ನನ್ನ ಜೀವನ-ಚೇತನ
ಜ್ಞಾನ-ಅಜ್ಞಾನ ಮತ್ತು ವಿದ್ಯೆ
ತಿಳಿದಷ್ಟೂ ತಿಳಿಯಬೇಕೆನಿಸುವುದೇ ಜ್ಞಾನ. ಜ್ಞಾನ-ಅಜ್ಞಾನವನ್ನು ವಿಧಿವತ್ತಾಗಿ ವಿವರಿಸಿ ವಿಶ್ಲೇಷುವುದೇ ವಿದ್ಯೆ. ತಿಳಿದಷ್ಟೂ ತಿಳಿಯಲು ಹೊರಟವರು ನಾವು. ತಿಳಿದಿದ್ದಾಯಿತು ಎನ್ನಿಸಿದ ಕೂಡಲೆ ನಾವು ಮುಂದೆ ಹೊರಡದೇ ನಿಂತಲ್ಲೇ ನಿಂತು ಬಿಡುತ್ತೇವೆ. ಹಾಗೆ ನಿಲ್ಲುವುದು ಬದುಕಿನ ರೀತಿಯಲ್ಲ.ನಮಗೆ ಸೇರದ ಸಂಗತಿಗಳ ನಡುವೆಯೆ ನಮ್ಮ ಬದುಕು ಇದೆ ಎಂಬುದನ್ನು ನೋಡುತ್ತಲೆ ಇದ್ದೇವೆ; ಬದುಕಿದ್ದೇವೆ; ಬದುಕಲೆ ಬೇಕು. ನಮಗೆ ಸೇರದ ವಿಷಯಗಳ ಬಗ್ಗೆ ಚಿಂತಿಸುತ್ತೇವೆ; ಹಾಗಿ ಚಿಂತಿಸುವುದೇ ಜೀವಂತಿಕೆಯ ಲಕ್ಷಣವೇನೋ ಎನ್ನಿಸುತ್ತಲೂ ಇರುತ್ತದೆ. ಹಾಗೆ ಚಿಂತಿಸುವಂತೆ ಮಾಡುವುದೇ ನಿಜವಾದ ಜ್ಞಾನರ್ಜನೆಯ ಮೊದಲ ಹಂತ. ಹಾಗೆ ಮುಂದುವರಿಯುವುದೂ ಕೂಡ. ಹದಗೆಟ್ಟಿರುವುದನ್ನೆಲ್ಲ ನೋಡುತ್ತ ಹದವರಿತು ಬದುಕುವುದು ಹೇಗೆಂದು ಅರಿಯವುದೇ ಆಗಿರುತ್ತದೆ. ಅಂತಹ ಚಿಂತೆಯಿಂದಲೇ ಚಿಂತನೆಯೂ ಬರುತ್ತದೆ. ಅದು ಬರೀ ಅಕ್ಷರ ವಿದ್ಯೆಯಲ್ಲ. ಅಂಕಗಳಿಸುವು ವಿದ್ಯೆಯಲ್ಲ; ಅನುಭವಕ್ಕೆ ಬೆಲೆ ತೆರಬೇಕಾದ ಮನಸ್ಸು. ಜ್ಞಾನರ್ಜನೆಗಾಗಿಯೆ ಮಾಡಬೇಕಾದ ತಪಸ್ಸು.-
-ಎಚ್.ಶಿವರಾಂ
[http://youthtimes.b…|ಜೀವನ-ಚೇತನ]