ನನ್ನ ಪ್ರೀತಿ ಮತ್ತು ನಿನ್ನ ಚಿಕನ್!
ಮನೆಯಲಿ ನಿರ್ಭಂದ ವಿರುವುದರಿಂದ
ನಿನಗೆ ಕಾಕಾ ಹೋಟೆಲ್ ನಲ್ಲೆ
ಚಿಕನ್ ಕೊಡಿಸುವೆ…
ನೀನು ಚಪ್ಪರಿಸಿ ತಿನ್ನುವಾಗ
ನನ್ನ ಹೊಟ್ಟೆ ಯೊಳಗೆ ಓಡುವ
ನೂರಾರು ನರಿಗಳ, ಹಂದಿಗಳ ಕಾಟವನ್ನು
ಸಹಿಸಿಕೊಳ್ಳುವೆ…
ಕೈ ತೊಳೆಯುವ ನೆಪದಲ್ಲಿ
ಕಂಪನಿ ನೀಡುವುದಕ್ಕಾಗಿ ತಿಂದ
ಸ್ಯಾಂಡ್ವಿಚ್ ನೆಲ್ಲವ ನಿನಗೆ
ತಿಳಿಯದಂತೆ ಕಕ್ಕುವೆ..
ನಿನಗೆ ಚಿಕನ್ ಇಷ್ಟ,
ನನಗೆ ನೀನು, ನಿನ್ನ ನಗು
ಅಂತಂದ್ರೆ ಪ್ರಾಣ….
ನನ್ನ ನಿನ್ನ ನಡುವೆ ಕೊಳಿಯೇನು,
ಗಾಳಿಯೂ
ಬರದಂತೆ ಕಾಪಾಡುವೆ..!
Rating
Comments
ಉ: ನನ್ನ ಪ್ರೀತಿ ಮತ್ತು ನಿನ್ನ ಚಿಕನ್!