ನನ್ನ ಕನ್ನಡ ನಾಡು.
ನನ್ನ ಕನ್ನಡ ನಾಡಿದು
ನನ್ನ ನಾಡಿದು ನನ್ನದು
ಚಿನ್ನ ಬೆಳೆವ ಬೀಡಿದು
ಕನ್ನಡದ ಮಣ್ಣಿದು.
ಭವ್ಯ ಚರಿತೆಯ ನಾಡಿದು
ಶಿಲ್ಪಕಲೆಗಳ ಬೀಡಿದು
ರನ್ನ ಪಂಪರಾಡಿದಂತ
ಸಮಗೀತಮಯ ನಾಡಿದು.
ಕಿವಿಗಿಂಪು ದನಿಯ ನುಡಿವ
ಕವಿಪುಂಗವರ ಬೀಡಿದು
ಹಸಿರ ಸೀರೆಯಲಿ ಕಂಗೊಳಿಸುವ
ರೈತ ಜನರ ನಾಡಿದು.
ಸೊಬಗಿನಿಂದ ಹರಿದು ಬರುವ
ಕಾವೇರಿಯಾ ಬೀಡಿದು
ಕಲರವಗಳ ಮೂಡಿಸುವ
ಪಕ್ಷಿದಾಮ ನಾಡಿದು.
ಹಲವು ಜಾತಿ ಹಲವು ಮತಗಳ
ವೈವಿಧ್ಯಮಯ ಬೀಡಿದು
ಬಣ್ಣ ಬಣ್ಣದ ಕನಸುಗಳ
ನನಸುಗೊಳಿಸುವ ನಾಡಿದು.
ಎಷ್ಟು ನುಡಿಯ ನುಡಿದರು
ಮುಗಿಯದಂತ ಹಾಡಿದು
ಕೋಟಿ ಜನ್ಮ ಪಡೆದರು
ಕರುನಾಡೇ ನನ್ನದು.
ವಸಂತ್
Rating
Comments
ಉ: ಚೆನ್ನ ಮಲ್ಲಿಕಾರ್ಜುನ ಮಡಿಲಿಗೆ ಒಂದಷ್ಟು ವಚನಗಳು.