ನನ್ನ ಪ್ರೇಯಸಿ

ನನ್ನ ಪ್ರೇಯಸಿ

ಮಾತಿನಲ್ಲಿ ಹೇಳಲಾರೆನೂ..,ರೇಖೆಯಲ್ಲಿ ಗೀಚಲಾರೆನೂ..,
ಆದರೂನೂ ಹಾಡದೇನೆ ಉಳಿಯಲಾರೆನು,
ಅಂತ ರೂಪಸಿ,ನನ್ನ ಪ್ರೇಯಸಿ,ಎಲ್ಲಿ ಇರುವಳೋ ನನ್ನ ಕಾಯಿಸಿ,
ನಾನು ಪ್ರೇಮ ರೋಗಿ,ದಯಮಾಡಿ ವಾಸಿ ಮಾಡಬೇಡಿ.
ಅಂತ ರೂಪಸಿ,ನನ್ನ ಪ್ರೇಯಸಿ,ಒಮ್ಮೆ ಅವಳಿಗೆ ನನ್ನ ತೋರಿಸಿ,

ಕಣ್ಣಲ್ಲಿದೆ ಆ ಕಣ್ಣಲ್ಲಿದೆ,ಹೊಂಬೆಳಕಿನ ನವ ನೀಲಾಂಜನ,
ಇನ್ನೆಲ್ಲಿದೆ ಆಹಾ.,ಇನ್ನೆಲ್ಲಿದೆ,ಹೂ ಮನಸಿನ ಆ ಮಧುಗುಂಜನ,
ಬೇರೆಯೇನೂ ಕಾಣಲಾರೆ,ಯಾರ ನಾನು ದೂರಲಾರೆ,
ಸಾಕು ಇನ್ನು ದೂರವನ್ನು ತಾಳಲಾರೆನೂ,
ನನ್ನ ಕನಸಿನಲ್ಲಿ ದಯಮಾಡಿ ಪಾಲು ಕೇಳಬೇಡಿ,
ಅಂತ ರೂಪಸಿ,ನನ್ನ ಪ್ರೇಯಸಿ,ಒಮ್ಮೆ ಅವಳಿಗೆ ನನ್ನ ತೋರಿಸಿ,
//ಮಾತಿನಲ್ಲಿ ಹೇಳಲಾರೆನೂ..,//
ನಗೆಯಲ್ಲಿದೆ ಆ ಬಗೆಯಲ್ಲಿದೆ,ಬಗೆಹರಿಯದಾ ಆ ಅವಲೋಕನಾ,
ನಡೆಯಲ್ಲಿದೆ ಆ ನುಡಿಯಲ್ಲಿದೆ,ತಲೆ ಕೆಡಿಸುವಾ ಆ ಆಮಂತ್ರಣಾ,
ಕನಸಿಗಿಂತ ಚೆಂದವಾಗಿ,ನಳಿಸದಂತ ಗಂಧವಾಗಿ,
ಮೊದಲ ಬಾರಿ ಕಂಡ ಕ್ಷಣವೇ ಬಂದಿಯಾದೇನೂ,
ಹೋದೆ ನಾನು ಕಳೆದು ದಯಮಾಡಿ ಪತ್ತೆ ಮಾಡಬೇಡಿ,
ಅಂತ ರೂಪಸಿ,ನನ್ನ ಪ್ರೇಯಸಿ,ಒಮ್ಮೆ ಅವಳಿಗೆ ನನ್ನ ತೋರಿಸಿ,
ಮಾತಿನಲ್ಲಿ ಹೇಳಲಾರೆನೂ..,ರೇಖೆಯಲ್ಲಿ ಗೀಚಲಾರೆನೂ..,
ಆದರೂನೂ ಹಾಡದೇನೆ ಉಳಿಯಲಾರೆನು,
ಅಂತ ರೂಪಸಿ,ನನ್ನ ಪ್ರೇಯಸಿ,ಎಲ್ಲಿ ಇರುವಳೋ ನನ್ನ ಕಾಯಿಸಿ,
ನಾನು ಪ್ರೇಮ ರೋಗಿ,ದಯಮಾಡಿ ವಾಸಿ ಮಾಡಬೇಡಿ.
ಅಂತ ರೂಪಸಿ,ನನ್ನ ಪ್ರೇಯಸಿ,ಒಮ್ಮೆ ಅವಳಿಗೆ ನನ್ನ ತೋರಿಸಿ,

Rating
No votes yet