ನನ್ನ ಬದುಕಿನ ಅತಿ ಕೆಟ್ಟ ಘಳಿಗೆಗಳು - ಇದಕ್ಕೆ ಪರಿಹಾರ ಇಲ್ಲವೇ??

ನನ್ನ ಬದುಕಿನ ಅತಿ ಕೆಟ್ಟ ಘಳಿಗೆಗಳು - ಇದಕ್ಕೆ ಪರಿಹಾರ ಇಲ್ಲವೇ??

ಕಳೆದ ವಾರ ಕೆಲವು ಕ್ಷುಲ್ಲಕ ಕಾರಣಗಳಿಗಾಗಿ ಜಗಳವಾಡಿ ನಮ್ಮ ಸಂಭಂಧಿಕರ ಮನೆಯ ಸದಸ್ಯರೊಬ್ಬರನ್ನು ತೀರ ಹೀನಾ ಮಾನವಾಗಿ
ಬಯ್ದಾಡಿದೆ. ಕೆಲವು ಸಹ್ಯವೆನಿಸದ ಪದಗಳನ್ನು ಬಳಸಿ ನಿಂದಿಸಿದ್ದೂ ಉಂಟು. ಆ ಜಗಳಕ್ಕೆ ಸುಮಾರು ೮೦% ಕಾರಣ ನಾನೆ ಎಂಬುದೂ ನನಗೆ ಅರಿವಿತ್ತು.
ಬಹಳಷ್ಟು ತಪ್ಪು ನನ್ನದೇ ಎಂಬುದೂ ನನಗೆ ಗೊತ್ತಿತ್ತು. ಆದರೆ ಜಗಳವಾಡಿದಾಗ ಹಲವು ಕಾರಣಗಳಿಂದಾಗಿ ನನ್ನ ಮನಸ್ಸು
ಅತ್ಯಂತ ಕೆಟ್ಟಸ್ಥಿತಿಯಲ್ಲಿತ್ತು. ಅದನ್ನು ಅವರ್ಯಾರೂ ಅರ್ಥ ಮಾಡಿಕೊಂಡಿರಲಿಲ್ಲ ಅಷ್ಟೆ.

ಇದೆಲ್ಲಾ ಆಗಿ ಆ ವ್ಯಕ್ತಿಗೆ ಬಹಳ ಬೇಜಾರಾಗಿದೆ. ಇದು ಮನೆಯಲ್ಲಿ ಎಲ್ಲರಿಗೂ ತಿಳಿದಿದೆ..

ಸರಿ ನಾನು ಮಾಡಿದ ತಪ್ಪನ್ನು ನಾನೆ ಸರಿಮಾಡಿಕೊಳ್ಳಬೇಕೆಂದು ಆ ವ್ಯಕ್ತಿಗೆ, ಮನೆಯವರಿಗೆ ಇನ್ನಿಲ್ಲದಂತೆ ತಪ್ಪನ್ನು ಮನ್ನಿಸುವಂತೆ ಕೇಳಿಕೊಂಡಿದ್ದೇನೆ. ಅವತ್ತಿನ ದಿನ ನಾನಿದ್ದ ಮನಃಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದೇನೆ.
(ಯಾವುದೋ ಕೆಲವು ಘಟನೆಗಳಿಗಾಗಿ ತೀರ ಹೃದಯಾಘಾತವಾಗಿ ಸಾವಿನಂಚಿಗೆ ಬಂದ ಸ್ಥಿತಿಯಲ್ಲಿ ಅವತ್ತು ನಾನಿದ್ದೆ) ಅವರು ಸುತಾರಾಂ ಒಪ್ಪಿಲ್ಲ. ಬಹಳ ಸಜ್ಜನರಾದ ಆ ಕುಟುಂಬದವರನ್ನು ನಿಂದಿಸಿದ್ದಕ್ಕಾಗಿ ಹಲವು ಬಾರಿ ಪೇಚಾಡಿದ್ದೇನೆ. ಪರಿಸ್ಥಿತಿ ಎಲ್ಲಿಗೆ ಹೋಗಬಹುದೆಂದರೆ ಅವರ ಮತ್ತು ನಮ್ಮ ಸಂಭಂಧ ಶಾಶ್ವತವಾಗಿ ಮುರಿದು ಹೋಗಬಹುದು.

ಇಂತಹ ತೊಂದರೆ ಗಳಿಗೆ ಪರಿಹಾರಗಳೇ ಇಲ್ಲವೇ??

(ಸಂಸಾರ ಗುಟ್ಟು, ವ್ಯಾಧಿ ರಟ್ಟು ಅನ್ನುವಂತೆ ತೀರ ಫ್ಯಾಮಿಲಿ ಮ್ಯಾಟರ್ ನೆಲ್ಲಾ ಇಲ್ಲಿ ಬಿಚ್ಚಿಟ್ಟಿಲ್ಲ. ಪ್ರಸ್ತುತಪಡಿಸಿರುವ
ವಿಶಯ ಅಪೂರ್ಣ ಎನ್ನಿಸುವುದಾದರೆ ಕ್ಷಮೆಇರಲಿ)

Rating
No votes yet

Comments