ನನ್ನ ಮಗುದೊಂದು ವಾರ

ನನ್ನ ಮಗುದೊಂದು ವಾರ

ಹಿಂದಿನೆರಡು ವಾರಗಳ ಓದಿನ ಗತಿಯನ್ನು ಕಾಯ್ದುಕೊಳ್ಳಲಾಗಲಿಲ್ಲ .
ಅದರೂ ಒಂದೆರಡು ಮಯೂರಗಳನ್ನು ಇನ್ನೊಮ್ಮೆ ಓದಿ ಇಟ್ಟೆ.
ಡಿಜಿಟಲ್ ಲೈಬ್ರರಿಯಿಂದ ಇಳಿಸಿಕೊಂಡ ಅಬಚೂರಿನ ಪೋಸ್ಟ್ ಆಫೀಸು ಮತ್ತು ಇತರ ಕತೆಗಳು - ಶ್ರೀ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರದು . ಓದಿ ಮುಗಿಸಿದೆ . ಚೆನ್ನಾಗಿದೆ. ಇನ್ನೂ ಇಳಿಸಿಕೊಂಡದ್ದಿವೆ . ಓದಿದ ನಂತರ ಬರೆಯುನೆ.
ಕೌಂಡಿನ್ಯ ಎಂಬ ಪತ್ತೇದಾರಿ ಕಾದಂಬರಿಕಾರರ ಬಗ್ಗೆ ಅಭಿಮಾನಿಯೊಬ್ಬರು ಸಂಪದದಲ್ಲಿ ಬರೆದಿದ್ದರು . ಅವರ ಕಾದಂಬರಿ ಇದ್ದ ಸ್ಪೈ ಎಂಬ ತಿಂಗಳ ಪತ್ರಿಕೆಯೊಂದನ್ನು ಕೊಂಡು ಓದಿದೆ. ಪರವಾಗಿಲ್ಲ .
ಈ ಮಧ್ಯೆ ಸಂಪದದಲ್ಲಿರುವ ಹರಿದಾಸ ಸಂಪುಟಕ್ಕೆ ಮೂವತ್ನಾಲ್ಕು ಹಾಡು ಪೇರಿಸಿದ್ದೇನೆ . ಕನಿಷ್ಠ ಒಂದು ನೂರನ್ನು ಏರಿಸಬೆಕೆಂದಿದ್ದೇನೆ . ನೋಡಬೇಕು.

ಇವತ್ತು wednesday ಎಂಬ ಸಿನಿಮಾ ಟಿವಿಯಲ್ಲೇ ನೋಡಿದೆ. ಬಹಳ ಜನ ಇದರ ಬಗ್ಗೆ ಒಳ್ಳೇ ಮಾತು ಹೇಳಿದ್ದರು . ಚೆನ್ನಾಗಿದೆ .
( ಹಾಗೇ ಘಜನಿ ಎಂಬ ಸಿನಿಮಾ ಹೆಂಡತಿಯ ಬಲವಂತಕ್ಕೆ ನಾಲ್ಕು ಗಂಟೆ ಖರ್ಚು ಮಾಡಿ ನೋಡಿದ್ದೂ ಆಯಿತು. ಹಿಂಸೆ ಮತ್ತು ಒಂದಿಷ್ಟು ಪ್ರೇಮದಕತೆ ಬಿಟ್ಟರೆ ಏನೂ ಇಲ್ಲ ಅದರಲ್ಲಿ )

Rating
No votes yet

Comments