ನನ್ನ ಕನಸು

ನನ್ನ ಕನಸು

ಯಾರೋ ನೀನು ?

ನನ್ನ ಕಣ್ಣು ತುಂಬಿ ಬಂದಾಗ ನೆನಪಾದೆ ನೀನು
ಕಣ್ಣೀರು ಕೆನ್ನೆಗಿಳಿಯುವ ಮುನ್ನ
ಕೆನ್ನೆ ಬಿಸಿ ಸ್ಪರ್ಶ ತಿಳಿಯುವ ಮುನ್ನ
ಏನಾಯಿತೋ ಎಂದು ಚಡಪಡಿಸಿದೆ ನಿನ್ನ ಮನ.
ನನ್ನ ಮನ ಅತೀವ  ಖುಷಿ ಆದಾಗ ನೆನಪಾದೆ ನೀನು
ನನ್ನ ಮನದ ಸಂತಸ ನನಗರಿವಾಗುವ ಮುನ್ನ
ನನ್ನ ತುಟಿಯಲ್ಲಿ ನಗುವರಳುವ ಮುನ್ನ
ಸಂತೋಷದಿಂದ ನಲಿದಾಡುವುದು ಯಾಕೋ ನಿನ್ನ ಮನ.
ಚಳಿಯಿಂದ ನಡುಗುತಿರೆ ನಾನು
ನನ್ನ ನಡುಕ ಕೈ ಕಾಲು ಮುಟ್ಟುವ ಮುನ್ನ
ಹಲ್ಲಿನ ಕಟ ಕಟ ಶುರುವಾಗುವ ಮುನ್ನ
ಬಿಗಿದಪ್ಪಿಕೊಳ್ಳ ಬಯಸುವುದು ಹೇಗೋ ನಿನ್ನ ಮನ.
ಬಿಸಿಲಲ್ಲಿ ಬಿಸಿಯಿಂದ ಬೇಯುತ್ತಿರೆ ನಾನು
ಬಿಸಿ ತಾಪ ನನ್ನ ನೆತ್ತಿಯ ತಾಕುವ  ಮುನ್ನ
ಬೆವರಿನ ಹನಿಗೂಡುವ ಮುನ್ನ
ನೆರಳಾಗುವುದು ಹೇಗೆಂದು ಯೋಚಿಸುವುದು ನಿನ್ನ ಮನ.
 

Rating
No votes yet

Comments

Submitted by H A Patil Fri, 10/05/2012 - 11:58

ಕೀರ್ತಿಯವರೆ ವಂದನೆಗಳು
' ನನ್ನ ಕನಸು ' ಕವನ ಚೆನ್ನಾಗಿ ಮೂಡಿ ಬಂದಿದೆ, ಈ ನಿಟ್ಟಿನಲ್ಲಿ ನೀವು ಪ್ರಯತ್ನಿಸಿದರೆ ಉತ್ತಮ ಕವನಗಳನ್ನು ನೀಡ ಬಹುದು, ನಿಮ್ಮ ಸಾಹಿತ್ಯ ಪಯಣ ಯಶಸ್ವಿಯಾಗಲಿ, ಧನ್ಯವಾದಗಳು.