುದು ಯಾಕೋ ನಿನ್ನ ಮನ.
ಚಳಿಯಿಂದ ನಡುಗುತಿರೆ ನಾನು
ನನ್ನ ನಡುಕ ಕೈ ಕಾಲು ಮುಟ್ಟುವ ಮುನ್ನ
ಹಲ್ಲಿನ ಕಟ ಕಟ ಶುರುವಾಗುವ ಮುನ್ನ
ಬಿಗಿದಪ್ಪಿಕೊಳ್ಳ ಬಯಸುವುದು ಹೇಗೋ ನಿನ್ನ ಮನ.
ಬಿಸಿಲಲ್ಲಿ ಬಿಸಿಯಿಂದ ಬೇಯುತ್ತಿರೆ ನಾನು
ಬಿಸಿ ತಾಪ ನನ್ನ ನೆತ್ತಿಯ ತಾಕುವ ಮುನ್ನ
ಬೆವರಿನ ಹನಿಗೂಡುವ ಮುನ್ನ
ನೆರಳಾಗುವುದು ಹೇಗೆಂದು ಯೋಚಿಸುವುದು ನಿನ್ನ ಮನ.
Rating
Comments
ಕೀರ್ತಿಯವರೆ ವಂದನೆಗಳು
ಕೀರ್ತಿಯವರೆ ವಂದನೆಗಳು
' ನನ್ನ ಕನಸು ' ಕವನ ಚೆನ್ನಾಗಿ ಮೂಡಿ ಬಂದಿದೆ, ಈ ನಿಟ್ಟಿನಲ್ಲಿ ನೀವು ಪ್ರಯತ್ನಿಸಿದರೆ ಉತ್ತಮ ಕವನಗಳನ್ನು ನೀಡ ಬಹುದು, ನಿಮ್ಮ ಸಾಹಿತ್ಯ ಪಯಣ ಯಶಸ್ವಿಯಾಗಲಿ, ಧನ್ಯವಾದಗಳು.
In reply to ಕೀರ್ತಿಯವರೆ ವಂದನೆಗಳು by H A Patil
ನಿಮ್ಮ ಪ್ರತಿಕ್ರಿಯೆ ನನ್ನ
ನಿಮ್ಮ ಪ್ರತಿಕ್ರಿಯೆ ನನ್ನ ಸಾಹಿತ್ಯ ಪಯಣಕ್ಕೆ ದಕ್ಕಿದ ಮೊದಲ ಪ್ರೋತ್ಸಾಹ, ನಿಮ್ಮ ಸಹಕಾರ ಹೀಗೆ ಇರಲಿ....
ಧನ್ಯವಾದಗಳು..
In reply to ಕೀರ್ತಿಯವರೆ ವಂದನೆಗಳು by H A Patil
ನಿಮ್ಮ ಪ್ರತಿಕ್ರಿಯೆ ನನ್ನ
ನಿಮ್ಮ ಪ್ರತಿಕ್ರಿಯೆ ನನ್ನ ಸಾಹಿತ್ಯ ಪಯಣಕ್ಕೆ ದಕ್ಕಿದ ಮೊದಲ ಪ್ರೋತ್ಸಾಹ, ನಿಮ್ಮ ಸಹಕಾರ ಹೀಗೆ ಇರಲಿ....
ಧನ್ಯವಾದಗಳು..
ಮೊದಲ ಪ್ರಯತ್ನ ಸುಂದರವಾಗಿ
ಮೊದಲ ಪ್ರಯತ್ನ ಸುಂದರವಾಗಿ ಮೂಡಿಬಂದಿದೆ ಕೀರ್ತಿಯವರೇ......ಮುಂದುವರೆಸಿ
In reply to ಮೊದಲ ಪ್ರಯತ್ನ ಸುಂದರವಾಗಿ by sumangala badami
ಸುಮಂಗಳರವರೆ ಧನ್ಯವಾದಗಳು.
ಸುಮಂಗಳರವರೆ ಧನ್ಯವಾದಗಳು.